Nepal PM: ನೇಪಾಳ ನೆಲದಲ್ಲಿ ಹೊಸ ಸರ್ಕಾರ, ಯುವಕರ ಉದ್ಧಾರಕ್ಕೆ ಮಹತ್ವದ ಕ್ರಮ?
ನೇಪಾಳ ದೇಶದಲ್ಲಿ ದೊಡ್ಡ ಹೋರಾಟ ನಡೆದು, ಸರ್ಕಾರವನ್ನೇ ಯುವಕರು ಕೆಡವಿದ್ದಾರೆ. ಪ್ರಧಾನಿ ಮತ್ತು ನೇಪಾಳ ರಾಷ್ಟ್ರಪತಿ ರಾಜೀನಾಮೆ ಕೊಟ್ಟು ಏಕಾಏಕಿ ಓಡಿ ಹೋಗಿರುವ ಆರೋಪ ಕೂಡ ಇದೆ. ಹೀಗಿದ್ದಾಗ ನೇಪಾಳದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು, ಹಂಗಾಮಿ ಪ್ರಧಾನಿ ಪಟ್ಟಕ್ಕೆ ಭಾರತ ಮೂಲದ ನಂಟು ಹೊಂದಿರುವ ಹೊಸ ನಾಯಕಿ ಆಯ್ಕೆಯಾಗಿದ್ದಾರೆ. ಇಂತಹ ಸಮಯದಲ್ಲೇ ಭಾರಿ ದೊಡ್ಡ ಚರ್ಚೆಯೊಂದು ಶುರುವಾಗಿದೆ. ಹೊಸ ಸರ್ಕಾರ ಯುವಕರ ವಿಚಾರದಲ್ಲಿ ಈ ಮಹತ್ವದ ಕ್ರಮ ಕೈಗೊಳ್ಳುವ ಸಾಧ್ಯತೆ ಇದೀಗ ದಟ್ಟವಾಗಿದೆ.
ನೇಪಾಳ ಸರ್ಕಾರವು ಯುಟ್ಯೂಬ್, ಎಕ್ಸ್, ಇನ್ಸ್‌ಟಾಗ್ರಾಮ್ & ಫೇಸ್‌ಬುಕ್ ಸೇರಿ 26 ದೊಡ್ಡ ದೊಡ್ಡ ಸೋಷಿಯಲ್ ಮೀಡಿಯಾ ಅಪ್ಲಿಕೇಷನ್ ಬ್ಯಾನ್ ಮಾಡಿತ್ತು. ಈ ಸುದ್ದಿ ತಿಳಿದ ಲಕ್ಷಾಂತರ ಯುವತಿ & ಯುವಕರು ಬೀದಿ ಬೀದಿಯಲ್ಲಿ ಪ್ರತಿಭಟನೆ ನಡೆಸಿದ್ದರು ಎನ್ನಲಾಗಿತ್ತು. ಆದ್ರೆ ಸೋಷಿಯಲ್ ಮೀಡಿಯಾ ವಿಚಾರಕ್ಕೆ ಪ್ರತಿಭಟನೆ ಮಾಡಿಲ್ಲ, ಭ್ರಷ್ಟಾಚಾರ ವಿರುದ್ಧ ಹೋರಾಟ ಅಂತಾ ಖುದ್ದಾಗಿ ನೇಪಾಳ ಯುವ ಸಮುದಾಯ ಹೇಳಿತ್ತು. ಇಂತಹ ಸಮಯದಲ್ಲೇ ತಮ್ಮ ತಮ್ಮ ಕುಟುಂಬ ಸದಸ್ಯರನ್ನು ಕಳೆದುಕೊಂಡು ಪರದಾಡುತ್ತಿರುವ ಜನರಿಗೆ ಭರವಸೆ ತುಂಬಿ & ಪರಿಹಾರ ನೀಡಲು ಮುಂದಾಗಿದೆ ನೇಪಾಳ ಸರ್ಕಾರ. ಜೊತೆಗೆ ಯುವಕರ ಅಭಿವೃದ್ಧಿಗೆ ಕೂಡ ಮಹತ್ವದ ಯೋಜನೆ ಜಾರಿಗೆ ಇದೀಗ ಚಿಂತನೆ ನಡೆಸಿದೆ.

ನೇಪಾಳ ಯುವಕರಿಗೆ ಹೊಸ ಭರವಸೆ
ಭಾರತದ ನೆರೆ ದೇಶ ನೇಪಾಳ ಒದ್ದಾಡಿ ಹೋಗಿತ್ತು, ಕಳೆದ ಕೆಲ ದಿನಗಳಿಂದ ನೇಪಾಳ ಕೊತ ಕೊತ ಕುದ್ದು ಹೋಗಿತ್ತು. ಆದರೆ ಈಗ ಎಲ್ಲವೂ ತಣ್ಣಗಾಗಿ ಹೋಗಿದ್ದು, ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸಿದ್ದ ನೇಪಾಳದ ಯುವಕರು & ಯುವತಿಯರು ಇದೀಗ ರಾಜಕೀಯ ಗೆಲುವನ್ನು ಕಂಡಿದ್ದಾರೆ. ಹೀಗಿದ್ದಾಗಲೇ ಸುಶೀಲ ಕರ್ಕಿ ಅವರು ನೇಪಾಳದ ಹಂಗಾಮಿ ಪ್ರಧಾನಿಯಾಗಿ ಆಯ್ಕೆಯಾಗಿದ್ದು, ಪ್ರಮಾಣ ವಚನವನ್ನು ಸ್ವೀಕರಿಸಿದ ನಂತರ ಮಹತ್ವದ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಹೀಗೆ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಯುಕವರಿಗೆ ಹೊಸ ಭರವಸೆ ಸಿಗುತ್ತಿದೆ...












Click it and Unblock the Notifications