Get Updates
Get notified of breaking news, exclusive insights, and must-see stories!

ಉದ್ಯಮಿ ಮೆಹುಲ್ ಚೋಕ್ಸಿ ಬಂಧನದ ಹಿಂದೆ ಪ್ರಣಯ ಪ್ರವಾಸದ ಕಥೆ!

ನವದೆಹಲಿ, ಮೇ 31: ಪಂಜಾಬ್ ನ್ಯಾಷನಲ್ ಬ್ಯಾಂಕ್(ಪಿಎನ್ ಬಿ) ಬಹು ಕೋಟಿ ವಂಚನೆ ಪ್ರಕರಣದ ಪ್ರಮುಖ ಆರೋಪಿ ಹಾಗೂ ವಜ್ರದ ವ್ಯಾಪಾರಿ ಮೆಹುಲ್ ಚೋಕ್ಸಿ ಬಂಧನದ ಹಿಂದೆ ಪ್ರಣಯ ಪ್ರವಾಸದ ಕಥೆಯನ್ನು ಆಂಟಿಗಾ ಹಾಗೂ ಬರ್ಬುಡಾ ಪ್ರಧಾನಮಂತ್ರಿ ಗ್ಯಾಸ್ಟನ್ ಬ್ರೌನ್ ಬಿಚ್ಚಿಟ್ಟಿದ್ದಾರೆ.

ಪ್ರೇಯಸಿ ಜೊತೆಗೆ ಪ್ರಣಯ ಪ್ರವಾಸಕ್ಕೆ ತೆರಳಿದ ವೇಳೆ ಡೊಮಿನಿಕಾದಲ್ಲಿ ಉದ್ಯಮಿ ಮೆಹುಲ್ ಚೋಕ್ಸಿಯನ್ನು ಪೊಲೀಸರು ಬಂಧಿಸಿದ್ದರು ಎಂಬುದಾಗಿ ಆಂಟಿಗಾ ಸುದ್ದಿ ವಾಹಿನಿ ವರದಿ ಮಾಡಿದೆ. ಆಂಟಿಗಾ ಮತ್ತು ಬರ್ಬುಡಾದಿಂದ ತಲೆ ಮರೆಸಿಕೊಂಡು ಅಕ್ರಮವಾಗಿ ಕೆರಿಬಿಯನ್ ರಾಷ್ಟ್ರ ಪ್ರವೇಶಿಸಲು ಯತ್ನಿಸಿದ ಭಾರತದ ನಂಬರ್ 1 ಸುಸ್ತಿದಾರ 13,500 ಕೋಟಿ ರೂಪಾಯಿ ವಂಚನೆ ಪ್ರಕರಣದ ಪ್ರಮುಖ ಆರೋಪಿ ಮೆಹುಲ್ ಚೋಕ್ಸಿ ಅನ್ನು ಮಂಗಳವಾರ ಕೆರಿಬಿಯನ್ ಪೊಲೀಸರು ಬಂಧಿಸಿದ್ದರು.

ಉದ್ಯಮಿ ಮೆಹುಲ್ ಚೋಕ್ಸಿ ವಿರುದ್ಧ ಆಂಟಿಗುವಾ ಮತ್ತು ಬಾರ್ಬುಡಾ ರಾಷ್ಟ್ರವು ಇಂಟರ್ಪೋಲ್ ಹಳದಿ ನೋಟಿಸ್ ನೀಡಿದ ನಂತರ ಬಂಧಿಸಲಾಯಿತು. ಕಳೆದ ಭಾನುವಾರ ಡಿನ್ನರ್ ಗೆ ಹೋಗಿದ್ದ ಚೋಕ್ಸಿ ಹಿಂತಿರುಗಿ ಬಂದಿಲ್ಲ ಎಂಬುದಾಗಿ ಕುಟುಂಬ ಸದಸ್ಯರು ಹಾಗೂ ವಕೀಲ ವಿಜಯ್ ಅಗರ್ವಾಲ್ ದೂರು ನೀಡಿದ್ದರು.

Mehul Choksi Arrested When Goes Romantic Trip With Girlfriend At Caribbean Nation

ಜೈಲಿನಲ್ಲಿ ಮೆಹುಲ್ ಚೋಕ್ಸಿ ಚಿತ್ರ:

ದೇಶಭ್ರಷ್ಟ ವಜ್ರದ ವ್ಯಾಪಾರಿ ಮೆಹುಲ್ ಚೋಕ್ಸಿ ಸದ್ಯ ಡೊಮಿನಿಕಾದಲ್ಲಿ ಜೈಲಿನಲ್ಲಿರುವ ಚಿತ್ರ ಬಿಡುಗಡೆಯಾಗಿದೆ. ಆತನನ್ನು ಭಾರತಕ್ಕೆ ವಿಚಾರಣೆಗೆ ಕಳುಹಿಸುವಂತೆ ಈಗಾಗಲೇ ಅಧಿಕೃತವಾಗಿ ಮನವಿ ಸಲ್ಲಿಸಲಾಗಿದೆ. ಜೈಲಿನಲ್ಲಿ ಕಂಬಿ ಹಿಂದಿರುವ ಮೆಹುಲ್ ಚೋಕ್ಸಿ ಕಣ್ಣುಗಳು ಊದಿಕೊಂಡಿದ್ದು, ದೇಹದ ಮೇಲೆ ಗಾಯದ ಗುರುತುಗಳು ಪತ್ತೆಯಾಗಿವೆ. ಕಳೆದ 2018ರಲ್ಲಿ ದೇಶವನ್ನು ತೊರೆದ ಆರೋಪಿ ಮೆಹುಲ್ ಚೋಕ್ಸಿ ಕೆರಿಬಿಯನ್ ರಾಷ್ಟ್ರಕ್ಕೆ ಪಲಾಯನ ಮಾಡಿದ್ದನು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+