PM Modi US Visit: ಎಲಾನ್ ಮಸ್ಕ್ ಜೊತೆಗೆ ಪ್ರಧಾನಿ ಮೋದಿ ಚರ್ಚೆ, ಜಗತ್ತಿನ ಗಮನ ಸೆಳೆಯುತ್ತಿದೆ ಭೇಟಿ
ಪ್ರಧಾನಿ ಮೋದಿ ಅಮೆರಿಕ ಪ್ರವಾಸ ಕೈಗೊಂಡಿದ್ದು, ಜಾಗತಿಕ ಮಟ್ಟದಲ್ಲಿ ಪ್ರಧಾನಿ ಮೋದಿ ಅವರ ಈ ಪ್ರವಾಸ ಸಾಕಷ್ಟು ಗಮನ ಸೆಳೆದಿದೆ. ಭಾರತ ಮತ್ತು ಅಮೆರಿಕದ ಸಂಬಂಧವನ್ನು ಈ ಭೇಟಿ ಮತ್ತಷ್ಟು ಗಟ್ಟಿಗೊಳಿಸುವ ಜೊತೆಗೆ ಜಾಗತಿಕ ಮಟ್ಟದಲ್ಲಿ ಎರಡೂ ದೇಶಗಳ ಮಧ್ಯೆ ವ್ಯಾಪಾರ & ವಹಿವಾಟು ನಡೆಸಲು ಕೂಡ ಅನುವು ಮಾಡಿಕೊಡಲಿದೆ. ಇಂತಹ ಸಮಯದಲ್ಲೇ ಪ್ರಧಾನಿ ಮೋದಿ ಅವರು ಜಗತ್ತಿನ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಜೊತೆಗೆ ಮಹತ್ವದ ಚರ್ಚೆ ನಡೆಸಲು ಸಿದ್ಧರಾಗಿದ್ದಾರೆ.
ಹೌದು, ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಪ್ರವಾಸ ಕೈಗೊಳ್ಳುವ ವಿಚಾರ ಗೊತ್ತಾದ ತಕ್ಷಣ ಸಾಕಷ್ಟು ಗಮನ ಸೆಳೆದಿತ್ತು. ಯಾಕಂದ್ರೆ ಭಾರತದ ಮಟ್ಟಿಗೆ ಈ ಭೇಟಿ ಪ್ರಮುಖವಾದ ಬೆಳವಣಿಗೆ ಆಗಿದ್ದರೆ, ಜಾಗತಿಕ ಮಟ್ಟದಲ್ಲೂ ಇದು ದೊಡ್ಡ ಪರಿಣಾಮ ಬೀರುವ ಮುನ್ಸೂಚನೆ ಸಿಕ್ಕಿತ್ತು. ಐಟಿ & ಬಿಟಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಭಾರತ, ಅಮೆರಿಕ ನಡುವೆ ಸಾಕಷ್ಟು ಗಟ್ಟಿಯಾದ ಸಂಬಂಧ ಇದೆ. ಈ ಎಲ್ಲಾ ಕಾರಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅಮೆರಿಕದ ಅಧ್ಯಕ್ಷರನ್ನು ಭೇಟಿ ಮಾಡುವ ಜೊತೆಗೆ, ಭಾರತದ ಜೊತೆಗೆ ನಂಟು ಹೊಂದಿರುವ ಅನೇಕ ಉದ್ಯಮಿಗಳನ್ನು ಕೂಡ ಭೇಟಿ ಮಾಡಿ ಚರ್ಚೆ ನಡೆಸಲಿದ್ದಾರೆ.

ಎಲಾನ್ ಮಸ್ಕ್ & ಪ್ರಧಾನಿ ಮೋದಿ ಚರ್ಚೆ
ಪ್ರಧಾನಿ ಮೋದಿ ಅವರು ಇಂದು ಅಮೆರಿಕಗೆ ತೆರಳಿದ್ದು, ಈಗಾಗಲೇ ಹಲವು ಉದ್ಯಮಿಗಳ ಜೊತೆ ಮಾತುಕತೆ ನಡೆಸಿದ್ದಾರೆ. ಪ್ರಮುಖವಾಗಿ ಎಲಾನ್ ಮಸ್ಕ್ ಜೊತೆಗೂ ಪ್ರಧಾನಿ ನರೇಂದ್ರ ಮೋದಿ ಇನ್ನೇನು ಕೆಲವೇ ಹೊತ್ತಲ್ಲಿ ಮಾತುಕತೆ ನಡೆಸಲಿದ್ದಾರೆ. ಎಲಾನ್ ಮಸ್ಕ್ ಜೊತೆಗಿನ ಚರ್ಚೆಯ ವೇಳೆ, ಭಾರತದಲ್ಲಿ ಟೆಸ್ಲಾ ಉದ್ಯಮ & ಸ್ಟಾರ್‌ಲಿಂಕ್ ಕುರಿತು ಮಹತ್ವದ ಚರ್ಚೆ ನಡೆಯಲಿದೆ ಎನ್ನಲಾಗಿದೆ.
ಟ್ರಂಪ್ ಜೊತೆಯಲ್ಲೂ ಮಹತ್ವದ ಮಾತುಕತೆ
ಅಮೆರಿಕ & ಭಾರತ ನಡುವೆ ಪ್ರತಿ ವರ್ಷ ಲಕ್ಷಾಂತರ ಕೋಟಿ ರೂಪಾಯಿ ವ್ಯಾಪಾರ ನಡೆಯುತ್ತೆ, ಈ ವ್ಯವಹಾರದ ಭಾಗವಾಗಿ ಎರಡೂ ದೇಶಗಳ ಸಂಬಂಧ ಇನ್ನಷ್ಟು ಗಟ್ಟಿಯಾಗಿದೆ. ಹೀಗಿದ್ದಾಗ ಪ್ರಧಾನಿ ಮೋದಿ ಅವರು ಹಲವು ವಿಚಾರಗಳ ಬಗ್ಗೆ ಅಮೆರಿಕದ ನೂತನ ಅಧ್ಯಕ್ಷ ಟ್ರಂಪ್ ಅವರ ಜೊತೆಗೆ ಚರ್ಚೆ ನಡೆಸಲಿದ್ದಾರೆ. ಸೇನಾ ಸರಕುಗಳ ಖರೀದಿ ವಿಚಾರವು ಕೂಡ ಮುನ್ನೆಲೆಗೆ ಬರುವ ಸಾಧ್ಯತೆ ಇದೆ.
ಒಟ್ನಲ್ಲಿ ಪ್ರಧಾನಿ ಮೋದಿ ಅವರ ಅಮೆರಿಕ ಭೇಟಿ ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಹಾಗೇ ಮುಂದಿನ ದಿನಗಳಲ್ಲಿ ಎರಡೂ ದೇಶಗಳ ಬಾಂಧವ್ಯ ಇನ್ನಷ್ಟು ಗಟ್ಟಿಯಾಗಲು ಇದೇ ಭೇಟಿ ಇನ್ನಷ್ಟು ಸಹಾಯ ಮಾಡುವ ನಿರೀಕ್ಷೆ ಇದೆ. ಹೀಗಾಗಿ, ಯಾವೆಲ್ಲಾ ನಿರ್ಧಾರಗಳನ್ನು ಈ ಭೇಟಿಯಲ್ಲಿ ಕೈಗೊಳ್ಳಲಾಗುತ್ತೆ? ಎಂಬುದನ್ನು ಕಾದು ನೋಡಬೇಕಿದೆ.












Click it and Unblock the Notifications