ನೇಪಾಳದ ಮೊದಲ ಮಹಿಳಾ ರಾಷ್ಟ್ರಪತಿ ವಿದ್ಯಾದೇವಿ ಭಂಡಾರಿ

ಕಠ್ಮಂಡು, ಅ.28: ಕಮ್ಯೂನಿಸ್ಟ್ ನಾಯಕಿ, ಮಹಿಳಾ ಪರ ಹೋರಾಟಗಾರ್ತಿ ವಿದ್ಯಾದೇವಿ ಭಂಡಾರಿ ಅವರು ನೇಪಾಳದ ಮೊದಲ ಮಹಿಳಾ ರಾಷ್ಟ್ರಪತಿಯಾಗಿ ಬುಧವಾರ ಆಯ್ಕೆಯಾಗಿದ್ದಾರೆ. ನೇಪಾಳದ ಆಡಳಿತಾರೂಢ ಸಿಪಿ ಎನ್-ಯುಎನ್ಎಲ್ ಪಕ್ಷದ ಉಪಾಧ್ಯಕ್ಷೆಯಾಗಿರುವ ವಿದ್ಯಾ ದೇವಿ ಭಂಡಾರಿ(54) ಅವರು ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ.

ರಾಷ್ಟ್ರಪತಿ ಚುನಾವಣೆಯಲ್ಲಿ ನೇಪಾಳದ ಕಮ್ಯೂನಿಸ್ಟ್ (ಯೂನಿಫೈಡ್ ಮಾರ್ಕ್ಸಿಸ್ಟ್ ಲೆನಿನಿಸ್ಟ್) ಪಕ್ಷದ ನಾಯಕಿ ವಿದ್ಯಾದೇವಿ ಭಂಡಾರಿ ಅವರು 314 ಮತ ಗಳಿಸಿದರೆ, ಎದುರಾಳಿ ಕಾಂಗ್ರೆಸ್ ಅಭ್ಯರ್ಥಿ ಕೌಲ್ ಬಹದೂರ್ ಗುರಂಗ್ ಅವರು 214 ಮತ ಪಡೆದರು ಎಂದು ನೇಪಾಳ ಸಂಸತ್ತಿನ ಸ್ಪೀಕರ್ ಅನ್ಸಾರಿ ಘರ್ತಿ ಮಗರ್ ಅವರು ಘೋಷಿಸಿದ್ದಾರೆ.

Nepal gets first woman President Bidhya Devi Bhandari

2008ರಲ್ಲಿ ರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದ ನೇಪಾಳಿ ಕಾಂಗ್ರೆಸ್ ಅಭ್ಯರ್ಥಿ ರಾಮ್ ಬರಣ್ ಯಾದವ್ ಆವರ ಸ್ಥಾನಕ್ಕೆ ಭಂಡಾರಿ ಆಯ್ಕೆಯಾಗಿದ್ದಾರೆ. ವಿದ್ಯಾದೇವಿ ಅವರ ಪತಿ ರಾಜಕೀಯ ನಾಯಕ ಮದನ್ ಭಂಡಾರಿ ಅವರು 1993ರಲ್ಲಿ ನಿಗೂಢವಾಗಿ ಕಾರು ಅಪಘಾತಕ್ಕೀಡಾಗಿ ಮೃತಪಟ್ಟಿದ್ದರು. 2006ರಲ್ಲಿ ಅಂದಿನ ದೊರೆ ಜ್ಞಾನೇಂದ್ರ ವಿರುದ್ಧ ಹಲವು ಬಾರಿ ಪ್ರತಿಭಟನೆ ನಡೆಸುವ ಮೂಲಕ ವಿದ್ಯಾ ಅವರು ಸುದ್ದಿಯಾಗಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+