'ಚಿನ್ನ ಸಿಕ್ತು ಚಿನ್ನ': ಗುದ್ದಲಿ ಹಿಡಿದು ಬೆಟ್ಟದತ್ತ ಓಡಿದ ಗ್ರಾಮಸ್ಥರು!
ಲುಹಿಹಿ, ಮಾರ್ಚ್ 7: ಆಫ್ರಿಕಾದಲ್ಲಿನ ಕಾಂಗೊ ಗಣರಾಜ್ಯದಲ್ಲಿ ಜನರು ಗುದ್ದಲಿ, ಚೀಲಗಳನ್ನು ಹಿಡಿದು ಬೆಟ್ಟದತ್ತ ಗುಂಪುಗೂಡಿ ಓಡುತ್ತಿದ್ದಾರೆ. ಅಲ್ಲಿನ ಮಣ್ಣು ಅಗೆದು ಹಿಡಿ ಹಿಡಿಯಾಗಿ ಅದನ್ನು ಸೋಸಿ ಚೀಲಕ್ಕೆ ತುಂಬಿಸಿಕೊಳ್ಳುತ್ತಿದ್ದಾರೆ. ಆ ಮಣ್ಣಿನಲ್ಲಿ ಅಂತಹದು ಏನಿದೆ? ಅದು ಬರಿಯ ಮಣ್ಣಲ್ಲ. 'ಚಿನ್ನದ ಮಣ್ಣು'!
ನಿಜ ಕಾಂಗೋದ ಸೌತ್ ಕಿವು ಪ್ರಾಂತ್ಯದ ಗ್ರಾಮವೊಂದರ ಬೆಟ್ಟ ಪ್ರದೇಶದಲ್ಲಿ ಭಾರಿ ಪ್ರಮಾಣದ ಚಿನ್ನದ ನಿಕ್ಷೇಪಗಳು ಇರುವುದು ಪತ್ತೆಯಾಗಿದೆ. ಈ ಸುದ್ದಿ ಗೊತ್ತಾಗುತ್ತಿದ್ದಂತೆಯೇ ಸುತ್ತಮುತ್ತಲಿನಿಮದಲೂ ದಂಡುಕಟ್ಟಿಕೊಂಡು ಬಂದ ಜನರು ಮಣ್ನು ಅಗೆದು ಚಿನ್ನ ಅರಸತೊಡಗಿದ್ದಾರೆ. ಇದು ದೊಡ್ಡ ಸಂಘರ್ಷ, ಅನಾಹುತಗಳಿಗೆ ಎಡೆಮಾಡಿಕೊಡುವ ಅಪಾಯ ಅರಿತ ಅಧಿಕಾರಿಗಳು, ಈ ಭಾಗದಲ್ಲಿ ಗಣಿಗಾರಿಕೆ ಮಾಡುವುದನ್ನು ನಿಷೇಧಿಸಿದ್ದಾರೆ.
ಕಾಂಗೋದ ಸೌತ್ ಕಿವು ಪ್ರಾಂತ್ಯದ ಲುಹಿಹಿ ಗ್ರಾಮದ ಬೆಟ್ಟದಲ್ಲಿ ಚಿನ್ನ ಸಮೃದ್ಧಿಯಾಗಿ ಇರುವುದು ಪತ್ತೆಯಾಗಿದೆ. ಇದನ್ನು ತಿಳಿದ ಗ್ರಾಮಸ್ಥರು ಅಲ್ಲಿ ದೌಡಾಯಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಬೆಟ್ಟದ ಮಣ್ಣಿನಲ್ಲಿ ಶೇ 60-90ರಷ್ಟು ಚಿನ್ನವಿದೆ ಎಂದು ಹೇಳಲಾಗಿದೆ. ಮುಂದೆ ಓದಿ.
|
ವಿಡಿಯೊ ವೈರಲ್
ಗ್ರಾಮಸ್ಥರು ಗುದ್ದಲಿ ಮತ್ತು ಇತರೆ ಉಪಕರಣಗಳಿಂದ ಭೂಮಿಯನ್ನು ಅಗೆದು ಮಣ್ಣಿನಿಂದ ಚಿನ್ನ ಹೊರತೆಗೆಯುವುದರಲ್ಲಿ ಮಗ್ನರಾಗಿರುವುದು, ಇನ್ನು ಕೆಲವರು ತಮ್ಮ ಕೈಯಲ್ಲಿಯೇ ಮಣ್ಣು ಕೆದಕುವುದು ಮತ್ತೊಂದು ವಿಡಿಯೋದಲ್ಲಿ ಕಾಣಿಸಿದೆ.
|
ಗಣಿಗಾರಿಕೆಗೆ ನಿಷೇಧ
ಪ್ರಾಂತ್ಯದ ರಾಜಧಾನಿ ಬುಕಾವುದಿಂದ 50 ಕಿಮೀ ದೂರದಲ್ಲಿರುವ ಸಣ್ಣ ಗ್ರಾಮವಾದ ಲುಹಿಹಿಯಲ್ಲಿ ಚಿನ್ನದ ನಿಕ್ಷೇಪ ಇರುವುದು ಫೆಬ್ರವರಿಯಲ್ಲಿ ಪತ್ತೆಯಾಗಿತ್ತು. ಹೀಗೆ ಅಲ್ಲಿ ಮಣ್ಣು ಅಗೆಯುವವರ ಸಂಖ್ಯೆ ಹೆಚ್ಚಿದ್ದರಿಂದ ಆ ಹಳ್ಳಿಯ ಜನತೆ ಗೊಂದಲ, ಉಗ್ವೇದಗಳಿಗೆ ಒಳಗಾಗಿದ್ದರು. ಜನ ಈ ಚಟುವಟಿಕೆ ತಡೆಯಲು ಅಲ್ಲಿ ಮಣ್ಣು ಅಗೆದು ಚಿನ್ನ ಅರಸುವುದನ್ನು ನಿಷೇಧಿಸಲಾಗಿದೆ ಎಂದು ಸೌತ್ ಕಿವು ಗಣಿಕಾರಿಗೆ ಸಚಿವ ವೆನಾಂತ್ ಬರುಮೆ ಮುಹಿಗಿರ್ವಾ ತಿಳಿಸಿದ್ದಾರೆ.

ಮನೆಯಲ್ಲಿ ಚಿನ್ನ ಸಿದ್ಧ!
'ರಿಪಬ್ಲಿಕ್ ಆಫ್ ಕಾಂಗೊದ ವಿಡಿಯೋ ಇದು. ಈ ದೇಶದ ಕೆಲವು ಗ್ರಾಮಗಳ ಜನರಿಗೆ ದೊಡ್ಡ ಅಚ್ಚರಿ ಕಾದಿತ್ತು. ಇಡೀ ಪರ್ವತ ಚಿನ್ನದಿಂದ ತುಂಬಿಕೊಂಡಿರುವುದು ಪತ್ತೆಯಾಗಿದೆ. ಜನರು ಭೂಮಿ ಅಗೆದು ಮಣ್ಣು ತೆಗೆದು ತಮ್ಮ ಮನೆಗಳಿಗೆ ಸಾಗಿಸಿ ಅಲ್ಲಿ ಕೊಳೆ ತೊಳೆದು ಚಿನ್ನ ಪಡೆದುಕೊಂಡಿದ್ದಾರೆ' ಎಂದು ಪತ್ರಕರ್ತ ಅಹ್ಮದ್ ಅಲ್ಗೊಹ್ಬರಿ ಟ್ವಿಟ್ಟರ್‌ನಲ್ಲಿ ತಿಳಿಸಿದ್ದಾರೆ.

ನೋಂದಾಯಿತರಿಗೆ ಮಾತ್ರ ಅವಕಾಶ
ಆಫ್ರಿಕಾದ ದೇಶಗಳಲ್ಲಿ ಕಸುಬುದಾರ ಚಿನ್ನದ ಗಣಿಗಾರಿಕೆ ಸಾಮಾನ್ಯವಾಗಿದೆ. ಇಲ್ಲಿ ಗಣಿಗಳಿಂದ ಖನಿಜ ಹೊರತೆಗೆಯಲು ವಿಶೇಷ ಯಂತ್ರಗಳಿಲ್ಲ. ಬದಲಾಗಿ ಸಾಮಾನ್ಯ ಗುದ್ದಲಿ, ಪಿಕಾಸಿಗಳನ್ನೇ ಅನೇಕ ಕಡೆ ಬಳಸಲಾಗುತ್ತದೆ. ಇಲ್ಲಿ ಚಿನ್ನದ ನಿಕ್ಷೇಪ ಪತ್ತೆಯಾಗಿರುವುದರಿಂದ ಸೂಕ್ತ ನೋಂದಾಯಿತ ಗಣಿ ಕಂಪೆನಿಗಳು ಮಾತ್ರವೇ ಗಣಿಗಾರಿಕೆ ನಡೆಸಲು ಅನುಮತಿ ನೀಡಲಾಗುತ್ತದೆ. ಅಲ್ಲಿಯವರೆಗೂ ಇಲ್ಲಿ ಜನರು ಮಣ್ಣು ಅಗೆದು ಚಿನ್ನ ತೆಗೆಯುವುದಕ್ಕೆ ನಿಷೇಧ ವಿಧಿಸಲಾಗಿದೆ ಎಂದು ಸಚಿವರು ಹೇಳಿದ್ದಾರೆ.
-
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ!












Click it and Unblock the Notifications