ಅಪಹರಣದಲ್ಲಿ ಗೆಳತಿಯ ಕೈವಾಡವಿದೆ ಎಂದು ದೂರು ನೀಡಿದ ಮೆಹುಲ್ ಚೋಕ್ಸಿ
ನವದೆಹಲಿ, ಜೂನ್ 7: ಸಾವಿರಾರು ಕೋಟಿ ವಂಚನೆಯ ಆರೋಪ ಹೊತ್ತಿರುವ ಮೆಹುಲ್ ಚೋಕ್ಸಿ ಈಗ ಡೊಮಿನಿಕಾ ಪೊಲೀಸರ ವಶದಲ್ಲಿದ್ದು ವಿಚಾರಣೆಯನ್ನು ಎದುರಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಮೆಹುಲ್ ಚೋಕ್ಸಿ ಮೇ 23ರಂದು ಆಂಟಿಗುವಾದ ಪೊಲೀಸರು ಎಂದು ಹೇಳಿ ಕೆಲ ವ್ಯಕ್ತಿಗಳು ತನ್ನ ಮೇಲೆ ನಿರ್ದಯವಾಗಿ ಹಲ್ಲೆಯನ್ನು ನಡೆಸಿದ್ದರು ಎಂದು ಚೋಕ್ಸಿ ಸೋಮವಾರ ದೂರನ್ನು ನೀಡಿದ್ದಾರೆ.
ಆಂಟಿಗುವಾ ಪೊಲೀಸರಿಗೆ ಸಲ್ಲಿಸಿದ ದೂರಿನಲ್ಲಿ ಚೋಕ್ಸಿ "8-10 ಜನರ ತಂಡ ಆಂಟಿಗುವಾ ಪೊಲೀಸರು ಎಂದು ಹೇಳಿಕೊಂಡು ನಿರ್ದಯವಾಗಿ ಹಲ್ಲೆಯನ್ನು ನಡೆಸಿದ್ದಾರೆ. ಆ ಹಲ್ಲೆಯಿಂದ ನಾನು ಪ್ರಜ್ಞೆ ತಪ್ಪಿದ್ದೆ. ಈ ಸಂದರ್ಭದಲ್ಲಿ ನನ್ನಲ್ಲಿದ್ದ ವಾಚ್, ಫೋನ್ ಹಾಗೂ ವ್ಯಾಲೆಟ್ ಪಡೆದುಕೊಂಡರು. ದರೋಡೆ ಮಾಡುವುದಿಲ್ಲ ಎಂದು ತಿಳಿಸಿದ ಅವರು ಬಳಿಕ ನನಗೆ ಹಣವನ್ನು ಹಿಂದಿರುಗಿಸಿದರು" ಉಲ್ಲೇಖಿಸಲಾಗಿದೆ.
ಇನ್ನು ಈ ಸಂದರ್ಭದಲ್ಲಿ ಮೆಹುಲ್ ಚೋಕ್ಸಿಯ ಗೆಳತಿಯ ಬಗ್ಗೆಯೂ ದೂರಿನಲ್ಲಿ ತಿಳಿಸಿದ್ದಾರೆ ಎಂದು ಎಎನ್‌ಐ ಸುದ್ಧಿಸಂಸ್ಥೆ ಉಲ್ಲೇಖಿಸಿದೆ. "ಕಳೆದ ಕೆಲ ವರ್ಷಗಳಿಂದ ಬಾರ್ಬರಾ ಜಬಾರಿಕಾ( ಮೆಹುಲ್ ಚೋಕ್ಸಿಯ ಶಂಕಿತ ಗೆಳತಿ)ಜೊತೆಗೆ ಉತ್ತಮ ಸ್ನೇಹವಿತ್ತು. ಮೇ 23ರಂದು ತನ್ನನ್ನು ಮನೆಯಿಂದ ಪಿಕ್ ಮಾಡುವಂತೆ ಹೇಳಿಕೊಂಡಿದ್ದಳು. ನಾನು ಅಲ್ಲಿಗೆ ತೆರಳಿದಾಗ ಮನೆಯ ಪ್ರವೇಶ ದ್ವಾರದ ಬಳಿ 8-10 ಜನ ಆಗಮಿಸಿದರು ಮತ್ತು ನನ್ನ ಮೇಲೆ ನಿರ್ದಯವಾಗಿ ಹಲ್ಲೆ ನಡೆಸಿದರು. ಈ ಸಂದರ್ಭದಲ್ಲಿ ಆಕೆ ನನ್ನ ಮೇಲಿನ ಹಲ್ಲೆಯನ್ನು ತಡೆಯುವ ಯಾವ ಪ್ರಯತ್ನವನ್ನು ಕೂಡ ಮಾಡಲಿಲ್ಲ. ಆ ದಾರಿಯಲ್ಲಿ ಸಾಗುತ್ತಿದ್ದ ಯಾರನ್ನೂ ಸಹಾಯಕ್ಕೆ ಕರೆಯಲಿಲ್ಲ. ಇದು ನನ್ನನ್ನು ಅಪಹರಿಸುವ ಈ ಯೋಜನೆಯಲ್ಲಿ ಆಕೆಯೂ ಸಂಪೂರ್ಣವಾಗಿ ಭಾಗಿಯಾಗಿರುವುದನ್ನು ಸ್ಪಷ್ಟಪಡಿಸುತ್ತದೆ" ಎಂದು ದೂರಿನಲ್ಲಿ ತಿಳಸಿಲಾಗಿದೆ.

ಈ ಮಧ್ಯೆ ಡೊಮೆನಿಕಾ ಪ್ರಧಾನಿ ರೂಸ್‌ವೆಲ್ಟ್ ಸ್ಕೆರಿಟ್ ಪ್ರಕಟಣೆಯನ್ನು ನೀಡಿದ್ದು ಮೆಹುಲ್ ಚೋಕ್ಸಿಯ ಹಕ್ಕುಗಳನ್ನು ಸಂಪೂರ್ಣವಾಗಿ ಗೌರವಿಸಲಾಗುತ್ತದೆ ಎಂದಿದ್ದಾರೆ. "ಈವರೆಗೆ ನಡೆಸಿಕೊಂಡಂತೆಯೇ ಮೆಹುಲ್ ಚೋಕ್ಸಿ ಅವರ ಹಕ್ಕುಗಳನ್ನು ಗೌರವಿಸಲಾಗುತ್ತದೆ. ಮುಂದೆ ಏನಾಗುತ್ತದೆ ಎಂಬುದನ್ನು ನ್ಯಾಯಾಲಯ ನಿರ್ಧರಿಸಲಿದೆ ಎಂದು ಪತ್ರಿಕಾ ಪ್ರಕಟಣೆಯನ್ನು ತಿಳಿಸಿದ್ದಾರೆ.
"ಈ ವಿಚಾರ ಭಾರತ ಹಾಗೂ ಆಂಟಿಗುವಾ ಸಂಬಂಧಿಸಿರುವುದರಿಂದ ನಮಗೆ ಯಾವುದೇ ಸಮಸ್ಯೆಗಳಿಲ್ಲ. ನಾವು ನಮ್ಮ ಸಮುದಾಯದ ಭಾಗವಾಗಿದ್ದೇವೆ ಮತ್ತು ಈ ನಿಟ್ಟಿನಲ್ಲಿ ನಮ್ಮ ಕರ್ತವ್ಯಗಳನ್ನು ಮತ್ತು ಜವಾಬ್ದಾರಿಗಳನ್ನು ನಾವು ಕಂಡುಕೊಳ್ಳುತ್ತೇವೆ" ಎಂದು ಡೊಮಿನಿಕಾ ಪ್ರಧಾನಿ ಪತ್ರಿಕಾ ಹೇಳಿಕೆಯಲ್ಲಿ ಪ್ರತಿಕ್ರಿಯಿಸಿದ್ದಾರೆ.
-
Gold Rate Today: ಬೆಂಗಳೂರಿನಲ್ಲಿ ಚಿನ್ನದ ದರ ಮತ್ತೆ ಏರಿಕೆ: 15,000 ರೂಪಾಯಿ ಗಡಿ ದಾಟಿದ 24 ಕ್ಯಾರೆಟ್ ಚಿನ್ನ -
World Happiness Report 2026: ಫಿನ್ಲೆಂಡ್ ಜಗತ್ತಿನ ಅತ್ಯಂತ ಸಂತೋಷದಾಯಕ ದೇಶ: ನಮ್ಮ ಭಾರತಕ್ಕೆ ಸಿಕ್ಕ ಸ್ಥಾನವೆಷ್ಟು? -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ಸ್ಥಳ: ಸಚಿವ ಎಂ.ಬಿ.ಪಾಟೀಲ್ ಮಹತ್ವದ ಮಾಹಿತಿ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Gold Rate Today: ಬೆಂಗಳೂರಿನಲ್ಲಿ ಚಿನ್ನದ ದರ ಮತ್ತೆ ಏರಿಕೆ: 15,000 ರೂಪಾಯಿ ಗಡಿ ದಾಟಿದ 24 ಕ್ಯಾರೆಟ್ ಚಿನ್ನ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ












Click it and Unblock the Notifications