ಜಗತ್ತಿನ ವಿವಿಧೆಡೆ ಇರುವ ಭಾರತೀಯ ದೇಶ ಪ್ರತಿನಿಧಿಸುವ ರಾಷ್ಟ್ರದೂತ

ಹೇಗ್, ಜೂನ್ 27: ಮೂಲಸೌಕರ್ಯ, ತಂತ್ರಜ್ಞಾನದ ವಿಚಾರದಲ್ಲಿ ಇಪ್ಪತ್ತೊಂದನೇ ಶತಮಾನದಲ್ಲಿ ಭಾರತ ಹಿಂದುಳಿಯಲು ಸಾಧ್ಯವಿಲ್ಲ. ನಾವು ಏನೆಲ್ಲ ಹೊಂದಿಸುತ್ತೇವೋ ಅದು ವಿಶ್ವ ಮಟ್ಟದಾಗಿರಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಹೇಳಿದರು. ನೆದರ್ ಲ್ಯಾಂಡ್ಸ್ ನಲ್ಲಿರುವ ಭಾರತೀಯರನ್ನು ಉದ್ದೇಶಿಸಿ ಅವರು ಮಾತನಾಡಿದರು.

ಪಾಸ್ ಪೋರ್ಟ್ ನ ಬಣ್ಣ ಬದಲಾಗಬಹುದು. ಆದರೆ ನಮ್ಮ ಮಧ್ಯೆ ಸಂಬಂಧ ಬದಲಾಗದು. ಸರಕಾರದ ಪರವಾಗಿ ರಾಯಭಾರ ಕಚೇರಿ ಇರುತ್ತದೆ. ರಾಯಭಾರಿಗಳು ಇರ್ತಾರೆ. ಅಧಿಕಾರಿಗಳು ಇರ್ತಾರೆ. ಆದರೆ ನಿಮಗೆ ಗೊತ್ತಿದೆ, ಅವರನ್ನು ರಾಜದೂತರು ಅಂತಾರೆ. ಆದರೆ ನೀವಿಲ್ಲಿ ಎಲ್ಲರೂ ರಾಷ್ಟ್ರದೂತರೇ. ಪ್ರತಿ ಭಾರತೀಯನೂ ಜಗತ್ತಿನ ಯಾವುದೇ ಭಾಗದಲ್ಲಿದ್ದರೂ ರಾಷ್ಟ್ರದೂತರು ಎಂದು ಮೋದಿ ಹೇಳಿದರು.

Narendra Modi

ಭಾರತೀಯರು ಎರಡನೇ ಅತಿ ಹೆಚ್ಚಿನ ಸಂಖ್ಯೆಯಲ್ಲಿರುವ ತವರಾದ ಯುರೋಪಿನ ನೆದರ್ ಲ್ಯಾಂಡ್ಸ್ ನಲ್ಲಿ ನಾನಿದ್ದೇನೆ. ಸರಕಾರಗಳು ನಡೆಯುವುದು ಜನರು ಭಾಗವಹಿಸುವುದರಿಂದ. ಅಭಿವೃದ್ಧಿ ಅಥವಾ ಒಳ್ಳೆ ಆಡಳಿತ ಇವುಗಳು ಪ್ರತ್ಯೇಕವಾಗಿ ಜನರ ಆಶಯಗಳನ್ನು ಪೂರೈಸಲು ಸಾಧ್ಯವಿಲ್ಲ. ಎರಡರ ಅಗತ್ಯ ಇದ್ದೇ ಇರುತ್ತದೆ ಎಂದರು.

ಕೃಷಿ ವಲಯ ಹಾಗೂ ಸಹಕಾರ ವಲಯದಲ್ಲಿ ಮಹಿಳೆಯರ ಪಾತ್ರ ಬಹಳ ಮುಖ್ಯವಾದದ್ದು. ಭಾರತದ ನಾರಿ ಶಕ್ತಿ ದೇಶದ ಅಭಿವೃದ್ಧಿಗೆ ಕೊಡುಗೆ ನೀಡುತ್ತಿದೆ ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+