ಮಾಜಿ ಪ್ರಧಾನಿ + ಮಾಜಿ ಅಧ್ಯಕ್ಷ = ಮೈತ್ರಿ: ಪಾಕಿಸ್ತಾನ ಚುನಾವಣೆಗೂ ಮುನ್ನ ‘ಮೈತ್ರಿ’ ರಾಜಕೀಯ ಬಲು ಜೋರು!

ಭಾರತದ ನೆರೆಯ ದೇಶ, ಉಗ್ರರ ಬೀಡು ಪಾಕಿಸ್ತಾನದಲ್ಲಿ ಇನ್ನೇನು ಸಂಸತ್ ಚುನಾವಣೆಗೆ ಸಮಯ ಕೂಡಿ ಬಂದಿದೆ. 2024ರ ಫೆಬ್ರವರಿ 8 ಕ್ಕೆ ಮತದಾನ ನಡೆಯುವುದು ಪಕ್ಕಾ ಆಗಿದ್ದು, ಈ ಬಾರಿ ಗೆಲ್ಲಲೇಬೇಕು ಎಂದು ಜಿದ್ದಾಜಿದ್ದಿನ ಹೋರಾಟ ನಡೆಸುತ್ತಿವೆ ಅಲ್ಲಿನ ರಾಜಕೀಯ ಪಕ್ಷಗಳು. ಹೀಗೆ ಭ್ರಷ್ಟಾಚಾರ ಆರೋಪ ಹೊತ್ತ ಮಾಜಿ ಪ್ರಧಾನಿ ಸಮೇತ, ಎಲ್ಲರೂ ಗೆದ್ದು ಬೀಗಲು ಪರದಾಡುತ್ತಿರುವ ಸಮಯದಲ್ಲೇ ಬ್ರೇಕಿಂಗ್ ನ್ಯೂಸ್ ಒಂದು ಸಿಕ್ಕಿದೆ.

ಯೆಸ್, ಪಾಕಿಸ್ತಾನದಲ್ಲಿ 2024ರ ಫೆಬ್ರವರಿ 8 ಕ್ಕೆ ನಡೆಯಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಪಾಕಿಸ್ತಾನ ಮುಸ್ಲಿಂ ಲೀಗ್ ನವಾಜ್‌ (ಪಿಎಂಎಲ್‌-ಎನ್‌) & ಕರಾಚಿ ಮೂಲದ ಮುತ್ತಾಹಿದಾ ಕೌಮಿ ಮೂವ್‌ಮೆಂಟ್‌ ಪಾಕಿಸ್ತಾನ್‌ (ಎಂಕ್ಯುಎಂ-ಪಿ) ಪಕ್ಷಗಳು ಮೈತ್ರಿಗೆ ಜೈ ಎಂದಿವೆ. ಹೀಗೆ ಜಂಟಿಯಾಗಿ ಸ್ಪರ್ಧೆ ಮಾಡುವುದಾಗಿ ಎರಡೂ ಪಕ್ಷಗಳ ನಾಯಕರು ಘೋಷಣೆ ಮಾಡಿದ್ದು, ಪಾಕಿಸ್ತಾನ ಚುನಾವಣೆಗೂ ಮುನ್ನ ಸಂಚಲನ ಸೃಷ್ಟಿಯಾಗಿದೆ. ಅಂದಹಾಗೆ ಎಂಕ್ಯುಎಂ-ಪಿ ನಿಯೋಗ ಪಿಎಂಎಲ್‌-ಎನ್‌ ವರಿಷ್ಠ ನವಾಜ್ ಷರೀಫ್‌ ಭೇಟಿ ಮಾಡಿದ ಬಳಿಕ ಮೈತ್ರಿ ನಿರ್ಧಾರ ಅಧಿಕೃತವಾಗಿದೆ.

nawaz-sharif-and-asif-ali-zardari

ಮಾಜಿ ಪ್ರಧಾನಿ + ಮಾಜಿ ಅಧ್ಯಕ್ಷ = ಮೈತ್ರಿ!

ಪಾಕಿಸ್ತಾನ ಮುಸ್ಲಿಂ ಲೀಗ್ ನವಾಜ್‌ ಹಾಗೂ ಮುತ್ತಾಹಿದಾ ಕೌಮಿ ಮೂವ್‌ಮೆಂಟ್‌ ಪಾಕಿಸ್ತಾನ್‌ ಮಧ್ಯೆ ಮೈತ್ರಿಗೆ ಮೊದಲು ಹಲವು ಸುತ್ತಿನ ಚರ್ಚೆಯು ನಡೆದಿದೆ. ಮಾಜಿ ಪ್ರಧಾನಿ ನವಾಜ್‌ ಷರೀಫ್‌ ಹಾಗೂ ಮಾಜಿ ಅಧ್ಯಕ್ಷ ಆಸಿಫ್‌ ಅಲಿ ಜರ್ದಾರಿ ಮಧ್ಯೆ ಫೋನ್ ಮೂಲಕ ಈ ಬಗ್ಗೆ ಚರ್ಚೆ ನಡೆದಿತ್ತು. ಹೀಗೆ ಮಾತುಕತೆ ನಡೆದ ನಂತರ, ಪಿಎಂಎಲ್‌-ಎನ್‌ & ಎಂಕ್ಯುಎಂ-ಪಿ ವರಿಷ್ಠರಾದ ನವಾಜ್‌ ಷರೀಫ್‌ & ಆಸಿಫ್‌ ಅಲಿ ಜರ್ದಾರಿ ಮೈತ್ರಿ ಕುರಿತು ಅಧಿಕೃತ ಘೋಷಣೆ ಮೊಳಗಿಸಿದ್ದಾರೆ.

ಇಮ್ರಾನ್ ಖಾನ್ ಸ್ಪರ್ಧೆ ಮಾಡ್ತಾರಾ?

ಭಯೋತ್ಪಾದಕರ ತವರು ಎಂಬ ಕುಖ್ಯಾತಿ ಪಡೆದಿರುವ ಪಾಕ್, ಇದೀಗ ಸಂಸತ್‌ ಚುನಾವಣೆಗೂ ಅಂತಿಮ ಹಂತದ ಸಿದ್ಧತೆ ನಡೆಸಿದೆ. ಈಗಾಗಲೆ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಜೈಲು ಸೇರಿದ ವೇಳೆಗೆ, ಮತ್ತೊಬ್ಬ ಮಾಜಿ ಪಿಎಂ ನವಾಜ್ ಷರೀಫ್ ಪಾಕಿಸ್ತಾನಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಹೀಗೆ ನವಾಜ್ ತವರಿಗೆ ಮರಳಿದ ನಂತರ ಇಮ್ರಾನ್ ಖಾನ್ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಈ ಚರ್ಚೆಗೆ ಕಾರಣವೂ ಇದ್ದು, ಜೈಲಿನಲ್ಲಿ ಇರುವ ಇಮ್ರಾನ್ ಖಾನ್ ಹೊರಗೆ ಬಂದುಬಿಟ್ಟರೆ ಶತ್ರುಗಳಿಗೆ ನಡುಕ ಶುರುವಾಗಲಿದೆ. ಹೀಗಾಗಿಯೇ ಇಮ್ರಾನ್ ಹೊರಗೆ ಬಾರದ ರೀತಿ ಎಲ್ಲಾ ರೀತಿಯ ಪ್ರಯತ್ನ ಮಾಡಲಾಗುತ್ತಿದೆ ಎಂಬ ಆರೋಪ ಇದೆ.

ಹೇಗಿದೆ ಗೊತ್ತಾ ಪಾಕಿಸ್ತಾನ ಸಂಸತ್?

ಪಾಕಿಸ್ತಾನ ಲೋಕಸಭೆ ಸದಸ್ಯ ಬಲ 342, ಭಾರತದಂತೆ ಪಾಕ್‌ನಲ್ಲೂ 5 ವರ್ಷ ಅಧಿಕಾರವಧಿ ಇರುತ್ತದೆ. ಈ ಅವಧಿ ಇದೇ ಆಗಸ್ಟ್ 12ಕ್ಕೆ ಕೊನೆಯಾಗಿತ್ತು. ಆದರೆ ಈ ಅವಧಿ ಪೂರ್ಣವಾಗುವ ಮೊದಲು ಅಂದರೆ, ಆಗಸ್ಟ್‌ 9ಕ್ಕೆ ಪಾಕ್ ಸಂಸತ್ ವಿಸರ್ಜನೆಗೆ ಶಿಫಾರಸು ಕಳುಹಿಸಿದ್ದರು ಪಾಕ್‌ನ ಅಂದಿನ ಪ್ರಧಾನಿ. ಹೀಗೆ ಪ್ರಧಾನಿ ಶಿಫಾರಸು ಹಿನ್ನೆಲೆ ಪಾಕ್ ಸಂಸತ್ ವಿಸರ್ಜನೆ ಮಾಡ್ಲಾಗಿತ್ತು. ಇದೀಗ ಚುನಾವಣೆಗೆ ಸಕಲ ಸಿದ್ಧತೆ ನಡೆಸಲಾಗಿದ್ದು, 2024ರ ಫೆಬ್ರವರಿ 8 ಕ್ಕೆ ಮತದಾನ ಕೂಡ ನಡೆಯಲಿದೆ. ಇದರ ಜೊತೆಗೆ ಮೈತ್ರಿ ರಾಜಕೀಯವೂ ಜೋರಾಗಿದೆ.

ಒಟ್ನಲ್ಲಿ ಪಾಕಿಸ್ತಾನ ರಾಜಕಾರಣಿಗಳು ಚುನಾವಣೆಗೆ ಸಜ್ಜಾಗಿದ್ದಾರೆ. ಆದ್ರೆ ಈ ಸಮಯದಲ್ಲಿ ಉಗ್ರರ ಉಪಟಳ ಹೆಚ್ಚಾಗುತ್ತಿದೆ. ಅದರಲ್ಲೂ ಪಾಕಿಸ್ತಾನ ಚುನಾವಣೆಗೆ ದಿನಾಂಕ ಘೋಷಣೆ ಮಾಡಿದ ನಂತರ ಪದೇ ಪದೆ ದಾಳಿಗಳು ನಡೆದಿವೆ. ಕಳೆದ ಕೆಲ ದಿನಗಳಿಂದ ಉಗ್ರರ ತೀವ್ರ ಉಪಟಳಕ್ಕೆ ಪಾಕ್ ನಾಗರಿಕರು ನಲುಗಿ ಹೋಗಿದ್ದಾರೆ. ಹೀಗೆ, ಚುನಾವಣೆ ವೇಳೆ ಮತ್ತಷ್ಟು ರಕ್ತಪಾತ ನಡೆಯುವ ಆತಂಕ ಆವರಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+