Get Updates
Get notified of breaking news, exclusive insights, and must-see stories!

ಅಸಾಲ್ಟ್ , ಸೆಮಿ-ಆಟೋಮೆಟಿಕ್ ರೈಫಲ್ ನಿಷೇಧಿಸಿದ ನ್ಯೂಜಿಲ್ಯಾಂಡ್

ವೆಲ್ಲಿಂಗ್ಟನ್​, ಮಾರ್ಚ್ 21: ಕ್ರೈಸ್ಟ್‌ಚರ್ಚ್ ಬಳಿ ಎರಡು ಮಸೀದಿಗಳ ನಡುವೆ ನಡೆದ ಗುಂಡಿನ ದಾಳಿ ಬಳಿಕ ಎಚ್ಚೆತ್ತುಕೊಂಡಿರುವ ನ್ಯೂಜಿಲ್ಯಾಂಡ್ ಸೆಮಿ-ಆಟೋಮೆಟಿಕ್ ರೈಫಲ್‌ಗಳನ್ನು ನಿಷೇಧಿಸಿ ಆದೇಶ ಹೊರಡಿಸಿದೆ.

ಈ ಕುರಿತು ನ್ಯೂಜಿಲ್ಯಾಂಡ್ ಪ್ರಧಾನಿ ಜಸಿಂಡಾ ಆಡ್ರೆನ್ ವಿಷಯ ತಿಳಿಸಿದ್ದು, ತಕ್ಷಣದಿಂದ ಜಾರಿಗೆ ಬರುವಂತೆ ಅಸಾಲ್ಟ್​ ಮತ್ತು ಸೆಮಿ-ಆಟೋಮೆಟಿಕ್​ ರೈಫಲ್​ಗಳ ಮಾರಾಟವನ್ನು ನಿಷೇಧಿಸಿರುವುದಾಗಿ ತಿಳಿಸಿದ್ದಾರೆ.

New Zealand bans sale of assault, semi-automatic rifles

ಮಿಲಿಟರಿ ಮಾದರಿಯ ಎಲ್ಲ ಸೆಮಿ ಆಟೋಮೆಟಿಕ್​ ರೈಫಲ್​ಗಳು, ಅಸಾಲ್ಟ್​ ರೈಫಲ್​ಗಳನ್ನು ನಿಷೇಧಿಸಲಾಗಿದೆ. ಜತೆಗೆ ಹೆಚ್ಚು ಸಾಮರ್ಥ್ಯದ ಮ್ಯಾಗಜೀನ್​ಗಳು ಮತ್ತು ರೈಫಲ್​ಗಳು ಹೆಚ್ಚು ವೇಗವಾಗಿ ಗುಂಡು ಹಾರಿಸಲು ನೆರವಾಗುವ ಸಾಧನಗಳ ಮಾರಾಟವನ್ನೂ ನಿಷೇಧಿಸಲಾಗಿದೆ. ಪೊಲೀಸರ ಅನುಮತಿಯಿಲ್ಲದೆ ಯಾರೂ ಇಂತಹ ಆಯುಧಗಳನ್ನು ಖರೀದಿಸಲು ಸಾಧ್ಯವಿಲ್ಲ ಎಂದು ಜಸಿಂಡಾ ಆಡ್ರೆನ್​ ತಿಳಿಸಿದ್ದಾರೆ.

New Zealand bans sale of assault, semi-automatic rifles

ಮಸೀದಿಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ 50 ಜನರು ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಸಮಾಜ ಘಾತುಕ ಶಕ್ತಿಗಳಿಗೆ ಸುಲಭವಾಗಿ ಶಸ್ತ್ರಾಸ್ತ್ರಗಳು ಸಿಗದಂತೆ ನ್ಯೂಜಿಲೆಂಡ್​ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ.

ಕಪ್ಪು ಬಟ್ಟೆ ಧರಿಸಿದ ವ್ಯಕ್ತಿಯೋರ್ವ ಗನ್​ ಹಿಡಿದುಕೊಂಡು ನಿಂತಿದ್ದ. ಸಾಕಷ್ಟು ಬಾರಿ ಗುಂಡಿನ ಮೊರೆತ ಕೇಳಿದೆ. ಸಾಕಷ್ಟು ಜನರು ಮೃತಪಟ್ಟ ಅನುಮಾನವಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದರು.

ಒಟ್ಟು ನಾಲ್ಕು ಜನರನ್ನು ಬಂಧಿಸಲಾಗಿತ್ತು. ಪೊಲೀಸ್​ ಅಧಿಕಾರಿಗಳು ತನಿಖೆ ಮುಂದುವರೆಸಿದಿದ್ದಾರೆ. ಕ್ರಿಕೆಟ್​ ಆಟಗಾರರನ್ನು ಗುರಿಯಾಗಿಸಿಕೊಂಡೇ ಈ ದಾಳಿ ನಡೆದಿದೆಯೇ ಎನ್ನುವ ಅನುಮಾನ ವ್ಯಕ್ತವಾಗಿತ್ತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+