ಟೈಮ್ಸ್ ಪ್ರಭಾವಿಗಳ ಪಟ್ಟಿಯಲ್ಲಿ ಮೋದಿ ಜೊತೆ ಕೇಜ್ರಿ
ನವದೆಹಲಿ, ಏ.14: ಟೈಮ್ಸ್ ನಿಯತಕಾಲಿಕೆ ವಿಶ್ವದ 100 ಪ್ರಭಾವಿ ವ್ಯಕ್ತಿಗಳ ಪಟ್ಟಿಗಾಗಿ ನಡೆಸಿರುವ ಸಮೀಕ್ಷೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಸ್ಥಾನ ಪಡೆದುಕೊಂಡಿದ್ದಾರೆ. ಓದುಗರ ಅಭಿಮತದಲ್ಲಿ ರಷ್ಯಾ ಅಧ್ಯಕ್ಷ ವಾದ್ಲಿಮಿರ್ ಪುಟಿನ್ ಅಗ್ರಸ್ಥಾನ ಪಡೆದುಕೊಂಡಿದ್ದಾರೆ.
ಟೈಮ್ಸ್ ಪತ್ರಿಕೆ ನಡೆಸಿದ ಸಮೀಕ್ಷೆಯಲ್ಲಿ ಮೋದಿ ಮತ್ತು ಕೇಜ್ರಿವಾಲ್ ವರ್ಷದ ಟಾಪ್ 100 ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಆದರೆ, ಓದುಗರ ಅಭಿಮತದಂತೆ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಅಗ್ರಸ್ಥಾನಕ್ಕೇರಿದ್ದಾರೆ.
ದಕ್ಷಿಣ ಕೊರಿಯಾದ ಸಿಂಗರ್ ಸಿಎಲ್ ಅವರನ್ನು ಹಿಂದಿಕ್ಕಿದ ಪುಟಿನ್ ಶೇ 6.95 ಮತಗಳನ್ನು ಅಂತಿಮ ಸುತ್ತಿನಲ್ಲಿ ಪಡೆದುಕೊಂಡಿದ್ದಾರೆ. ಉಳಿದಂತೆ ಪಾಪ್ ಸ್ಟಾರ್ ಲೇಡಿ ಗಾಗಾ(ಶೇ 2.6), ರಿಹಾನಾ (ಶೇ 1.9), ಟೇಲರ್ ಸ್ವಿಫ್ಟ್ (ಶೇ 1.8) ಮತ ಪಡೆದು ಟಾಪ್ 5ರಲ್ಲಿ ಕಾಣಿಸಿಕೊಂಡಿದ್ದಾರೆ. ವಿಜೇತರ ಅಂತಿಮ ಪಟ್ಟಿಯನ್ನು ಏ.16ರಂದು ಪ್ರಕಟಿಸಲಾಗುತ್ತದೆ.

ಮೋದಿ ಒಟ್ಟು 0.6% ಮತ ಪಡೆದಿದ್ದರೆ, ಕೇಜ್ರಿವಾಲ್ 0.5% ಮತ ಪಡೆದಿದ್ದಾರೆ. ಪಟ್ಟಿಯಲ್ಲಿ ಮೊದಲ ಸ್ಥಾನ ಗಳಿಸಿರುವ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಒಟ್ಟು 6.95% ಮತ ಪಡೆದಿದ್ದರೆ, 2ನೇ ಸ್ಥಾನ ಪಡೆದಿರುವ ಕೊರಿಯಾದ ಹಾಡುಗಾರ್ತಿ ಸಿಎಲ್ 6.9% ಮತ ಗಳಿಸಿದ್ದಾರೆ. ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ 1.4% ಮತ ಗಳಿಸಿದ್ದಾರೆ.
ಭಾರತೀಯ ಮೂಲದ ಅಮೆರಿಕದ ಸರ್ಜನ್ ಜನರಲ್ ವಿವೇಕ್ ಮೂರ್ತಿ 0.5% ಮತ ಪಡೆದಿದ್ದು ಟಾಪ್ 100ರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ಹೆಸರು ಮತದಾನದ ಪಟ್ಟಿಯಲ್ಲಿ ಸ್ಥಾನ ಪಡೆದಿತ್ತು. ಆದರೆ, ಟಾಪ್ 100ರಲ್ಲಿ ಸ್ಥಾನ ಗಳಿಸಿಲ್ಲ.
ಈ ಹಿಂದೆ ಓದುಗರ ಸಮೀಕ್ಷೆಯಲ್ಲಿ ಗೆದ್ದವರ ಪೈಕಿ ಹಿಲ್ಲರಿ ಕ್ಲಿಂಟನ್, ದಲಾಯಿ ಲಾಮಾ, ಹ್ಯಾರಿ ಪಾಟರ್ ನಟಿ ಎಮ್ಮಾ ವಾಟ್ಸನ್, ಮಲಾಲಾ ಯುಸಫ್ಜಾಯಿ, ಪೋಪ್ ಫ್ರಾನ್ಸಿಸ್, ಬರಾಕ್ ಒಬಾಮಾ, ಮಿಚೆಲ್ ಒಬಾಮಾ, ಫೇಸ್ ಬುಕ್ ಸಿಇಒ ಮಾರ್ಕ್ ಝುಕರ್ ಬರ್ಗ್, ಆಪಲ್ ಸಿಇಒ ಟಿಮ್ ಕುಕ್ ಹಾಗೂ ಕ್ಸಿ ಜಿಂಪಿಂಗ್ ಸೇರಿದ್ದಾರೆ. (ಪಿಟಿಐ)












Click it and Unblock the Notifications