ಮೂತ್ರ ಕುಡಿದು ಮೂರು ದಿನ ಕಳೆದವನಿಗೆ ಮರುಜೀವ
ಕಠ್ಮಂಡು, ಏ. 29 : ನೇಪಾಳದಲ್ಲಿ ಕಟ್ಟಡಗಳ ಅವಶೇಷಗಳ ಅಡಿ ಸಿಲುಕಿದ್ದ ಫ್ರಾನ್ಸ್ ಪ್ರಜೆಯೊಬ್ಬರನ್ನು ಪರಿಹಾರ ಕಾರ್ಯ ಕೈಗೊಂಡಿರುವ ಸಿಬ್ಬಂದಿ ಕಾಪಾಡಿದ್ದಾರೆ. ಜೀವ ಉಳಿಸಿಕೊಳ್ಳಲು ಮೂರು ದಿನ ಮೂತ್ರ ಕುಡಿದಿದ್ದೆ ಎಂದು ಆತ ಹೇಳಿಕೊಂಡಿದ್ದಾನೆ.
ರಕ್ಷಣಾ ಪಡೆಗಳು ಫ್ರಾನ್ಸ್‌ದೇಶದ ರಿಷಿ ಕೆನಲ್ (27)ನನ್ನು ಮಂಗಳವಾರ ರಕ್ಷಣೆ ಮಾಡಿವೆ. ಸುಮಾರು 80 ಗಂಟೆಗಳ ಕಾಲ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದ ಈತ ಬದುಕಲು ಮೂತ್ರವನ್ನು ಕುಡಿದಿದ್ದಾಗಿ ಹೇಳಿದ್ದಾನೆ. ಎರಡೂ ಕಾಲುಗಳಿಗೆ ಗಾಯವಾಗಿರುವ ರಿಷಿಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಪ್ರವಾಸಕ್ಕೆಂದು ಬಂದಿದ್ದ ರಿಷಿ ಖಾಸಗಿ ಹೋಟೆಲ್‌ನ ಎರಡನೇ ಮಹಡಿಯಲ್ಲಿ ವಿಶ್ರಾಂತಿ ಪಡೆಯುವಾಗ ಭೂಕಂಪ ಸಂಭವಿಸಿತ್ತು. ಮೇಲಿನ ಅಂತಸ್ತುಗಳು ಕುಸಿದು ಬಿದ್ದರೂ ರಿಷಿ ಇದ್ದ ರೂಮ್‌ಗೆ ಹಾನಿಯಾಗಿರಲಿಲ್ಲ. ಆದರೆ, ಅಲ್ಲಿಂದ ಹೊರಬರಲು ಸ್ಥಳವಿಲ್ಲದೇ ಆತ ಸಿಲುಕಿಕೊಂಡಿದ್ದ. [ಭೂಕಂಪ : ಗಾಯಾಳುಗಳನ್ನು ರಕ್ಷಿಸುತ್ತಿರುವ ಭಾರತೀಯ ಯೋಧರು]
ಅವಶೇಷಗಳ ಅಡಿ ಸಿಲುಕಿದ್ದ ರಿಷಿಯನ್ನು ಮಂಗಳವಾರ ರಕ್ಷಣೆ ಮಾಡಲಾಗಿದೆ. ಈ ವೇಳೆ ಮಾತನಾಡಿರುವ ರಿಷಿ 'ಮೂರು ದಿನಗಳಿಂದ ಆಹಾರವಿಲ್ಲದೇ ತುಟಿ ಒಡೆದು ಹೋಗಿತ್ತು. ಉಗುರು ಬಿಳಿ ಬಣ್ಣಕ್ಕೆ ತಿರುಗಿತ್ತು. ಸುತ್ತಲೂ ಹಲವರು ಸತ್ತಿದ್ದರು ಅದರ ದುರ್ವಾಸೆನೆ ಬರುತ್ತಿತ್ತು' ಎಂದು ಭೂಕಂಪದ ಅನುಭವವನ್ನು ಹಂಚಿಕೊಂಡಿದ್ದಾನೆ.[ಮನೆಮನಸುಗಳನ್ನು ಛಿದ್ರ ಮಾಡಿದ ಭೂಕಂಪದ ಮನಕಲಕುವ ಚಿತ್ರಗಳು]
ರಕ್ಷಣಾ ಕಾರ್ಯಾಚರಣೆ ವೇಳೆ ರಿಷಿ ಕೊಠಡಿಯ ಪಕ್ಕದಲ್ಲಿ ಮೂರು ಶವಗಳು ಪತ್ತೆಯಾಗಿವೆ. 'ನಾನು ಬದುಕುವ ಆಸೆಯನ್ನೇ ಬಿಟ್ಟಿದ್ದೆ. ಕೊನೆಗೂ ಸಿಬ್ಬಂದಿ ನನ್ನನ್ನು ರಕ್ಷಿಸಿದರು' ಎಂದು ರಿಷಿ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾನೆ.












Click it and Unblock the Notifications