Mocha Cyclone: ಮ್ಯಾನ್ಮಾರ್‌ನಲ್ಲಿ ಅಬ್ಬರಿಸಿದ ಮೋಚಾ ಚಂಡಮಾರುತ: ಬಲಿಯಾದವರ ಸಂಖ್ಯೆ 81ಕ್ಕೆ ಏರಿಕೆ!
ಮ್ಯಾನ್ಮಾರ್‌ನಲ್ಲಿ ಮೋಚಾ ಚಂಡಮಾರುತ ಅಬ್ಬರಿಸುತ್ತಿದೆ. ಮೋಚಾ ಚಂಡಮಾರುತದಿಂದಾಗಿ ಮ್ಯಾನ್ಮಾರ್ ಜನ ತತ್ತರಿಸಿ ಹೋಗಿದ್ದಾರೆ. ವೇಗವಾಗಿ ಬೀಸುತ್ತಿರುವ ಗಾಳಿ ಹಾಗೂ ಮಳೆಗೆ ಜನಜೀವನವೇ ಅಸ್ತವ್ಯಸ್ಥವಾಗಿದೆ. ಕಳೆದ ಕೆಲ ದಿನಗಳಿಂದ ಅವಾಂತರ ಸೃಷ್ಟಿ ಮಾಡಿದ ಮೋಚಾಕ್ಕೆ ಅಪಾರ ಆಸ್ತಿ ಹಾಗೂ ಜೀವ ಹಾನಿ ಸಂಭವಿಸಿದೆ. ಸ್ಥಳೀಯ ನಾಯಕರು, ಅಧಿಕಾರಿಗಳು ಮತ್ತು ರಾಜ್ಯ ಮಾಧ್ಯಮಗಳು ಮಾಡಿದ ವರದಿ ಪ್ರಕಾರ ಮ್ಯಾನ್ಮಾರ್‌ನಲ್ಲಿ ಮೋಕಾ ಚಂಡಮಾರುತಕ್ಕೆ ಬಲಿಯಾದವರ ಸಂಖ್ಯೆ 81ಕ್ಕೆ ಏರಿಕೆಯಾಗಿದೆ.
ಮೋಚಾ ಭಾನುವಾರದಂದು ಗಂಟೆಗೆ 195 ಕಿಲೋಮೀಟರ್ (120 ಮೈಲುಗಳು) ವೇಗದ ಗಾಳಿಯೊಂದಿಗೆ ಅಪಾರ ನಾಶಕ್ಕೆ ಕಾರಣವಾಗಿದೆ. ಇದರಿಂದಾಗಿ ಮ್ಯಾನ್ಮಾರ್‌ನಲ್ಲಿ ಹಲವೆಡೆ ಭೂಕುಸಿತ ಉಂಟಾಗಿದೆ. ವಿದ್ಯುತ್ ಕಂಬಗಳು, ಮರಗಳು ಹಾಗೂ ಮನೆಗಳು ಧರಗೆ ಉರುಳಿವೆ. ಇನ್ನೂ ಹಲವೆಡೆ ಮರಗಳು ಮನೆ ಹಾಗೂ ವಾಹನಗಳ ಮೇಲೆ ಉರುಳಿ ಅಪಾರ ಹಾನಿಯಾಗಿದೆ. ಜೊತೆಗಿದು ಮೀನುಗಾರಿಕೆ ತೊಂದರೆಯನ್ನುಂಟು ಮಾಡಿದೆ. ಗ್ರಾಮಸ್ಥರು ಪಾಳುಬಿದ್ದ ಮನೆಗಳನ್ನು ಒಟ್ಟುಗೂಡಿಸಲು ಸಹಾಯಕ್ಕಾಗಿ ಕಾಯುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಕಂಡುಬಂದಿವೆ.

ಮೋಚಾ ಚಂಡಮಾರುತ ಮ್ಯಾನ್ಮಾರ್‌ನ ರೋಹಿಂಗ್ಯಾದಲ್ಲಿ ಹೆಚ್ಚು ಹಾನಿಯನ್ನುಂಟು ಮಾಡಿದೆ. ರೋಹಿಂಗ್ಯಾದಲ್ಲಿ ವಾಸಿಸುವ ಮುಸ್ಲಿಂ ಅಲ್ಪಸಂಖ್ಯಾತ ಬು ಮಾ ಮತ್ತು ಸಮೀಪದ ಖೌಂಗ್ ಡೋಕೆ ಕರ್ ಎಂಬ ರಾಖೈನ್ ರಾಜ್ಯದ ಗ್ರಾಮಗಳಲ್ಲಿ ಕನಿಷ್ಠ 46 ಜನರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಮುಖಂಡರು ಎಎಫ್‌ಪಿ ವರದಿಗಾರರಿಗೆ ತಿಳಿಸಿದ್ದಾರೆ.
ಮ್ಯಾನ್ಮಾರ್ ಸ್ಟೇಟ್ ಬ್ರಾಡ್‌ಕಾಸ್ಟರ್ ಎಂಆರ್‌ಟಿವಿ ಪ್ರಕಾರ, ರಾಖೈನ್‌ನ ರಾಜಧಾನಿ ಸಿಟ್ವೆಯ ಉತ್ತರದಲ್ಲಿರುವ ರಾಥೆಡಾಂಗ್ ಟೌನ್‌ಶಿಪ್‌ನ ಹಳ್ಳಿಯಲ್ಲಿ ಮಠವೊಂದು ಕುಸಿದು ಬಿದ್ದು 13 ಜನರು ಸಾವನ್ನಪ್ಪಿದ್ದಾರೆ. ಜೊತೆಗೆ ಪಕ್ಕದ ಹಳ್ಳಿಯಲ್ಲಿ ಕಟ್ಟಡವೊಂದು ಕುಸಿದು ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ಚಂಡಮಾರುತದಿಂದಾಗಿ ನೂರಕ್ಕೂ ಹೆಚ್ಚು ಜನರು ಕಾಣೆಯಾಗಿರುವುದರಿಂದ ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ.

ಮೋಚಾ ಚಂಡಮಾರುತ ಎಷ್ಟು ಬಲಶಾಲಿಯಾಗಿತ್ತು ಎನ್ನುವ ಬಗ್ಗೆ ಸ್ಥಳೀಯ ಸಂತ್ರಸ್ತರು ಪ್ರತಿಕ್ರಿಯೆ ನೀಡಿದ್ದಾರೆ. "ಚಂಡಮಾರುತದ ಮೊದಲು ನಾನು ಉತ್ತಮ ಆರೋಗ್ಯವನ್ನು ಹೊಂದಿರಲಿಲ್ಲ, ಆದ್ದರಿಂದ ನನ್ನ ಕುಟುಂಬದವರು ಎಲ್ಲಾ ಸೇರಿ ಬೇರೆ ಸ್ಥಳಕ್ಕೆ ತೆರಳಲು ನಿರ್ಧರಿಸಿದೆವು. ನಾವು ಚಲಿಸುತ್ತಿರುವಾಗ ಅಲೆಗಳು ತಕ್ಷಣವೇ ಬಂದು ನಮ್ಮನ್ನು ಕರೆದೊಯ್ದವು. ಈ ವೇಳೆ ನನ್ನ ಮಗಳು ಸಾವನ್ನಪ್ಪಿದ್ದಾಳೆ. ನಾವು ತಕ್ಷಣ ಅವಳನ್ನು ಸಮಾಧಿ ಮಾಡಿದೆವು. ನನ್ನ ನಷ್ಟವನ್ನು ವ್ಯಕ್ತಪಡಿಸಲು ನನಗೆ ಯಾವುದೇ ಪದಗಳಿಲ್ಲ" ಎಂದು ಸಂತ್ರಸ್ತ ಬುಲ್ ಹು ಸನ್ ಸುದ್ದಿಗಾರರ ಮುಂದೆ ಹೇಳಿಕೊಂಡಿದ್ದಾರೆ.
'ಮೋಚಾ ಚಂಡಮಾರುತದಿಂದ ಹಲವಾರು ಜನ ಕಾಣೆಯಾಗಿದ್ದಾರೆ. ಇತರ ನಿವಾಸಿಗಳು ಚಂಡಮಾರುತದ ಉಲ್ಬಣದಿಂದ ಕಾಣೆಯಾದ ಕುಟುಂಬ ಸದಸ್ಯರನ್ನು ಸಮುದ್ರ ತೀರದಲ್ಲಿ ಹುಡುಕುತ್ತಿದ್ದಾರೆ' ಎಂದು ಎಎಫ್‌ಪಿ ವರದಿಗಾರರು ತಿಳಿಸಿದ್ದಾರೆ.
ಸಿಟ್ವೆ ಬಳಿ ಸ್ಥಳಾಂತರಗೊಂಡ ರೋಹಿಂಗ್ಯಾಗಳಿಗಾಗಿ ನಿರ್ಮಿಸಿದ ದಪಾಯಿಂಗ್ ಶಿಬಿರದಲ್ಲಿ ಒಂಬತ್ತು ಜನರು ಸಾವನ್ನಪ್ಪಿದ್ದಾರೆ. ಜೊತೆಗೆ ವೇಗವಾಗಿ ಬೀಸುತ್ತಿರುವ ಗಾಳಿಯಿಂದಾಗಿ ಪೀಡಿತ ಸ್ಥಳಗಳಿಗೆ ಆಹಾರ ಸರಬರಾಜು ಸಾಧ್ಯವಾಗುತ್ತಿಲ್ಲ.
ಹಲವೆಡೆ ಸೇತುವೆಗಳು ಒಡೆದು ಹೋಗಿರುವುದರಿಂದ ಜನರು ನಮ್ಮ ಶಿಬಿರಕ್ಕೆ ಬರಲು ಸಾಧ್ಯವಾಗುತ್ತಿಲ್ಲ. ನಮಗೆ ಸಹಾಯ ಬೇಕು ಎಂದು ಸ್ಥಳೀಯರು ಸಹಾಯಹಸ್ತ ಕೋರಿದರೂ ಸಹಾಯ ಮಾಡದ ಸ್ಥಿತಿ ಎದುರಾಗಿದೆ. ಇದರಿಂದಾಗಿ ಓಹ್ನ್ ತಾವ್ ಛೇ ಗ್ರಾಮದಲ್ಲಿ ಒಬ್ಬರು ಮತ್ತು ಓಹ್ನ್ ತಾವ್ ಗಿಯಲ್ಲಿ ಆರು ಮಂದಿ ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಮುಖಂಡರು ಮತ್ತು ಅಧಿಕಾರಿಗಳು ಎಎಫ್‌ಪಿಗೆ ತಿಳಿಸಿದ್ದಾರೆ.
ಮೋಚಾ ಒಂದು ದಶಕಕ್ಕೂ ಹೆಚ್ಚು ಅವಧಿಯ ನಂತರ ಈ ಪ್ರದೇಶಕ್ಕೆ ಅಪ್ಪಳಿಸಿರುವ ಅತ್ಯಂತ ಶಕ್ತಿಶಾಲಿ ಚಂಡಮಾರುತವಾಗಿದೆ. ಈ ವಿನಾಶಕಾರಿಯನ್ನು ಗಮನಿಸಿದ ಚೀನಾ ತುರ್ತು ವಿಪತ್ತು ಪರಿಹಾರ ನೆರವು ನೀಡಲು ಮುಂದಾಗಿದೆ.
ಈ ನಡುವೆ ಮಂಗಳವಾರ ಸುಮಾರು 150,000 ಜನರಿಗೆ ನೆಲೆಯಾಗಿರುವ ಸಿಟ್ವೆಯೊಂದಿಗೆ ಸಂಪರ್ಕವನ್ನು ನಿಧಾನವಾಗಿ ಮರುಸ್ಥಾಪಿಸಲಾಗುತ್ತಿದೆ ಎಂದು AFP ವರದಿಗಾರರು ಹೇಳಿದ್ದಾರೆ. ರಸ್ತೆಗಳನ್ನು ತೆರವುಗೊಳಿಸಲಾಗಿದೆ ಮತ್ತು ಇಂಟರ್ನೆಟ್ ಸಂಪರ್ಕಗಳನ್ನು ಮರುಸ್ಥಾಪಿಸಲಾಗಿದೆ. ವಾಣಿಜ್ಯ ಕೇಂದ್ರವಾದ ಯಾಂಗೋನ್‌ನಲ್ಲಿರುವ ಹಡಗಿನಲ್ಲಿ ರಾಖೈನ್‌ಗೆ ಬಂದ ಸಹಾಯವನ್ನು ಲೋಡ್ ಮಾಡುವುದನ್ನು ರಾಜ್ಯ ಮಾಧ್ಯಮವೊಂದು ಬಿಡುಗಡೆ ಮಾಡಿದ ಫೋಟೋಗಳು ತೋರಿಸಿವೆ. ಆದರೂ ತಮಗೆ ಸಹಾಯ ಸಿಕ್ಕಲ್ಲ ಎಂದು ಸಂತ್ರಸ್ತರು ಹೇಳಿಕೊಂಡಿದ್ದಾರೆ.












Click it and Unblock the Notifications