Nepal Protest: ಹಿಂಸೆ.. ಹಿಂಸೆ... ನೇಪಾಳ ನೆಲದಲ್ಲಿ ಕಂಡಲ್ಲಿ ಗುಂಡು ಆದೇಶ?
ಭಾರತದ ನೆರೆಯ ದೇಶಗಳಲ್ಲಿ ಒಂದಲ್ಲ ಒಂದು ರೀತಿಯ ಸಮಸ್ಯೆ ಎದುರಾಗುತ್ತಲೇ ಇದ್ದು, ಒಂದು ಕಡೆ ಶ್ರೀಲಂಕಾ & ಬಾಂಗ್ಲಾದೇಶ ನೆಲದಲ್ಲಿ ಘೋರ ಪ್ರತಿಭಟನೆ ನಡೆದು ಈಗಾಗಲೇ ಅಲ್ಲಿನ ಆಡಳಿತ ಸೇನೆಯ ಹಿಡಿತಕ್ಕೆ ಸಿಕ್ಕಿದೆ. ಇನ್ನೊಂದು ಕಡೆ ಚೀನಾ ದೇಶವೇ ಇದರ ಹಿಂದೆ ಇದ್ದು, ಪಾಕಿಸ್ತಾನದಂತೆ ಶ್ರೀಲಂಕಾ & ಬಾಂಗ್ಲಾದೇಶ ಮೇಲೂ ಹಿಡಿತ ಸಾಧಿಸಲು ಮುಂದಾಗಿದೆ ಚೀನಾ ಎಂಬ ಗಂಭೀರ ಆರೋಪ ಇದೆ. ಹೀಗಿದ್ದಾಗ ನೇಪಾಳ ನೆಲದಲ್ಲಿ ಕೂಡ ಧಗಧಗನೆ ಹೊತ್ತಿ ಉರಿಯುತ್ತಿದೆ ಯುವ ಸಮುದಾಯದ ಕೋಪದ ಬೆಂಕಿ...
ಹೌದು, ಭಾರತದ ಪಕ್ಕದ ದೇಶವಾಗಿರುವ ನೇಪಾಳ ಹಲವು ವಿಚಾರದಲ್ಲಿ ಭಾರತಕ್ಕೆ ಹತ್ತಿರವಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಭಾರತ ವಿರೋಧಿ ನಿಲುವು ತೆಗೆದುಕೊಂಡು ನೇಪಾಳ ದೇಶ ಸುದ್ದಿಯಲ್ಲಿ ಇತ್ತು. ಆದರೆ ಇದೀಗ ದಿಢೀರ್ ಅಲ್ಲಿ ಕ್ರಾಂತಿಯ ಕಹಳೆ ಮೊಳಗಿ ಹೋಗಿದ್ದು, ನೋಡ ನೋಡುತ್ತಾ ಇಡೀ ನೇಪಾಳ ಬೆಂಕಿಯ ಕೆನ್ನಾಲಿಗೆಗೆ ಬಲಿಯಾಗುವ ಅಪಾಯ ಎದುರಾಗಿದೆ. ಅದರಲ್ಲೂ ನೇಪಾಳ ಸರ್ಕಾರ ತಾನು ಮಾಡಿಕೊಂಡ ಎಡವಟ್ಟಿನ ಪರಿಣಾಮ ಇದೀಗ ದೊಡ್ಡ ಸಮಸ್ಯೆಯ ಸುಳಿಗೆ ಸಿಲುಕಿ, ಪ್ರಧಾನಿ & ರಾಷ್ಟ್ರಪತಿ ರಾಜೀನಾಮೆ ಕೊಟ್ಟಿದ್ದೂ ಆಗಿದೆ. ಇಷ್ಟಾದರೂ ಮತ್ತೆ ಅಲ್ಲಿ ಹಿಂಸೆಯ ಬೆಂಕಿ ಸ್ಫೋಟಗೊಂಡಿದೆ.

ನೇಪಾಳ ನೆಲದಲ್ಲಿ ಕಂಡಲ್ಲಿ ಗುಂಡು ಆದೇಶ?
ಅಲ್ಲಿ ಪ್ರತಿಭಟನೆ ಬಿಸಿ ಹೇಗಿದೆ ಅಂದ್ರೆ, ನೇಪಾಳ ದೇಶದ ಸಂಸತ್ ಕಟ್ಟಡಕ್ಕೂ ಬೆಂಕಿ ಹಚ್ಚಲಾಗಿದೆ. ಹೌದು, ನೇಪಾಳದಲ್ಲಿ ಶುರುವಾಗಿರುವ ಹೋರಾಟದ ಬೆಂಕಿ ಇದೀಗ ಇಡೀ ದೇಶವನ್ನೇ ಸುಟ್ಟುಹಾಕಿದೆ. ದಿಢೀರ್ ಅಂತಾ ನೇಪಾಳ ಸರ್ಕಾರ ಯುಟ್ಯೂಬ್, ಎಕ್ಸ್, ಇನ್ಸ್‌ಟಾಗ್ರಾಮ್ & ಫೇಸ್‌ಬುಕ್ ಸೇರಿದಂತೆ ಒಟ್ಟು 26 ದೊಡ್ಡ ದೊಡ್ಡ ಸೋಷಿಯಲ್ ಮೀಡಿಯಾ ಆಪ್‌ಗಳನ್ನ ಬ್ಯಾನ್ ಮಾಡಿತ್ತು. ಈ ಸುದ್ದಿಯನ್ನ ತಿಳಿದ ಲಕ್ಷಾಂತರ ನೇಪಾಳ ಯುವತಿಯರು & ಯುವಕರು ಬೀದಿ ಬೀದಿಯಲ್ಲಿ ಪ್ರತಿಭಟನೆ ನಡೆಸಿದ್ದರು. ನಂತರ ಈ ಪ್ರತಿಭಟನೆ ಕಂಟ್ರೋಲ್‌ಗೆ ಬರ್ತಿಲ್ಲ ಅನ್ನೋ ಕಾರಣಕ್ಕೆ ಪ್ರಧಾನಿ & ರಾಷ್ಟ್ರಪತಿ ತಮ್ಮ, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಎಸ್ಕೇಪ್ ಆಗಿದ್ದರು.
25 ಜನರ ಜೀವ ಹೋಯ್ತಾ?
ಹೀಗೆ ನೇಪಾಳ ಪ್ರಧಾನಿ & ರಾಷ್ಟ್ರಪತಿ ತಮ್ಮ, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ಮತ್ತೆ ಹಿಂಸೆ ಭುಗಿಲೆದ್ದು ಹೋಗಿದೆ. ಪ್ರತಿಭಟನೆ ನಡೆಸುತ್ತಿರುವವರು ಹುಚ್ಚು ಹಿಡಿದವರಂತೆ ಆಡುತ್ತಿದ್ದಾರೆ. ಅಲ್ಲದೆ ಈ ರೀತಿ ಶುರುವಾಗಿದ್ದ ನೇಪಾಳ ಸೋಷಿಯಲ್ ಮೀಡಿಯಾ ಗಲಾಟೆಯಲ್ಲಿ 25 ಜನರ ಜೀವ ಹೋಗಿದ್ದರೆ, 500 ಜನರಿಗೆ ಗಂಭೀರವಾಗಿ ಗಾಯಗಳಾಗಿದೆ. ಇಂತಹ ಪರಿಸ್ಥಿತಿಯಲ್ಲೇ ಮತ್ತೊಂದು ಸುದ್ದಿ ಇದೀಗ ನೇಪಾಳ ನೆಲದಲ್ಲಿ ಸಂಚಲನ ಸೃಷ್ಟಿ ಮಾಡಿದೆ. ಇದೇ ಕಾರಣಕ್ಕೆ ನೇಪಾಳ ಸೇನೆ ದೇಶದಲ್ಲಿ ಅಧಿಕಾರ ಕೈಗೆ ತೆಗೆದುಕೊಂಡಿದ್ದು, ಕರ್ಫ್ಯೂ ಜಾರಿ ಮಾಡಿದೆ. ಅಲ್ಲದೆ ಪರಿಸ್ಥಿತಿ ಇದೇ ರೀತಿ ಕಂಡರೆ ಪ್ರತಿಭಟನೆ ನಿಯಂತ್ರಣಕ್ಕೆ ತರಲು ಕಂಡಲ್ಲಿ ಗುಂಡು ಆದೇಶ ಕೂಡ ಹೊರ ಬೀಳುವ ಸಾಧ್ಯತೆ ಇದೀಗ ದಟ್ಟವಾಗಿದೆ.












Click it and Unblock the Notifications