North Korea: ಸರ್ವಾಧಿಕಾರಿ ಮಗಳಿಗೆ ಉತ್ತರ ಕೊರಿಯಾ ಪಟ್ಟ ಗಿಟ್ಟುವುದು ಪಕ್ಕಾ?
ಉತ್ತರ ಕೊರಿಯಾ ಹೆಸರು ಕೇಳಿದರೆ ಸಾಕು ಜಗತ್ತಿನ ಯಾವುದೇ ದೇಶವಾದರೂ ಒಂದು ಬಾರಿ ಚಿಂತೆ ಮಾಡುತ್ತದೆ. ಯಾಕಂದ್ರೆ ಉತ್ತರ ಕೊರಿಯಾ ಆಳುತ್ತಿರುವ ಹುಚ್ಚು ದೊರೆ ಕಿಮ್ ಜಾಂಗ್ ಉನ್ ಎಲ್ಲಾ ಕಡೆ ಹವಾ ಇಟ್ಟಿದ್ದಾನೆ. ಅದರಲ್ಲೂ ಕಿಮ್ ಜಾಂಗ್ ಉನ್ ತನ್ನ ಬಳಿ ಇರುವ ನ್ಯೂಕ್ಲಿಯರ್ ಬಾಂಬ್ ಹೊರಗೆ ತೆಗೆದು ಪೋಸ್ ಕೊಟ್ಟು ಬೆದರಿಕೆ ಹಾಕುವುದು ಕಾಮನ್ ಆಗಿದೆ. ಇಂತಹ ಸಮಯದಲ್ಲೇ, ತನ್ನ ದೇಶದ ಮುಂದಿನ ಅಧಿಕಾರ ತನ್ನ ಮಗಳಿಗೆ ಸಿಗಬೇಕು ಅನ್ನೋ ಮಾಸ್ಟರ್ ಪ್ಲಾನ್ ಮಾಡಿದ್ದಾನಂತೆ!
ಬೇಡ ಅಂದ್ರೂ ಕೆಣಕುತ್ತಾ, ಸಣ್ಣಪುಟ್ಟ ವಿಷಯಕ್ಕೂ ಸರ್ವಾಧಿಕಾರಿ ವಿರುದ್ಧ ಮಾತನಾಡುತ್ತಾ ಅಮೆರಿಕ ಎಡವಟ್ಟು ಮಾಡಿಕೊಳ್ಳುತ್ತಿದೆ ಎನ್ನಬಹುದು. ಯಾಕಂದ್ರೆ ಇತ್ತೀಚೆಗೆ ಉತ್ತರ ಕೊರಿಯಾ ಗಡಿಗೆ ನುಗ್ಗಿ ಅಮೆರಿಕ ಸೇನೆ ಕಾರ್ಯಾಚರಣೆ ನಡೆಸಲು ಮುಂದಾಗಿತ್ತು ಅನ್ನೋ ಆರೋಪ ಮಾಡಲಾಗಿತ್ತು. ಹೀಗೆ ಎಲ್ಲಾ ಆರೋಪಗಳ ನಡುವೆ ಈಗ ಕಿಮ್ ಜಾಂಗ್ ಉನ್ ಇನ್ನೂ ಒಂದು ಹೆಜ್ಜೆ ಮುಂದಿಟ್ಟಿದ್ದು, ಅಮೆರಿಕ ಸೇರಿದಂತೆ ತನ್ನ ಶತ್ರುಗಳಿಗೆ ನೇರ ಎಚ್ಚರಿಕೆ ರವಾನೆ ಮಾಡಿದ್ದಾನೆ. ಇದರ ಜೊತೆಗೆ ತನ್ನ ಮಗಳಿಗೆ ಪಟ್ಟ ಕಟ್ಟಲು ಸಿದ್ಧನಾಗಿರುವ ಮುನ್ಸೂಚನೆ ಕೊಟ್ಟಿದ್ದಾನೆ!

ಸಾವಿನ ಭಯದಲ್ಲಿ ಕಿಮ್ ಜಾಂಗ್ ಉನ್?
ಅಂದಹಾಗೆ ಮತ್ತೊಂದು ಕಡೆ ಇದೀಗ ಕಿಮ್ ಜಾಂಗ್ ಉನ್‌ಗೆ ಜೀವ ಭಯ ಕಾಡುತ್ತಿದೆ ಅನ್ನೋ ಭಾರಿ ಗಂಭೀರ ಆರೋಪ ಕೇಳಿಬಂದಿದೆ. ಇದೇ ಕಾರಣಕ್ಕೆ ಇದೀಗ ತನ್ನ ಮಗಳನ್ನು ಉತ್ತರಾಧಿಕಾರಿ ಮಾಡಿ ಪೂರ್ವ ಸಿದ್ಧತೆ ನಡೆಸಿದ್ದಾನೆ ಕಿಮ್ ಎಂಬ ಚರ್ಚೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆದಿದೆ. ಹೀಗೆಲ್ಲಾ ಕಿಮ್ ಮಾಡುತ್ತಿರುವ ಬದಲಾವಣೆಗಳ ಮೇಲೆ ಅಮೆರಿಕ ಕೂಡ ಕಣ್ಣಿಟ್ಟು ಕೂತಿದೆ.












Click it and Unblock the Notifications