ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಸೋಂಕಿನ ಸಂಪೂರ್ಣ ನಿರ್ಮೂಲನೆ ಸಾಧ್ಯವಿಲ್ಲ ಎಂದು ಒಪ್ಪಿಕೊಂಡ ನ್ಯೂಜಿಲೆಂಡ್

|
Google Oneindia Kannada News

ನ್ಯೂಜಿಲೆಂಡ್, ಅಕ್ಟೋಬರ್ 04: ಕೊರೊನಾ ಸೋಂಕನ್ನು ಸಂಪೂರ್ಣವಾಗಿ ತೊಡೆದು ಹಾಕಲು ಸಾಧ್ಯವಿಲ್ಲ ಎಂಬುದನ್ನು ನ್ಯೂಜಿಲೆಂಡ್ ಸರ್ಕಾರ ಸೋಮವಾರ ಒಪ್ಪಿಕೊಂಡಿದೆ. ಇದರೊಂದಿಗೆ, ನಿರಂತರವಾಗಿ ಕೊರೊನಾ ಪ್ರಕರಣಗಳ ಏರಿಕೆಯಾಗುತ್ತಿರುವ ಆಕ್ಲೆಂಡ್‌ನಲ್ಲಿ ಲಾಕ್‌ಡೌನ್ ನಿರ್ಬಂಧಗಳ ಸಡಿಲಿಕೆಯನ್ನು ಪ್ರಧಾನಿ ಜಸಿಂಡಾ ಆರ್ಡರ್ನ್ ಘೋಷಿಸಿದ್ದಾರೆ.

ಕೊರೊನಾ ಸೋಂಕು ಪತ್ತೆಯಾದ ಆರಂಭದಲ್ಲಿ ನ್ಯೂಜಿಲೆಂಡ್ ಕಟ್ಟುನಿಟ್ಟಾದ ಲಾಕ್‌ಡೌನ್‌ ಹಾಗೂ ಚುರುಕಾದ ಸಂಪರ್ಕ ಪತ್ತೆಹಚ್ಚುವಿಕೆ ಕಾರ್ಯದ ಮೂಲಕ ಸೋಂಕನ್ನು ಶೂನ್ಯ ಮಟ್ಟದಲ್ಲಿ ನಿರ್ಮೂಲನೆ ಮಾಡಲು ಮುಂದಾಗಿತ್ತು.

ನ್ಯೂಜಿಲೆಂಡ್‌ಗೆ ಕಾಲಿಟ್ಟ ಡೆಲ್ಟಾ; ಒಂದೇ ಪ್ರಕರಣಕ್ಕೆ ಲಾಕ್‌ಡೌನ್ ಘೋಷಿಸಿದ ದೇಶನ್ಯೂಜಿಲೆಂಡ್‌ಗೆ ಕಾಲಿಟ್ಟ ಡೆಲ್ಟಾ; ಒಂದೇ ಪ್ರಕರಣಕ್ಕೆ ಲಾಕ್‌ಡೌನ್ ಘೋಷಿಸಿದ ದೇಶ

ಈಚಿನವರೆಗೂ ಸೋಂಕು ನಿರ್ಮೂಲನಾ ತಂತ್ರವನ್ನು ಅನುಸರಿಸಿತ್ತು. ಐದು ಮಿಲಿಯನ್ ಜನಸಂಖ್ಯೆಯ ಈ ದೇಶದಲ್ಲಿ ಇದುವರೆಗೂ ಕೊರೊನಾ ಸೋಂಕಿನಿಂದ 27 ಮಂದಿ ಸಾವನ್ನಪ್ಪಿರುವುದು ವರದಿಯಾಗಿದೆ. ಇದಾಗ್ಯೂ ಸೋಂಕಿನ ಸಂಪೂರ್ನ ನಿರ್ಮೂಲನೆ ಸಾಧ್ಯವಿಲ್ಲ ಎಂದು ಸೋಮವಾರ ಒಪ್ಪಿಕೊಂಡಿದೆ.

 New Zealand Admits It Cannot Get Rid Of Coronavirus Completely

ಇತರೆ ರಾಷ್ಟ್ರಗಳು ಕೊರೊನಾ ಪ್ರಕರಣಗಳ ಏರಿಕೆ ಹಾಗೂ ಮರಣ ಸಂಖ್ಯೆ ಹೆಚ್ಚಳದಿಂದ ತತ್ತರಿಸುತ್ತಿದ್ದರೆ, ನ್ಯೂಜಿಲೆಂಡ್‌ನಲ್ಲಿ ಸಮುದಾಯ ಸೋಂಕು ಹರಡುವಿಕೆಯಿಲ್ಲದೇ ಸುರಕ್ಷಿತವಾಗಿ ಕೆಲಸದ ಸ್ಥಳಗಳು, ಶಾಲೆಗಳು ಹಾಗೂ ಕ್ರೀಡಾಂಗಣಗಳನ್ನು ತೆರೆದು ಕಾರ್ಯನಿರ್ವಹಿಸುತ್ತಿದ್ದವು.

ಆದರೆ ಆಸ್ಟ್ರೇಲಿಯಾದಿಂದ ಹಿಂದಿರುಗಿದ ಪ್ರಯಾಣಿಕರೊಬ್ಬರಿಂದ ದೇಶದಲ್ಲಿ ಡೆಲ್ಟಾ ರೂಪಾಂತರ ಹರಡಿದ್ದು, ಈ ರೂಪಾಂತರದಿಂದ ಎಲ್ಲವೂ ಬದಲಾಗುವಂತಾಯಿತು.

ಡೆಲ್ಟಾ ಸೋಂಕು: ನ್ಯೂಜಿಲೆಂಡ್‌ನಲ್ಲಿ ಲಾಕ್‌ಡೌನ್ ವಿಸ್ತರಣೆಡೆಲ್ಟಾ ಸೋಂಕು: ನ್ಯೂಜಿಲೆಂಡ್‌ನಲ್ಲಿ ಲಾಕ್‌ಡೌನ್ ವಿಸ್ತರಣೆ

ಕೇವಲ ಒಂದೇ ಒಂದು ಸ್ಥಳೀಯ ಕೊರೊನಾ ಪ್ರಕರಣ ಪತ್ತೆಯಾಗುತ್ತಿದ್ದಂತೆಯೇ ನ್ಯೂಜಿಲೆಂಡ್ ಕಟ್ಟುನಿಟ್ಟಾದ ಲಾಕ್‌ಡೌನ್‌ಗೆ ಮೊರೆ ಹೋಯಿತು. ಇದಾಗ್ಯೂ ಕೊರೊನಾ ಸೋಂಕನ್ನು ಸಂಪೂರ್ಣವಾಗಿ ಹತ್ತಿಕ್ಕಲು ಸಾಧ್ಯವಾಗಲಿಲ್ಲ.

 New Zealand Admits It Cannot Get Rid Of Coronavirus Completely

ಕೆಲವು ಅಧಿಕಾರಿಗಳು ಹಾಗೂ ನಿರಾಶ್ರಿತರಲ್ಲಿ ಸೋಂಕು ಹರಡಿರುವುದು ಕೂಡ ನ್ಯೂಜಿಲೆಂಡ್‌ನಲ್ಲಿ ಸೋಂಕು ಹರಡುವಿಕೆ ಹೆಚ್ಚಾಗಲು ಒಂದು ಕಾರಣವಾಗಿದೆ. ಸೋಮವಾರ 29 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು 1300ಕ್ಕೂ ಹೆಚ್ಚು ಪ್ರಕರಣಗಳು ದಾಖಲಾದಂತಾಗಿದೆ. ಆಕ್ಲೆಂಡ್‌ನಲ್ಲಿ ಏಳು ವಾರಗಳ ಲಾಕ್‌ಡೌನ್ ನಿರ್ಬಂಧಗಳಿಂದ ಏಕಾಏಕಿ ಏರಿಕೆಯಾಗಿದ್ದ ಸೋಂಕು ನಿಯಂತ್ರಿಸಲು ನೆರವಾಗಿದೆ.

ದೀರ್ಘಾವಧಿ ನಿರ್ಬಂಧಗಳು ಶೂನ್ಯ ಪ್ರಕರಣಗಳನ್ನು ತಲುಪಲು ಸಾಧ್ಯವಿಲ್ಲ ಎಂಬುದು ಸ್ಪಷ್ಟವಾಗಿದೆ ಎಂದು ಆರ್ಡರ್ನ್ ಹೇಳಿದ್ದಾರೆ. 'ನಮ್ಮಲ್ಲಿ ಕೊರೊನಾ ಲಸಿಕೆಗಳು ಇರಲಿಲ್ಲ. ಹೀಗಾಗಿ ನಿರ್ಮೂಲನೆ ಪ್ರಯತ್ನ ಮುಖ್ಯವಾಗಿತ್ತು. ಆದರೆ ಸಂಪೂರ್ಣ ನಿರ್ಮೂಲನೆ ಸಾಧ್ಯವಿಲ್ಲ ಎಂಬುದನ್ನು ಕಂಡುಕೊಂಡಿದ್ದೇವೆ. ನಾವು ಮಾಡುವ ಕೆಲಸದ ವಿಧಾನವನ್ನು ಬದಲಾಯಿಸಲು ಆರಂಭಿಸುತ್ತೇವೆ' ಎಂದು ಹೇಳಿದ್ದಾರೆ.

ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗೆ ಹೋಲಿಸಿದರೆ ನ್ಯೂಜಿಲೆಂಡ್‌ ತನ್ನ ಲಸಿಕೆ ಅಭಿಯಾನವನ್ನು ನಿಧಾನವಾಗಿ ಆರಂಭಿಸಿದೆ. ಏಕಾಏಕಿ ಆಗಸ್ಟ್‌ನಲ್ಲಿ ಮತ್ತೆ ಸೋಂಕಿನ ದರ ಏರಿಕೆಯಾಗಿದೆ. ಸುಮಾರು 65% ನ್ಯೂಜಿಲೆಂಡ್ ಮಂದಿ ಕನಿಷ್ಠ ಒಂದು ಡೋಸ್ ಲಸಿಕೆ ಪಡೆದುಕೊಂಡಿದ್ದರೆ, 40% ಸಂಪೂರ್ಣ ಲಸಿಕೆ ಪಡೆದುಕೊಂಡಿದ್ದಾರೆ. 12 ಹಾಗೂ ಅದಕ್ಕಿಂತ ಹೆಚ್ಚಿನ ವಯಸ್ಸಿನವರಲ್ಲಿ ಸುಮಾರು 79% ಜನರು ಕನಿಷ್ಠ ಒಂದು ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ.

ನ್ಯೂಜಿಲೆಂಡ್‌ನಲ್ಲಿ ಫೆಬ್ರವರಿ ನಂತರ ಕೊರೊನಾ ಸೋಂಕಿನ ಒಂದೇ ಒಂದು ಪ್ರಕರಣ ದಾಖಲಾಗುತ್ತಿದ್ದಂತೆ ಇಡೀ ದೇಶಕ್ಕೆ ಲಾಕ್‌ಡೌನ್ ಘೋಷಣೆ ಮಾಡಲಾಗಿತ್ತು. ಸ್ಥಳೀಯವಾಗಿ ಫೆಬ್ರವರಿ ನಂತರ ಮೊದಲ ಕೊರೊನಾ ಪ್ರಕರಣ ದೃಢಪಟ್ಟಿದ್ದು, ನ್ಯೂಜಿಲೆಂಡ್ ಪ್ರಧಾನಿ ಜಸಿಂಡಾ ಅರ್ಡರ್ನ್ ದೇಶಾದ್ಯಂತ ಲಾಕ್‌ಡೌನ್ ಘೋಷಣೆ ಮಾಡಿದ್ದರು.

'ಇಡೀ ವಿಶ್ವಕ್ಕೆ ಡೆಲ್ಟಾ ರೂಪಾಂತರ ಮಾರಕವಾಗಿದೆ. ಹೀಗಾಗಿ ಇದನ್ನು ತಡೆಯಲು ಮತ್ತೆ ಕಠಿಣವಾದ ಹಾದಿಯನ್ನು ಹಿಡಿಯಲೇಬೇಕಿದೆ. ಇದರಲ್ಲಿ ನಾವು ವಿಫಲವಾದರೆ ಮುಂದೆ ಕೆಟ್ಟ ಪರಿಸ್ಥಿತಿ ಎದುರಾಗಲಿದೆ. ಅದಕ್ಕಾಗಿ ನಮಗೆ ಒಂದೇ ಅವಕಾಶವಿದೆ' ಎಂದು ಸೋಂಕು ನಿರ್ಮೂಲನೆಗೆ ಹಲವು ಕಾರ್ಯತಂತ್ರಗಳನ್ನು ಅಳವಡಿಸಿಕೊಂಡಿದ್ದರು.

ಕೊರೊನಾ ನಿರ್ವಹಣೆಯಲ್ಲಿ ನ್ಯೂಜಿಲೆಂಡ್ ಪ್ರಶಂಸೆ ಗಿಟ್ಟಿಸಿಕೊಂಡಿದೆ. ಕೊರೊನಾ ನಿಯಂತ್ರಣಕ್ಕೆ ಎಲ್ಲಾ ದೇಶಗಳಿಗಿಂತ ಬಹುಬೇಗ ಕ್ರಮ ತೆಗೆದುಕೊಂಡು ಮೊದಲು ಗಡಿ ಮುಚ್ಚಿದ ದೇಶ ನ್ಯೂಜೆಲೆಂಡ್ ಆಗಿತ್ತು. ಎಲ್ಲೆಡೆಯಿಂದ ಸಂಪರ್ಕ ಕಡಿತಗೊಳಿಸಿ ವ್ಯಾಪಕವಾಗಿ ಸೋಂಕು ಹರಡದಂತೆ ತಡೆದಿತ್ತು. ಹೊರಗಿನಿಂದ ಬಂದವರ ಮೇಲೆ ನಿಗಾ ಇಟ್ಟು, ಕಠಿಣ ಕ್ವಾರಂಟೈನ್ ನಿಯಮಗಳನ್ನು ಹೇರಿತ್ತು.

English summary
New Zealand's government on Monday admit that it can no longer completely get rid of the coronavirus
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X