• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

Oz (Live) : ಬ್ರಿಸ್ಬೇನ್‌ನಲ್ಲಿ ಇಂಡಿಯನ್ ಫುಡ್‌ಕೋರ್ಟ್

|

ಬ್ರಿಸ್ಬೇನ್, ನ. 15 : ಭಯೋತ್ಪಾದನೆಯನ್ನು ಹತ್ತಿಕ್ಕಲು ವಿಶ್ವದ ದೇಶಗಳ ಜಂಟಿ ತಂತ್ರಗಾರಿಕೆ ಅಗತ್ಯವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ. ಬ್ರಿಸ್ಬೇನ್‌ನಲ್ಲಿ ಜಿ-20 ದೇಶಗಳ ಶೃಂಗಸಭೆಯಲ್ಲಿ ಪಾಲ್ಗೊಂಡಿರುವ ಅವರು, ವಿಶ್ವ ಮಟ್ಟದಲ್ಲಿ ಬೆಳೆದಿರುವ ಭಯೋತ್ಪಾದನೆ ಹತ್ತಿಕ್ಕಬೇಕಾದರೆ, ಎಲ್ಲಾ ದೇಶಗಳು ಸಹಕಾರ ಮುಖ್ಯ ಎಂದು ಹೇಳಿದ್ದಾರೆ.

ಭಯೋತ್ಪಾದನೆ ಇಡೀ ವಿಶ್ವದ ನೆಮ್ಮದಿಯ ಜೊತೆಗೆ ಆರ್ಥಿಕ ವ್ಯವಸ್ಥೆಯನ್ನೂ ಹಾಳುಮಾಡಿದೆ. ಆದ್ದರಿಂದ ವಿಶ್ವದ ಎಲ್ಲಾ ದೇಶಗಳು ಒಂದಾದರೆ ಭಯೋತ್ಪಾದನೆಯನ್ನು ತೊಲಗಿಸಬಹುದು ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ.

ದೇಶಗಳ ನಡುವಿನ ಸಹಕಾರ ಸಂಬಂಧ ಸುಧಾರಣೆ ಮುಖ್ಯವಾಗಿದೆ. ಆದರೆ, ಈ ಸುಧಾರಣೆ ಜನತೆಯಿಂದಲೇ ಆಗಬೇಕಿದೆ ಎಂದು ಹೇಳಿದ ಮೋದಿ, ತಂತ್ರಜ್ಞಾನ ಮತ್ತು ಆಡಳಿತ ಕಾರ್ಯವಿಧಾನ ಸುಧಾರಣೆಯಾಗಬೇಕಿದೆ ಎಂದರು. [ಮೋದಿ ಭಾಷಣದ ಪೂರ್ಣಭಾಗ ಇಲ್ಲಿದೆ]

ಇಂಡಿಯನ್ ಫುಡ್‌ ಕೋರ್ಟ್ : ನರೇಂದ್ರ ಮೋದಿ ಬ್ರಿಸ್ಬೇನ್‌ನಲ್ಲಿನ ಜಿ-20 ಶೃಂಗ ಸಭೆಯಲ್ಲಿ ಪಾಲ್ಗೊಂಡಿದ್ದಾರೆ. ಮೋದಿಯ ಚಿತ್ರವುಳ್ಳ ಇಂಡಿಯನ್ ಫುಡ್‌ಕೋರ್ಟ್ ಶೃಂಗ ಸಭೆ ನಡೆಯುವಲ್ಲಿ ಎಲ್ಲರ ಗಮನಸೆಳೆಯುತ್ತಿದೆ.

ಹಿಂದಿನ ಸುದ್ದಿ : ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಬ್ರಿಸ್ಬೇನ್‌ನಲ್ಲಿದ್ದು, ಇಂದಿನಿಂದ ಆರಂಭವಾದ ಜಿ20 ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದಾರೆ. ಕಪ್ಪು ಹಣ ನಿಗ್ರಹ ವಿಷಯವನ್ನು ಮೋದಿ ಶೃಂಗಸಭೆಯಲ್ಲಿ ಪ್ರಸ್ತಾಪಿಸುವ ನಿರೀಕ್ಷೆಯಿದೆ.

ಭಾರತೀಯ ಕಾಲಮಾನ ಬೆಳಗ್ಗೆ 10.50ರ ಸುಮಾರಿಗೆ ನರೇಂದ್ರ ಮೋದಿ ಅವರು ಶೃಂಗಸಭೆಗೆ ಆಗಮಿಸಿದ್ದಾರೆ. ಎರಡು ದಿನಗಳ 9ನೇ ಶೃಂಗಸಭೆಯಲ್ಲಿ ತೆರಿಗೆ ವಂಚನೆ, ಕಪ್ಪು ಹಣ ವಾಪಸ್ ತರುವ ವಿಷಯಗಳ ಬಗ್ಗೆ ಜಾಗತಿಕ ಸಹಕಾರಕ್ಕಾಗಿ ಮೋದಿ ಒತ್ತಾಯಿಸುವ ಸಾಧ್ಯತೆ ಇದೆ.

ಅರ್ಜೆಂಟೀನಾ, ಆಸ್ಟ್ರೇಲಿಯಾ, ಬ್ರೆಜಿಲ್, ಚೀನಾ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ರಷ್ಯಾ, ಟರ್ಕಿ, ದಕ್ಷಿಣ ಆಫ್ರಿಕಾ, ಅಮೆರಿಕ, ಐರೋಪ್ಯ ಒಕ್ಕೂಟ ಸೇರಿದಂತೆ 20 ದೇಶಗಳ ಜಿ20 ಶೃಂಗಸಭೆ ನ.15 ಮತ್ತು 16ರಂದು ನಡೆಯಲಿದೆ. ಜನರ ಜೀವನ ಮಟ್ಟ ಸುಧಾರಣೆ, ಮೂಲ ಸೌಕರ್ಯ ಮತ್ತು ಆರ್ಥಿಕ ಬೆಳವಣಿಗೆ ವೃದ್ಧಿಸುವ ಉದ್ಯೋಗ ಸೃಷ್ಟಿ ಬಗ್ಗೆ ಮೋದಿ ಪ್ರಸ್ತಾಪಿಸುವ ಸಾಧ್ಯತೆ ಇದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Narendra Modi is in Brisbane, Australia for a crucial G20 Summit and the second lap of his foreign tour after Myanmar. However, he sat in discussion with G20 members. It was no polling pitch when he cleared all doubts about the present government's stance on black money recovery from foreign bank accounts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more