ಶ್ರೀಮಂತ ತೈಲರಾಷ್ಟ್ರದ ಅಧ್ಯಕ್ಷರ ಹತ್ಯೆಗೆ ಸುಪಾರಿ ಕೊಟ್ಟ ಟ್ರಂಪ್?
ಕ್ಯಾರಕಸ್ (ವೆನಿಜುವೆಲಾ), ಮೇ 5: ಕೊರೊನಾ ಹಾವಳಿಯಿಂದ ಇಡೀ ಜಗತ್ತೇ ಸ್ತಬ್ದವಾಗಿ ಕುಳಿತಿದ್ದರೆ, ಇಂದು ಲ್ಯಾಟಿನ್ ಅಮೆರಿಕದ (ದಕ್ಷಿಣ ಅಮೆರಿಕ) ರಾಷ್ಟ್ರಗಳಲ್ಲಿ ಅದೊಂದು ಸುದ್ದಿ ತೀವ್ರ ತಲ್ಲಣ ಸೃಷ್ಟಿಸಿದೆ.
ಅಮೆರಿಕ ಭದ್ರತಾ ಪಡೆಯಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾದ ಇಬ್ಬರು ಭದ್ರತಾ ಅಧಿಕಾರಿಗಳನ್ನು ಜಗತ್ತಿನ ಪ್ರಮುಖ ತೈಲ ರಾಷ್ಟ್ರವಾದ ವೆನಿಜುವೆಲಾ ಬಂಧಿಸಿದೆ. ವೆನಿಜುವೆಲಾ ದೇಶದಲ್ಲಿ ಅಕ್ರಮವಾಗಿ ನುಸುಳುತ್ತಿದ್ದ 13 ಭಯೋತ್ಪಾದಕರನ್ನು ಬಂಧಿಸಿದ ತಕ್ಷಣವೇ ಈ ಇಬ್ಬರು ಭದ್ರತಾ ಅಧಿಕಾರಿಗಳನ್ನು ಬಂಧಿಸಲಾಗಿದೆ ಎಂದು ವೆನಿಜುವೆಲಾದ ಅಧ್ಯಕ್ಷ ನಿಕೋಲಸ್ ಮಡಾರೋ ಹೇಳಿದ್ದಾರೆ.
ಈ ವಿದ್ಯಮಾನ ವೆನಿಜುವೆಲಾ ದೇಶವನ್ನು ತಲ್ಲಣಗೊಳಿಸಿದೆ. ಬಂಧನಕ್ಕೆ ಒಳಗಾಗಿರುವ ಅಮೆರಿಕದ ಭದ್ರತಾ ಅಧಿಕಾರಿಗಳು ಅಮೆರಿಕ ಅಧ್ಯಕ್ಷ ಡೊನಾಲ್ಡ ಟ್ರಂಪ್ ಅವರ ಭದ್ರತಾ ಘಟಕದಲ್ಲಿ ಕೆಲಸ ಮಾಡುತ್ತಿದ್ದರು ಎಂದು ನಿಕೋಲಸ್ ಮಡಾರೋ ಆರೋಪಿಸಿದ್ದಾರೆ.

ಮಡಾರೋ ಹತ್ಯೆಗೆ ಸುಪಾರಿ ಕೊಟ್ಟರಾ ಟ್ರಂಪ್
ಭಾರೀ ತೈಲೋತ್ಪನ್ನಗಳನ್ನು ಹೊಂದಿರುವ ವೆನಿಜುವೆಲಾದ ಮೇಲೆ ಅನೇಕ ವರ್ಷಗಳಿಂದ ಪಕ್ಕದ ಅಮೆರಿಕದ ಕಣ್ಣು ಇದ್ದೇ ಇದೆ. ನಿಕೋಲಸ್ ಮಡಾರೋ ವೆನಿಜುವೆಲಾಕ್ಕೆ ಅಧ್ಯಕ್ಷ ಆದ ನಂತರ ಡೊನಾಲ್ಡ ಟ್ರಂಪ್ ಮುನಿಸಿಕೊಂಡು ವೆನಿಜುವೆಲಾದ ಮೇಲೆ ಕಾಲು ಕೆರೆದುಕೊಂಡು ಜಗಳಕ್ಕೆ ಹೋಗುತ್ತಿದ್ದದ್ದು ಈಗಾಗಲೇ ಸಾಕಷ್ಟು ಸಾರಿ ಬಹಿರಂಗವಾಗಿದೆ. ಮಡಾರೋ ಸಹ ಟ್ರಂಪ್ ಮೇಲೆ ಅವಕಾಶ ಸಿಕ್ಕಾಗ ವಾಗ್ದಾಳಿ ನಡೆಸುತ್ತಾ ಬಂದಿದ್ದಾರೆ.

ಪ್ರತಿಪಕ್ಷದ ನಾಯಕ ಜುವಾನ್ ಗೈಡೊಗೆ ಅಮೆರಿಕ ಬೆಂಬಲ
ವೆನಿಜುವೆಲಾದ ಅಧ್ಯಕ್ಷ ಸ್ಥಾನಕ್ಕೆ ಈ ವರ್ಷ ಚುನಾವಣೆ ನಡೆಯಲಿದೆ. ಆರ್ಥಿಕತೆ ಕುಸಿದಿರುವುದರಿಂದ ನಿಕೋಲಸ್ ಮಡಾರೋ ಅಧಿಕಾರ ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ. ಆದರೆ ಅಮೆರಿಕ ವೆನೆಜುವೆಲಾದ ಅಧ್ಯಕ್ಷರಾಗಲು ಪ್ರತಿಪಕ್ಷದ ನಾಯಕ ಜುವಾನ್ ಗೈಡೊ ಅವರಿಗೆ ಬೆಂಬಲ ನೀಡಿದೆ. ಇದರಿಂದ ನಿಕೋಲಸ್ ಮಡಾರೋ ಅಮೆರಿಕದ ಮೇಲೆ ಮುನಿಸಿಕೊಂಡಿದ್ದಾರೆ. ಮಡಾರೋ ಇತ್ತೀಚೆಗೆ ಅಮೆರಿಕಕ್ಕೆ ತಲೆನೋವಾಗಿ ಪರಿಣಾಮಿಸಿದ್ದಾರೆ ಎಂಬ ವರದಿಗಳು ಬಿತ್ತರವಾಗಿವೆ.
|
ಡೊನಾಲ್ಡ್ ಟ್ರಂಪ್ ಅಣತಿಯಂತೆ
ಕಳೆದ ಎರಡು ದಿನಗಳಿಂದ ವೆನಿಜುವೆಲಾದಲ್ಲಿ ನಡೆದ ಬೆಳವಣಿಗೆಗಳು ಅಧ್ಯಕ್ಷ ನಿಕೋಲಸ್ ಮಡಾರೋ ಅವರನ್ನು ಕೊಲ್ಲಲ್ಲು ಅಮೆರಿಕ ಸಂಚು ನಡೆಸಿದೆ. ಇದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಣತಿಯಂತೆ ನಡೆದಿದೆ ಎಂದು ಆರೋಪಗಳು ಕೇಳಿ ಬರುತ್ತಿವೆ. ಸದ್ಯ ಬಂಧನಕ್ಕೆ ಒಳಗಾಗಿರುವ ಇಬ್ಬರು ಅಮೆರಿಕ ಭದ್ರತಾ ಅಧಿಕಾರಿಗಳನ್ನು ತೀವ್ರ ವಿಚಾರಣೆ ನಡೆಸಲಾಗುತ್ತಿದೆ ಎಂದು ವೆನಿಜುವೆಲಾದ ಅಧ್ಯಕ್ಷರ ಕಚೇರಿ ಪ್ರಕಟಣೆ ತಿಳಿಸಿದೆ.

ಮಿಲಿಟರಿ ಪರಿಣತರೊಂದಿಗೆ ಕೆಲಸ ಮಾಡುತ್ತಿದ್ದಾರೆ
ತೈಲ ಉತ್ಪಾದಿಸುವ ದೇಶಕ್ಕೆ ಶಸ್ತ್ರಸಜ್ಜಿತ ಆಕ್ರಮಣ ವಿಫಲವಾಗಿದೆ. ಅಮೆರಿಕದ ಮಿಲಿಟರಿ ಪರಿಣತರೊಂದಿಗೆ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಲಾದ ಇಬ್ಬರು ಯು.ಎಸ್ ನಾಗರಿಕರನ್ನು ವೆನಿಜುವೆಲಾದ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎಂದು ಅಧ್ಯಕ್ಷ ನಿಕೋಲಾಸ್ ಮಡುರೊ ಸೋಮವಾರ ಹೇಳಿದ್ದಾರೆ.












Click it and Unblock the Notifications