ಎಚ್ಚರ... ಮಾಂಸಾಹಾರದಿಂದ 3 ಪಟ್ಟು ಹೆಚ್ಚುತ್ತೆ ಕಿಡ್ನಿ ಸಮಸ್ಯೆ
ವಾಷಿಂಗ್ಟನ್, ಫೆ. 13: ನೀರು ಮೂತ್ರಪಿಂಡ ಸಮಸ್ಯೆ ಹೊಂದಿದ್ದೀರಾ? ಹಾಗಿದ್ದರೆ ಅತಿಯಾದ ಮಾಂಸಾಹಾರದಿಂದ ದೂರವುಳಿಯುವುದು ಒಳಿತು. ಇಲ್ಲದಿದ್ದರೆ ಮೂತ್ರಪಿಂಡ ಸಂಪೂರ್ಣ ವಿಫಲವಾಗುವ ಅಪಾಯ ಮೂರು ಪಟ್ಟು ಹೆಚ್ಚಾಗಿರುತ್ತದೆ.
ರೋಗಿಗಳು ಕೆಲವು ದಿನಕ್ಕಾದರೂ ತಮ್ಮ ಮಾಂಸಾಹಾರದ ಮೇಲಿನ ಪ್ರೀತಿಯನ್ನು ಕಡಿಮೆಗೊಳಿಸಿಕೊಳ್ಳಲೇಬೇಕು. ಇದರ ಬದಲು ಹಣ್ಣು ಹಾಗೂ ತರಕಾರಿಗಳನ್ನು ತಿನ್ನುವುದು ಒಳಿತು.
ಅಮೆರಿಕದ ಸ್ಯಾನ್‌ಫ್ರಾನ್ಸಿಸ್ಕೋ ನಗರದಲ್ಲಿರುವ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಸಂಶೋಧಕರು ನಡೆಸಿದ ಅಧ್ಯಯನದ ವರದಿಯಲ್ಲಿ ಈ ಎಚ್ಚರಿಕೆ ನೀಡಲಾಗಿದೆ. ಅಮೆರಿಕದ American Society of Nephrology (JASN) ಜರ್ನಲ್‌ನಲ್ಲಿ ಇದು ಪ್ರಕಟಗೊಂಡಿದೆ.

ಕಾರಣವೇನು? : ಹಣ್ಣು ಮತ್ತು ತರಕಾರಿಗಳಲ್ಲಿ ಕಡಿಮೆ ಆಸಿಡ್ ಡೈಯಟ್ ಇರುತ್ತದೆ. ಆದರೆ, ಮಾಂಸಾಹಾರದಲ್ಲಿ ಹೆಚ್ಚು ಆಸಿಡ್ ಡಯಟ್ ಇರುತ್ತದೆ. ಆದ್ದರಿಂದ ಈಗಾಗಲೇ ಮೂತ್ರಪಿಂಡ ಸಮಸ್ಯೆ ಹೊಂದಿರುವವರು ಹೆಚ್ಚು ಆಸಿಡ್ ಅಂಶವಿರುವ ಆಹಾರ ತಿಂದರೆ ಇನ್ನಷ್ಟು ತೊಂದರೆಗೊಳಲಾಗುತ್ತಾರೆ.
ಅಧ್ಯಯನ ತಂಡ 1,486 ಯುವಕರನ್ನು ಅಧ್ಯಯನಕ್ಕೊಳಪಡಿಸಿ ಈ ನಿರ್ಣಯಕ್ಕೆ ಬಂದಿದೆ. ಮೂತ್ರಪಿಂಡ ಸಮಸ್ಯೆ ಹೊಂದಿರುವವರಿಗೆ ಮಾಂಸಾಹಾರ ತಿನ್ನಿಸಿದಾಗ ಅದರಲ್ಲಿನ ಅತಿಯಾದ ಆಸಿಡ್ ಅಂಶದಿಂದ ಆರೋಗ್ಯ ಇನ್ನಷ್ಟು ಹದಗೆಟ್ಟಿತು.
"ಮೂತ್ರಪಿಂಡ ಸಮಸ್ಯೆ ಹೊಂದಿರುವವರು ಆದಷ್ಟು ಆಸಿಡ್ ಅಂಶವಿರುವ ಆಹಾರಗಳಿಂದ ದೂರವಿರಬೇಕು. ರೋಗಿಗಳು ಹಣ್ಣು ಮತ್ತು ತರಕಾರಿ ಸೇವನೆಗೆ ಪ್ರಾಮುಖ್ಯತೆ ನೀಡುವುದು ಒಳಿತು" ಎಂದು ಸಂಶೋಧನಾ ತಂಡದ ಸದಸ್ಯೆಯಾದ ಭಾರತೀಯ ಮೂಲದ ತನುಶ್ರೀ ಬ್ಯಾನರ್ಜಿ ತಿಳಿಸಿದ್ದಾರೆ.












Click it and Unblock the Notifications