Israel: ಟಿವಿ ಲೈವ್ ಸಮಯದಲ್ಲೇ ರಿಪೋರ್ಟರ್ ಹಿಂದೆ ಬಿದ್ದ ಬಾಂಬ್!

ಇಸ್ರೇಲ್ ಮತ್ತು ಹಮಾಸ್ ಬಂಡುಕೋರರ ನಡುವೆ ಆರಂಭವಾಗಿರುವ ಯುದ್ಧ ಭಯಾನಕ ಸ್ವರೂಪ ಪಡೆದಿದೆ. ಹಾಗೇ ಸೋಷಿಯಲ್ ಮೀಡಿಯಾದಲ್ಲಿ, ಈ ಯುದ್ಧದ ವಿಡಿಯೋಗಳು ಭಯ ಹುಟ್ಟಿಸುತ್ತಿವೆ. ಅದೇ ರೀತಿ ಈಗ ಟಿವಿ ಲೈವ್‌ನಲ್ಲೇ ಬಾಂಬ್ ಬೀಳುವ ದೃಶ್ಯ ಕೂಡ ರೆಕಾರ್ಡ್ ಆಗಿದೆ. ಅದರಲ್ಲೂ ಲೈವ್ ಕೊಡುತ್ತಿದ್ದ ರಿಪೋರ್ಟರ್ ಹಿಂದೆ ಮಿಸೈಲ್ ಬಂದು ಬಿದ್ದಿದೆ. ಹಾಗಾದರೆ ಹೇಗಿತ್ತು ಈ ಭಯಾನಕ ಕ್ಷಣ?

ಶನಿವಾರ ಹಮಾಸ್ ಉಗ್ರರು ಇಸ್ರೇಲ್‌ನ ಮೇಲೆ 5000ಕ್ಕೂ ಹೆಚ್ಚು ರಾಕೆಟ್‌ ಮೂಲಕ ಅಟ್ಯಾಕ್ ಮಾಡಿದ್ದರು. ಸಾವಿರಾರು ಉಗ್ರರು ಕೈಯಲ್ಲಿ ಶಸ್ತ್ರಾಸ್ತ್ರ & ಬಾಂಬ್‌ ಹಿಡಿದು ಇಸ್ರೇಲ್ ಒಳಗಡೆಗೆ ನುಗ್ಗಿದ್ದರು. ಹೀಗೆ ಗಾಜಾಪಟ್ಟಿ ಮೂಲಕ ಹಮಾಸ್ ಉಗ್ರರು ಇಸ್ರೇಲ್‌ನ ಒಳಗೆ ನುಗ್ಗಿದ್ದರು. ಉಗ್ರರ ಕೃತ್ಯದ ವಿರುದ್ಧ ರೊಚ್ಚಿಗೆದ್ದಿದ್ದ ಇಸ್ರೇಲ್ ಪ್ರಧಾನಿ ಯುದ್ಧ ಘೋಷಿಸಿದ್ದಾರೆ. ತಮ್ಮ ಮೇಲೆ ದಾಳಿ ಮಾಡಿರುವ ಉಗ್ರರ ನೆಲೆಗಳ ಮೇಲೆ ಇಸ್ರೇಲ್ ಮರು ದಾಳಿ ಶುರು ಮಾಡಿದೆ. ಹೀಗೆ ಇಸ್ರೇಲ್ ಸೇನೆ ದಾಳಿ ವೇಳೆ ಅಂತಾರಾಷ್ಟ್ರೀಯ ಮಾಧ್ಯಮದ ರಿಪೋರ್ಟರ್ ಒಬ್ಬರು ಕೂದಲೆಳೆ ಅಂತರದಲ್ಲಿ ಬಚಾವ್ ಆಗಿದ್ದಾರೆ.

Missile attacking live footage has been recorded in a TV Show

ದಿಢೀರ್ ಬಂದು ಬಿತ್ತು ಮಿಸೈಲ್ ಬಾಂಬ್!

ಅಷ್ಟಕ್ಕೂ ಆಗಿದ್ದೇನು ಅಂದ್ರೆ, ಇಸ್ರೇಲ್ & ಹಮಾಸ್ ನಡುವೆ ನಡೆಯುತ್ತಿರುವ ಯುದ್ಧದ ಬಗ್ಗೆ ಗಾಝಾ ಪಟ್ಟಿಯಿಂದ ಲೈವ್ ವರದಿ ನೀಡುತ್ತಿದ್ದರು ಅಲ್‌ ಜಝೀರಾ ವರದಿಗಾರ್ತಿ. ಆದರೆ ಈ ಸಮಯದಲ್ಲಿ ಅಲ್‌ ಜಝೀರಾದ ರಿಪೋರ್ಟರ್ ಕೂತಿದ್ದ ಹಿಂದಿನ ಕಟ್ಟಟದ ಮೇಲೆ ಮಿಸೈಲ್ ಬಂದು ಬಿದ್ದಿದೆ. ಇನ್ನು ಲೈವ್ ನಡೆಯುತ್ತಿದ್ದ ಕಾರಣ ಘಟನೆಯ ಸಂಪೂರ್ಣ ದೃಶ್ಯವಾಳಿ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದೆ. ತಕ್ಷಣ ಬೆಚ್ಚಿಬಿದ್ದ ರಿಪೋರ್ಟರ್, ಅಲ್ಲಿಂದ ಓಡಿದ್ದಾರೆ. ಆಗ ಭಯಪಡದೆ ಮಾತನಾಡುವಂತೆ ಟಿವಿ ಕಚೇರಿಯಲ್ಲಿದ್ದ ನಿರೂಪಕರು ಕೇಳಿದ್ದಾರೆ. ಈ ವೇಳೆ ಅಲ್‌ ಜಝೀರಾದ ರಿಪೋರ್ಟರ್ ಅಳುತ್ತಿರುವಂತೆ ಹಿಂದಿನಿಂದ ಧ್ವನಿ ಕೇಳಿ ಬಂದಿದೆ.

ತನ್ನ ನೆಲದ ಮೇಲೆ ದಾಳಿ ಮಾಡಿದ ಹಮಾಸ್ ವಿರುದ್ಧ ಇಸ್ರೇಲ್ ಕೂಡ ರೊಚ್ಚಿಗೆದ್ದು ಈ ರೀತಿ ಅಟ್ಯಾಕ್ ಮಾಡುತ್ತಿದೆ. ಇಸ್ರೇಲ್ ಪುಟಾಣಿ ದೇಶ ಆಗಿದ್ದರೂ ಅದರ ಸೇನೆ ಶಕ್ತಿ ಬಲಶಾಲಿ ದೇಶಗಳನ್ನೇ ಮೀರಿಸಿ ನಿಲ್ಲುತ್ತದೆ. ಡ್ರೋನ್‌ ಸೇರಿದಂತೆ, ಒಟ್ಟಾರೆ 684 ಯುದ್ಧ ವಿಮಾನಗಳು ಇಸ್ರೇಲ್ ವಾಯು ಸೇನೆಯಲ್ಲಿ ಇವೆ. 34,000 ಸೈನಿಕರು ಮತ್ತು 55,000 ಮೀಸಲು ಸೈನಿಕರೂ ಸಿದ್ಧರಾಗಿ ತಮ್ಮ ದೇಶ ಕಾಪಾಡಲು ಮುಂದಾಗಿದ್ದಾರೆ. ಹೀಗಾಗಿ ಗಾಜಾ ಪಟ್ಟಿಯ ಮೇಲೆಯೇ ಇಸ್ರೇಲ್ ನಿರಂತರವಾಗಿ ಟಾರ್ಗೆಟ್ ಮಾಡಿ ದಾಳಿ ಮಾಡುತ್ತಿದೆ. ಏಕೆಂದರೆ ಹಾಮಾಸ್ ಉಗ್ರ ಪಡೆ ಇದೇ ಭಾಗದಲ್ಲಿ ಹೆಚ್ಚಾಗಿ ಅಡಗಿರುವ ಆರೋಪ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+