51 ಜನರನ್ನು ಕೊಂದವನಿಗೆ ಕಠಿಣಾತಿಕಠಿಣ ಶಿಕ್ಷೆ..!
ನ್ಯೂಜಿಲ್ಯಾಂಡ್ನಲ್ಲಿ ಮಸೀದಿಗೆ ನುಗ್ಗಿ ಪ್ರಾರ್ಥನೆ ಮಾಡುತ್ತಿದ್ದವರ ಮೇಲೆ ಮನಸ್ಸಿಗೆ ಬಂದಂತೆ ಗುಂಡು ಹಾರಿಸಿ 51 ಜನರನ್ನು ಹತ್ಯೆಗೈದಿದ್ದ ಹಂತಕನಿಗೆ ಜೀವಿತಾವಧಿ ಶಿಕ್ಷೆಯಾಗಿದೆ. ಹಂತಕ ಬ್ರೆಂಟನ್ ಟ್ಯಾರಂಟ್ ಸಾಯುವವರೆಗೂ ಜೈಲಿನಲ್ಲೇ ಕೊಳೆಯಬೇಕಿದೆ. ಅಲ್ಲದೆ ಆರೋಪಿಗೆ ಶಿಕ್ಷೆ ಅವಧಿಯಲ್ಲಿ ಕಲ್ಪಿಸಲಾಗುವ ರಜೆ ಸೌಲಭ್ಯವನ್ನೂ ನೀಡದೆ, ಪೆರೋಲ್ ರದ್ದುಗೊಳಿಸಲಾಗಿದೆ.
Recommended Video
ಬ್ರೆಂಟನ್ ಟ್ಯಾರಂಟ್ ನ್ಯೂಜಿಲ್ಯಾಂಡ್ನಲ್ಲಿ ಇಷ್ಟು ಕಠಿಣ ಶಿಕ್ಷೆ ಪಡೆಯುತ್ತಿರುವ ಮೊದಲ ವ್ಯಕ್ತಿಯಾಗಿದ್ದಾನೆ. ಬ್ರೆಂಟನ್ ಟ್ಯಾರಂಟ್ ಕೃತ್ಯವು ಅಮಾನವೀಯ ಎಂದಿರುವ ನ್ಯೂಜಿಲ್ಯಾಂಡ್ ಕೋರ್ಟ್ ಹಂತಕನನ್ನು ಸಮಾಜದಲ್ಲಿ ಬದುಕುವ ಅರ್ಹತೆ ಇಲ್ಲದವನು ಎಂದಿದೆ.
ತೀರ್ಪು ಪ್ರಕಟಣೆ ಸಂದರ್ಭ ನ್ಯಾಯಾಧೀಶ ಕ್ಯಾಮರಾನ್ ಮಂಡೆರ್ ಹಂತಕನ ಬಗ್ಗೆ ವಿಷಾದದ ಮಾತುಗಳನ್ನಾಡಿದ್ದಾರೆ.ಜನಾಂಗೀಯವಾದದ ವಿಷ ತುಂಬಿಕೊಂಡ ಬ್ರೆಂಟನ್ ಟ್ಯಾರಂಟ್ ಸಾರ್ವಜನಿಕ ಸಮಾಜದಲ್ಲಿ ಬದುಕುವ ಅರ್ಹತೆಯನ್ನೇ ಹೊಂದಿಲ್ಲ ಎಂದು ನ್ಯಾಯಾಧೀಶರು ಹೇಳಿದ್ದಾರೆ. ಇದೇ ಕಾರಣಕ್ಕೆ ಬ್ರೆಂಟನ್ ಟ್ಯಾರಂಟ್‌ಗೆ ಪೆರೋಲ್ ರಹಿತ ಜೀವಾವಧಿ ಶಿಕ್ಷೆ ಪ್ರಕಟಿಸಲಾಗಿದ್ದು, ಈ ಮೂಲಕ ನ್ಯೂಜಿಲ್ಯಾಂಡ್ ಇತಿಹಾಸದಲ್ಲೇ ನಡೆದ ಭೀಕರ ಗುಂಡಿನ ದಾಳಿ ಪ್ರಕರಣದ ವಿಚಾರಣೆ ಮುಕ್ತಾಯವಾಗಿದೆ.

ಹೇಗೆ ನಡೆದಿತ್ತು ಭೀಕರ ದಾಳಿ..?
ಮಾರ್ಚ್ 15, 2019ರಲ್ಲಿ ಒಟ್ಟು 5 ಗನ್ ಗಳನ್ನು ಹಿಡಿದು ಕ್ರೈಸ್ಟ್‌ಚರ್ಚ್ ಮಸೀದಿಗೆ ನುಗ್ಗಿದ ಆಸ್ಟ್ರೆಲೀಯಾ ಮೂಲದ ಹಂತಕ, ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದವರ ಮೇಲೆ ಮನಬಂದಂತೆ ಗುಂಡು ಹಾರಿಸಿದ್ದ. ಮಕ್ಕಳು, ಮಹಿಳೆಯರು ಸೇರಿ 51 ಜನರನ್ನು ಹತ್ಯೆಗೈದಿದ್ದ. ಅಷ್ಟೇ ಅಲ್ಲದೆ ಮಸೀದಿಗೆ ನುಗ್ಗಿ ದಾಳಿ ಮಾಡುತ್ತಿರುವುದನ್ನು ಲೈವ್ ವಿಡಿಯೋ ಮಾಡಿಕೊಂಡಿದ್ದ ಬ್ರೆಂಟನ್ ಟ್ಯಾರಂಟ್.
ಚಿತ್ರದಲ್ಲಿ: ನ್ಯಾಯಾಲಯದಲ್ಲಿ ಆಸ್ಟ್ರೇಲಿಯಾ ಮೂಲದ ಬ್ರೆಂಟನ್ ಹ್ಯಾರಿಸನ್ ಟರೆಂಟ್(29)

ಜನಾಂಗೀಯ ವಿಷ ಕಾರುತ್ತಿದ್ದ ಬ್ರೆಂಟನ್
ಜನಾಂಗೀಯ ವಿಷ ಕಾರುತ್ತಿದ್ದ ಬ್ರೆಂಟನ್ ತನ್ನನ್ನು ಬಿಳಿಯರ ಪರ ಹೋರಾಟಗಾರ ಎಂದು ಕರೆದುಕೊಂಡಿದ್ದ. ಈ ದಾಳಿಯನ್ನು ಕಂಡು ಇಡೀ ಜಗತ್ತು ಬೆಚ್ಚಿಬಿದ್ದಿತ್ತು. ಈ ಘಟನೆ ನಂತರ ನ್ಯೂಜಿಲ್ಯಾಂಡ್ ಪ್ರಧಾನಿ ಜೆಸಿಂಡಾ ಅರ್ಡೆರ್ನ್, ಮಿಲಿಟರಿ ವೆಪನ್ ಗಳ ಮಾರಾಟವನ್ನು ದೇಶದಲ್ಲಿ ನಿರ್ಬಂಧಿಸಿದ್ದರು. ಈ ಮೂಲಕ ಸಾರ್ವಜನಿಕರಿಗೆ ಮಿಲಿಟರಿ ವೆಪನ್ಗಳು ಸಿಗುವುದನ್ನು ತಡೆದಿದ್ದರು.
ಚಿತ್ರದಲ್ಲಿ: ಮನಲ್ ಡೊಖಾನ್

ತೀರ್ಪನ್ನು ಎಲ್ಲರೂ ಸ್ವಾಗತಿಸಿದ್ದಾರೆ
ನ್ಯೂಜಿಲ್ಯಾಂಡ್ನಲ್ಲಿ ಮಸೀದಿಯಲ್ಲಿ ಹತ್ಯೆ ನಡೆದಿದಾಗಿನಿಂದಲೂ ಅದನ್ನ ತೀವ್ರವಾಗಿ ಖಂಡಿಸುತ್ತಾ ಬಂದಿದ್ದ ಜೆಸಿಂಡಾ ಅರ್ಡೆರ್ನ್, ಇಂದಿನ ತೀರ್ಪನ್ನು ಸ್ವಾಗತಿಸಿದ್ದಾರೆ. ಮುಗ್ಧರನ್ನು ಬಲಿ ಪಡೆದಿರುವ ಕ್ರೂರಿ ಇನ್ನು ಜೈಲು ಕಂಬಿಗಳ ಹಿಂದೆ ಮೌನವಾಗಿ ಮತ್ತು ಏಕಾಂಗಿಯಾಗಿ ಶಿಕ್ಷೆ ಅನುಭವಿಸಲಿದ್ದಾನೆ ಎನ್ನುವ ಮೂಲಕ ತೀರ್ಪನ್ನು ಸ್ವಾಗತಿಸಿದ್ದಾರೆ.
ಚಿತ್ರದಲ್ಲಿ: ಮಸೀದಿ ಶೂಟಿಂಗ್ ಸಂತ್ರಸ್ತ ತಾಜ್ ಮೊಹಮ್ಮದ್ ಕ್ರಮಾನ್

ನ್ಯೂಜಿಲ್ಯಾಂಡ್ ಪ್ರಧಾನಿ ಹೇಳಿದ್ದೇನು..?
ಘಟನೆ ನಡೆದಾಗಲೂ ನ್ಯೂಜಿಲ್ಯಾಂಡ್ ಪ್ರಧಾನಿ ಜೆಸಿಂಡಾ ಅರ್ಡೆರ್ನ್ ಜನಾಂಗೀಯವಾದವನ್ನು ತೀವ್ರವಾಗಿ ಖಂಡಿಸಿದ್ದರು. ಅಲ್ಲದೆ ಹಂತಕನಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಒತ್ತಾಯಿಸಿದ್ದರು. ಒಟ್ಟಿನಲ್ಲಿ ನ್ಯೂಜಿಲ್ಯಾಂಡ್ ಇತಿಹಾಸದಲ್ಲೇ ಭೀಕರ ಹತ್ಯಾಕಾಂಡ ನಡೆಸಿದ್ದ ಕ್ರೂರಿಗೆ ಕಠಿಣವಾದ ಶಿಕ್ಷೆಯನ್ನೇ ವಿಧಿಸಲಾಗಿದೆ.
-
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Banana Price: ತಮಿಳುನಾಡು ಬಿಸಿಗಾಳಿ ಎಫೆಕ್ಟ್ಗೆ ಕುಸಿದ ಬಾಳೆಹಣ್ಣು ಧಾರಣೆ: ಬೆಂಗಳೂರಿನಲ್ಲಿ ಕೆ.ಜಿಗೆ 7 ರೂಪಾಯಿ -
Summer Specail Train: ಮೈಸೂರಿನಿಂದ ಇಲ್ಲಿಗೆ ವಿಶೇಷ ಎಕ್ಸ್ಪ್ರೆಸ್ ರೈಲು, 3 ರಾಜ್ಯಗಳಿಗೆ ಅನುಕೂಲ -
April 12 Horoscope: 12 ರಾಶಿಗಳಿಗೆ ಇಂದು ಹಣ-ಪ್ರೇಮದಲ್ಲಿ ಅದೃಷ್ಟ ಯಾರಿಗೆ? ಸಂಪೂರ್ಣ ವಿವರ -
IPL 2026: ಗಿಲ್ ಮತ್ತು ಬಟ್ಲರ್ ಸ್ಫೋಟಕ ಬ್ಯಾಟಿಂಗ್, ಎಲ್ಎಸ್ಜಿ ಮಣಿಸಿದ ಗುಜರಾತ್ ಟೈಟಾನ್ಸ್ -
Asha Bhosle: ಭಾರತೀಯ ಸಿನಿಮಾ ರಂಗದ ಖ್ಯಾತ ಗಾಯಕಿ ಆಶಾ ಭೋಸ್ಲೆ ಇನ್ನಿಲ್ಲ, ಸಂಗೀತ ರಾಣಿ ಎಂದೇ ಖ್ಯಾತಿ -
Karnataka Train: ಕಲಬುರಗಿ - ಕಲ್ಯಾಣ ಕರ್ನಾಟಕದಲ್ಲಿ ರೈಲು ಪ್ರಯಾಣಿಕರ ನಿತ್ಯ ಪರದಾಟ: ಸಿದ್ದು ಮಠಪತಿ ಬರಹ -
Vijay: ನಟ, ರಾಜಕಾರಣಿ ವಿಜಯ್ ಮಹತ್ವದ ಟ್ವೀಟ್ - ಅಪ್ರಬುದ್ಧ ರಾಜಕಾರಣಿ ಎಂದ ಡಿ.ಕೆ ಶಿವಕುಮಾರ್ Tamil Nadu Assembly Election -
Bhagyalakshmi Serial: ಕೊನೆಗೂ ಭಾಗ್ಯಲಕ್ಷ್ಮೀ - ಆದಿ ಮದುವೆ, ಮೂರು ಕುಟುಂಬಗಳನ್ನು ಒಂದು ಮಾಡುವ ಟಾಸ್ಕ್ -
Transfer: ಕರ್ನಾಟಕ ಶಿಕ್ಷಕರಿಗೆ ಸಿಹಿ ಸುದ್ದಿ: ವರ್ಗಾವಣೆ ನಿಯಮಗಳಲ್ಲಿ ಮಹತ್ವ ಬದಲಾವಣೆ, ಯಾರು ಅರ್ಹರು?












Click it and Unblock the Notifications