ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೈದ್ಯಕೀಯ ಚಿಕಿತ್ಸೆ ಕಾರಣ: ಜಾಮೀನು ಸಿಕ್ಕ ಬೆನ್ನಲ್ಲೇ ಡೊಮೆನಿಕಾ ತೊರೆದ ಮೆಹುಲ್ ಚೋಕ್ಸಿ

|
Google Oneindia Kannada News

ನವದೆಹಲಿ, ಜೂನ್ 15: ತೀವ್ರ ಅನಾರೋಗ್ಯದ ಹಿನ್ನೆಲೆ ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡಿರುವ ಉದ್ಯಮಿ ಮೆಹುಲ್ ಚೋಕ್ಸಿ ವೈದ್ಯಕೀಯ ಚಿಕಿತ್ಸೆ ಪಡೆಯುವುದಕ್ಕಾಗಿ ಆಂಟಿಗುವಾ ಮತ್ತು ಬರ್ಬುದಾಗೆ ಹಿಂತಿರುಗಿದ್ದಾರೆ.

ಮೆಹುಲ್ ಚೋಕ್ಸಿ ಅಕ್ರಮವಾಗಿ ಡೊಮಿನಿಕಾ ಗಡಿ ಪ್ರವೇಶಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ 51 ದಿನಗಳ ಕಾಲ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಅವರ ಪರ ವಕೀಲರು ಮಾತ್ರ ಚೋಕ್ಸಿ ಅಪಹರಿಸಲ್ಪಟ್ಟಿದ್ದರು ಎಂದು ವಾದ ಮಂಡಿಸುತ್ತಿದ್ದಾರೆ.

ಡೊಮಿನಿಕಾ ನ್ಯಾಯಾಲಯದಿಂದ ಮೆಹುಲ್ ಚೋಕ್ಸಿಗೆ ವೈದ್ಯಕೀಯ ಜಾಮೀನುಡೊಮಿನಿಕಾ ನ್ಯಾಯಾಲಯದಿಂದ ಮೆಹುಲ್ ಚೋಕ್ಸಿಗೆ ವೈದ್ಯಕೀಯ ಜಾಮೀನು

"ನಮ್ಮ ಕಕ್ಷಿದಾರ ಮೆಹುಲ್ ಚೋಕ್ಸಿ ಸುರಕ್ಷಿತವಾಗಿ ಆಂಟಿಗುವಾದ ತಮ್ಮ ನಿವಾಸಕ್ಕೆ ವಾಪಸ್ ಆಗಿದ್ದಾರೆ. ಆಂಟಿಗುವಾಗೆ ಹಿಂತಿರುಗುವ ವೇಳೆ ಯಾವುದೇ ಸಮಸ್ಯೆಗಳು ಆಗಲಿಲ್ಲ. ಚೋಕ್ಸಿ ಸದ್ಯ ವೈದ್ಯಕೀಯ ಚಿಕಿತ್ಸೆಯನ್ನು ಪಡೆಯುತ್ತಿದ್ದು, ಕುಟುಂಬ ಸದಸ್ಯರು ನಿರಾಳರಾಗಿದ್ದಾರೆ. ಆದರೆ ಅಪಹರಣಕ್ಕೊಳಗಾದ ಸಂದರ್ಭದಲ್ಲಿ ತೀವ್ರ ಚಿತ್ರಹಿಂಸೆ, ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಲಾಗಿದೆ. ಎಲ್ಲವೂ ಸುಖಾಂತ್ಯ ಕಂಡಿದೆ. ಡೊಮಿನಿಕಾದಲ್ಲಿ ಯಶಸ್ಸಿನ ನಂತರ, ಈಗ ಆಂಟಿಗುವಾದಲ್ಲಿ ಕಾನೂನು ಹೋರಾಟಕ್ಕೆ ನಮ್ಮ ತಂಡವು ಸಜ್ಜಾಗಿದೆ," ಎಂದು ಮೆಹುಲ್ ಚೋಕ್ಸಿ ಪರ ವಕೀಲ ವಿಜಯ್ ಅಗರ್ವಾಲ್ ಹೇಳಿದ್ದಾರೆ.

ವೈದ್ಯಕೀಯ ಕಾರಣಕ್ಕೆ ಚೋಕ್ಸಿಗೆ ಕೋರ್ಟ್ ಜಾಮೀನು

ವೈದ್ಯಕೀಯ ಕಾರಣಕ್ಕೆ ಚೋಕ್ಸಿಗೆ ಕೋರ್ಟ್ ಜಾಮೀನು

ಕಳೆದ ವಾರವಷ್ಟೇ ಉದ್ಯಮಿ ಮೆಹುಲ್ ಚೋಕ್ಸಿಗೆ ವೈದ್ಯಕೀಯ ಚಿಕಿತ್ಸೆ ಪಡೆಯುವುದಕ್ಕಾಗಿ ಕೆರಿಬಿಯನ್ ಕೋರ್ಟ್ ಜಾಮೀನು ಮಂಜೂರು ಮಾಡಿತ್ತು. ಆಂಟಿಗುವಾ ಮತ್ತು ಬರ್ಬುದಾದಲ್ಲಿ ಚಿಕಿತ್ಸೆ ಪಡೆಯುವುದಕ್ಕೆ ಅವಕಾಶ ನೀಡಿತ್ತು. 10,000 ಕೆರಿಬಿಯನ್ ಡಾಲರ್ ಬಾಂಡ್ ಸಲ್ಲಿಸುವುದು ಹಾಗೂ ಚಿಕಿತ್ಸೆ ನಂತರದಲ್ಲಿ ಡೊಮಿನಿಕಾಗೆ ವಾಪಸ್ ಆಗುವಂತೆ ಷರತ್ತು ವಿಧಿಸಲಾಗಿತ್ತು.

ಆಂಟಿಗುವಾ To ಡೊಮಿನಿಕಾ ಕಿಡ್ನಾಪ್ ಸ್ಟೋರಿ ಹಿಂದಿನ ರೋಚಕತೆ

ಆಂಟಿಗುವಾ To ಡೊಮಿನಿಕಾ ಕಿಡ್ನಾಪ್ ಸ್ಟೋರಿ ಹಿಂದಿನ ರೋಚಕತೆ

ಕಳೆದ ಮೇ 23ರಂದು ರಾತ್ರಿ ವೇಳೆ ಭಾರತೀಯ ಮೂಲದ ಪುರುಷರು ಹಾಗೂ ಮಹಿಳೆಯ ಜಬಾರಿಕಾ ಸೇರಿದಂತೆ ಮೆಹುಲ್ ಚೋಕ್ಸಿ ಅಪಹರಣ ಕಾರ್ಯಾಚರಣೆಯಲ್ಲಿ ಭಾಗಿಯಾದವರ ಭಾವಚಿತ್ರ ಮತ್ತು ವಿಡಿಯೋವನ್ನು ಇಂಗ್ಲೆಂಡಿನ ತನಿಖಾ ತಂಡವು ಬಿಡುಗಡೆಗೊಳಿಸಿದೆ. "ಯುವತಿಯನ್ನು ಬಳಸಿಕೊಂಡು ಉದ್ಯಮಿ ಮೆಹುಲ್ ಚೋಕ್ಸಿ ಅನ್ನು ವ್ಹೀಲ್ ಚೇರ್ ಹಾಗೂ ಬೋಟ್ ಮೂಲಕ ಅಂಟಿಗುವಾದಿಂದ ಡೊಮಿನಿಕಾಗೆ ಕರೆದುಕೊಂಡು ಹೋಗಲಾಗಿದೆ," ಎಂದು ಯುಕೆ ತನಿಖಾ ತಂಡವು ಹೇಳಿತ್ತು.

ಮೆಹುಲ್ ಚೋಕ್ಸಿ ಡೊಮಿನಿಕಾಗೆ ತಲುಪಿದ್ದು ಯಾವಾಗ?

ಮೆಹುಲ್ ಚೋಕ್ಸಿ ಡೊಮಿನಿಕಾಗೆ ತಲುಪಿದ್ದು ಯಾವಾಗ?

ಕಳೆದ ಮೇ 23ರಂದು ರಾತ್ರಿ 10 ಗಂಟೆ ಸುಮಾರಿಗೆ ಆರ್ಕ್‌ನ ಯಾಚ್ ಕ್ಯಾಲಿಯೋಪ್‌ನಲ್ಲಿ ಚೋಕ್ಸಿಯನ್ನು ಡೊಮಿನಿಕಾಗೆ ಕರೆತರಲಾಯಿತು ಎಂದು ಡೊಮಿನಿಕಾ ವಿರೋಧ ಪಕ್ಷದ ನಾಯಕ ಲೆನಾಕ್ಸ್ ಲಿಂಟನ್ ಹೇಳಿಕೆ ನೀಡಿರುವ ಬಗ್ಗೆ ಅಸೋಸಿಯೇಟ್ಸ್ ಟೈಮ್ಸ್ನ ವರದಿ ಮಾಡಿದೆ. ಮೇ 23 ರಂದು ಸಂಜೆ 5 ಗಂಟೆಯವರೆಗೆ ಅವರು ಆಂಟಿಗಾದಲ್ಲಿದ್ದರು ಎಂದು ಚೋಕ್ಸಿ ಅವರ ಕುಟುಂಬ ಹೇಳಿಕೊಂಡಿದ್ದು, ನಾಲ್ಕರಿಂದ ಐದು ಗಂಟೆಗಳಲ್ಲಿ 120 ಮೈಲಿ ದೂರವನ್ನು ಕ್ರಮಿಸಲು ಅಸಾಧ್ಯವಾಗುತ್ತದೆ. ಅದಕ್ಕೆ ಕನಿಷ್ಠ 12-13 ಗಂಟೆ ಬೇಕಾಗುತ್ತದೆ. ಕಸ್ಟಮ್ಸ್ ದಾಖಲೆಯ ಪ್ರಕಾರ, ದೋಣಿ ಆಂಟಿಗಾದಿಂದ ಬೆಳಿಗ್ಗೆ 10 ಗಂಟೆಗೆ ಹೊರಟಿದೆ ಎಂದು ಹೇಳಿದ ವರದಿಗೆ ಇದು ವಿರುದ್ಧವಾಗಿದೆ. ಲಿಂಟನ್ ಹೇಳಿಕೊಳ್ಳುವ ದೋಣಿಯಲ್ಲಿ ಚೋಕ್ಸಿ ಪ್ರಯಾಣಿಸಲಿಲ್ಲ ಎಂಬುದನ್ನು ಈ ವ್ಯತ್ಯಾಸವೇ ಸೂಚಿಸುತ್ತದೆ.

ಭಾರತೀಯ ಬ್ಯಾಂಕಿಗೆ ಮಾವ ಅಳಿಯ ಹಾಕಿದ ಮಕ್ಮಲ್ ಟೋಪಿ

ಭಾರತೀಯ ಬ್ಯಾಂಕಿಗೆ ಮಾವ ಅಳಿಯ ಹಾಕಿದ ಮಕ್ಮಲ್ ಟೋಪಿ

ಭಾರತದ ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ 13,500 ಕೋಟಿ ರೂಪಾಯಿ ವಂಚನೆ ಆರೋಪ ಎದುರಿಸುತ್ತಿರುವ ಮೆಹುಲ್ ಚೋಕ್ಸಿ ಹಾಗೂ ಆತನ ಸೋದರಳಿಯ ನೀರವ್ ಮೋದಿ 2018ರ ಜನವರಿ ಮೊದಲ ವಾರದಲ್ಲಿ ದೇಶ ಬಿಟ್ಟು ಪರಾರಿಯಾಗಿದ್ದರು. ಭಾರತದಿಂದ ಯುರೋಪಿಗೆ ಓಡಿ ಹೋದ ನೀರವ್ ಮೋದಿ ಅಂತಿಮವಾಗಿ ಇಂಗ್ಲೆಂಡಿನಲ್ಲಿ ಪತ್ತೆಯಾಗಿದ್ದು, ಆತನನ್ನು ಭಾರತಕ್ಕೆ ಹಸ್ತಾಂತರಿಸುವ ಬಗ್ಗೆ ಕಾನೂನು ಪ್ರಕ್ರಿಯೆಗಳು ನಡೆಯುತ್ತಿವೆ. ಇನ್ನೊಂದು ಕಡೆಯಲ್ಲಿ 2017ರಲ್ಲೇ ಆಂಟಿಗಾ ಮತ್ತು ಬರ್ಬುಡಾ ರಾಷ್ಟ್ರಗಳ ನಾಗರಿಕತ್ವ ಪಡೆದುಕೊಂಡ ಮೆಹುಲ್ ಚೋಕ್ಸಿ ಇಲ್ಲಿಯವರೆಗೂ ಅದೇ ದೇಶದಲ್ಲಿ ವಾಸವಾಗಿದ್ದರು.

English summary
Businessman Mehul Choksi returns to Antigua and Barbuda for medical treatment, after bail.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X