ಲಂಡನ್ ನಲ್ಲಿ ಚಾಕು ತೋರಿಸಿ ಒತ್ತೆಯಾಳು ಮಾಡಿಕೊಂಡ
ಲಂಡನ್, ಜೂನ್ 9: ಉದ್ಯೋಗ ಕೇಂದ್ರವೊಂದರಲ್ಲಿ ವ್ಯಕ್ತಿಯೊಬ್ಬ ಚಾಕು ತೋರಿಸಿ ಹಲವರನ್ನು ಒತ್ತೆಯಾಳಾಗಿ ಇರಿಸಿಕೊಂಡ ಘಟನೆ ಲಂಡನ್ ನ ನ್ಯೂ ಕ್ಯಾಸಲ್ ನಲ್ಲಿ ಶುಕ್ರವಾರ ನಡೆದಿದೆ ಎಂದು ನಾರ್ಥಂಬ್ರಿಯಾ ಪೊಲೀಸರು ತಿಳಿಸಿದ್ದಾರೆ. ಸ್ಥಳಕ್ಕೆ ತಜ್ಞ ಸಂಧಾನಕಾರರನ್ನು ಕಳುಹಿಸಲಾಗಿದೆ.
ಚಾಕುವನ್ನು ಹಿಡಿದ ವ್ಯಕ್ತಿಯು ಕೆಲವು ಕೆಲಸಗಾರರನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಸುಮಾರು ಎರಡೂವರೆ ಗಂಟೆಗಳ ನಂತರ ಎಲ್ಲ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.[ಮತ್ತಷ್ಟು ದಾಳಿ ಐಸಿಸ್ ನಿಂದ ಪಾಶ್ಚಿಮಾತ್ಯ ದೇಶಗಳಿಗೆ ಬೆದರಿಕೆ]

ಉದ್ಯೋಗ ಕೇಂದ್ರದ ಸುತ್ತಮುತ್ತ ಎಲ್ಲ ರಸ್ತೆಗಳನ್ನು ಬಂದ್ ಮಾಡಲಾಯಿತು. ಹತ್ತಿರದಲ್ಲಿದ್ದ ವಿದ್ಯಾರ್ಥಿಗಳ ಸಭಾಂಗಣವನ್ನು ತೆರವು ಮಾಡಲಾಯಿತು. ಮುಂಜಾಗ್ರತಾ ಕ್ರಮವಾಗಿ ಸ್ಥಳೀಯ ಮೆಟ್ರೋ ನಿಲ್ದಾಣದ ಎಲ್ಲ ರೈಲುಗಳ ಸಂಚಾರ ಸ್ಥಗಿತಗೊಳಿಸಲಾಯಿತು.
ದಾಳಿ ನಡೆಸಿದ ವ್ಯಕ್ತಿಯು ಆ ಉದ್ಯೋಗ ಕೇಂದ್ರದ ನೌಕರರಿಗೆ ಪರಿಚಿತನಾದವನು. ಈ ಘಟನೆಯಲ್ಲಿ ಯಾರಿಗೆ ಯಾವುದೇ ಗಾಯಗಳಾಗಿಲ್ಲ. ಆದರೂ ಸ್ಥಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಪೊಲೀಸರಿದ್ದಾರೆ. ಸ್ಥಳೀಯವಾಗಿ ಹಣ್ಣು ಮಾರುವ ವ್ಯಕ್ತಿ ನೀಡಿದ ಮಾಹಿತಿ ಪ್ರಕಾರ, ಹತ್ತು-ಹನ್ನೊಂದು ಮಂದಿ ಪೊಲೀಸರು ಶಸ್ತಸಜ್ಜಿತರಾಗಿದ್ದು, ಉದ್ಯೋಗ ಕೇಂದ್ರವನ್ನು ಸುತ್ತುವರಿದಿದ್ದಾರೆ.[ಉಗ್ರರ ದಾಳಿಗೆ ಬೆಚ್ಚಿದ ಲಂಡನ್, ಹೈ ಅಲರ್ಟ್ ಘೋಷಣೆ!]
ಸದ್ಯಕ್ಕೆ ದೊರಕಿದ ಮಾಹಿತಿ ಪ್ರಕಾರ ದಾಳಿಕೋರ ಒಬ್ಬನು ಮಾತ್ರ ಕಟ್ಟಡದಲ್ಲಿದ್ದು, ಒತ್ತೆಯಾಳುಗಳನ್ನೆಲ್ಲ ಬಿಡುಗಡೆ ಮಾಡಲಾಗಿದೆ.












Click it and Unblock the Notifications