ಪೆರುವಿನ ಕರಾವಳಿಯಲ್ಲಿ ಭಾರಿ ಭೂಕಂಪ, ಸುನಾಮಿ ಭೀತಿ

Posted By:
Subscribe to Oneindia Kannada

ಲಿಮಾ, ಜನವರಿ 14: ದಕ್ಷಿಣ ಅಮೆರಿಕಾದ ರಾಷ್ಟ್ರ ಪೆರುವಿನ ಕರಾವಳಿಯಲ್ಲಿಂದು ಭಾರಿ ಭೂಕಂಪ ಸಂಭವಿಸಿದ್ದು, ಸುನಾಮಿ ಎಚ್ಚರಿಕೆ ನೀಡಲಾಗಿದೆ.

ಪೆರುವಿನ ಪಿಕ್ಯೂಯೋ ನಗರದ ನೈಋತ್ಯಭಾಗದ 124 ಕಿಮೀ ದೂರದ ಪ್ರದೇಶದಲ್ಲಿ ಸಂಭವಿಸಿದ ಭೂಕಂಪದ ಪ್ರಮಾಣ ರಿಕ್ಚರ್ ಮಾಪಕದಲ್ಲಿ 7.3 ರಷ್ಟು ದಾಖಲಾಗಿದೆ.

Massive 7.3 magnitude earthquake hits coast of Peru

ಪೆಸಿಫಿಕ್ ಸುನಾಮಿ ಎಚ್ಚರಿಕೆ ಕೇಂದ್ರ ಹಾಗೂ ಯುಎಸ್ ಭೂಗರ್ಭ ಸಮೀಕ್ಷಾ ಕೇಂದ್ರದಿಂದ ಪೆರು ಹಾಗೂ ಚಿಲಿಯಲ್ಲಿ ಸುನಾಮಿ ಭೀತಿ ಎಚ್ಚರಿಕೆ ನೀಡಲಾಗಿದೆ.

ಸುಮಾರು 1-3 ಅಡಿ ಎತ್ತರದ ಅಲೆಗಳು ಏಳುವ ಸಾಧ್ಯತೆಯಿದ್ದು, ಭೂಕಂಪದ ಕೇಂದ್ರ ಬಿಂದುವಿನಿಂದ ಸುಮಾರು 300 ಕಿ.ಮೀ ವ್ಯಾಪ್ತಿಯ ತನಕ ಸುನಾಮಿ ಭೀತಿ ಹರಡಿದೆ. ಆದರೆ, ಯುಎಸ್ಎನ ಪಶ್ಚಿಮ ಕರಾವಳಿಗೆ ಸುನಾಮಿ ಭೀತಿಯ ಎಚ್ಚರಿಕೆ ನೀಡಲಾಗಿಲ್ಲ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A tsunami threat has been issued in Peru and Chile following a powerful earthquake just off the coast of South America.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ