ಇನ್ಮುಂದೆ ವಿಮಾನದಲ್ಲಿ ಮಾಸ್ಕ್ ಕಡ್ಡಾಯವಿಲ್ಲ: EU ನಿರ್ಧಾರ

ಎಲ್ಲೆಡೆ ಕೊರೊನಾವೈರಸ್ ನಿರ್ಬಂಧಗಳನ್ನು ಸರಾಗಗೊಳಿಸುತ್ತಿರುವ ಬೆನ್ನಲ್ಲೇ ಮುಂದಿನ ವಾರದಿಂದ ವಿಮಾನ ನಿಲ್ದಾಣಗಳಲ್ಲಿ ಮತ್ತು ವಿಮಾನಗಳಲ್ಲಿ ಇನ್ನು ಮುಂದೆ ಮಾಸ್ಕ್‌ಗಳ ಬಳಕೆ ಕಡ್ಡಾಯವಾಗಿರುವುದಿಲ್ಲ ಎಂದು ಯುರೋಪಿಯನ್ ಯೂನಿಯನ್ ಬುಧವಾರ ಹೇಳಿದೆ.

ಯುರೋಪಿಯನ್ ಯೂನಿಯನ್‌ನ ಏವಿಯೇಷನ್ ​​ಸೇಫ್ಟಿ ಏಜೆನ್ಸಿಯು ಯುರೋಪಿಯನ್ ಸೆಂಟರ್ ಫಾರ್ ಡಿಸೀಸ್ ಪ್ರಿವೆನ್ಶನ್ ಅಂಡ್ ಕಂಟ್ರೋಲ್‌ನೊಂದಿಗೆ ಮಾಡಿದ ಜಂಟಿ ನಿರ್ಧಾರ ಇದಾಗಿದೆ. ಇದರಿಂದ ಪ್ರಯಾಣಿಕರು ಮತ್ತು ಸಿಬ್ಬಂದಿಗಳಿಗೆ ವಿಮಾನ ಪ್ರಯಾಣ ಸುಗಮಗೊಳಿಸಲು ಒಂದು ದೊಡ್ಡ ಹೆಜ್ಜೆ ಇಟ್ಟಂತಾಗಿದೆ ಎಂದು ಅದು ಆಶಿಸುತ್ತಿದೆ ಎಂದು ಮಾಹಿತಿ ನೀಡಿದೆ.

ಹೊಸ ಮಾರ್ಗಸೂಚಿ ಪ್ರಕಾರ "ಸಾಂಕ್ರಾಮಿಕ ರೋಗದ ಇತ್ತೀಚಿನ ಬೆಳವಣಿಗೆಗಳನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ. ವ್ಯಾಕ್ಸಿನೇಷನ್ ನಿರೀಕ್ಷಿತ ಮಟ್ಟ ತಲುಪಿದೆ ಮತ್ತು ಇದರಿಂದ ಸ್ವಾಭಾವಿಕವಾಗಿ ರೋಗನಿರೋಧಕ ಶಕ್ತಿ ಹೆಚ್ಚಾಗಿದೆ. ಯುರೋಪಿಯನ್ ದೇಶಗಳಲ್ಲಿ ಕೊರೊನಾ ನಿರ್ಬಂಧಗಳನ್ನು ತೆಗೆದುಹಾಕುವುದು. ಹೀಗಾಗಿ ವಿಮಾನದಲ್ಲೂ ಇನ್ನು ಮುಂದೆ ಕೊರೊನಾ ನಿಯಮಗಳನ್ನು ಕಡ್ಡಾಯಗೊಳಿಸುವುದಿಲ್ಲ" ಎಂದು ಎರಡು ಏಜೆನ್ಸಿಗಳು ಜಂಟಿ ಹೇಳಿಕೆಯಲ್ಲಿ ತಿಳಿಸಿವೆ.

Mask is not mandatory in flight: EU decision

"ಪ್ರಯಾಣಿಕರು ಜವಾಬ್ದಾರಿಯುತವಾಗಿ ವರ್ತಿಸಬೇಕು ಮತ್ತು ಇತರರ ಆಯ್ಕೆಗಳನ್ನು ಗೌರವಿಸಬೇಕು" ಎಂದು EASA ಕಾರ್ಯನಿರ್ವಾಹಕ ನಿರ್ದೇಶಕ ಪ್ಯಾಟ್ರಿಕ್ ಕೈ ಹೇಳಿದ್ದಾರೆ. "ಕೆಮ್ಮುವ ಮತ್ತು ಸೀನುವ ಪ್ರಯಾಣಿಕರು ಹತ್ತಿರದಲ್ಲಿ ಕುಳಿತಿರುವವರಿಗೆ ಧೈರ್ಯ ತುಂಬಲು ಫೇಸ್ ಮಾಸ್ಕ್ ಧರಿಸುವುದನ್ನು ಬಲವಾಗಿ ಪರಿಗಣಿಸಬೇಕು" ಎಂದು ಪ್ಯಾಟ್ರಿಕ್ ಕೈ ಹೇಳಿದ್ದಾರೆ.

Mask is not mandatory in flight: EU decision

ಹೊಸ ಶಿಫಾರಸುಗಳು ಮೇ 16 ರಿಂದ ಜಾರಿಗೆ

ಆರೋಗ್ಯಕರ ಸ್ಥಳಗಳಿಗನುಸಾರ ಮಾಸ್ಕ್ ಕಡ್ಡಾಯವಿರುತ್ತದೆ. ಏರ್‌ಲೈನ್‌ನಲ್ಲಿ ಹೊಸ ಶಿಫಾರಸುಗಳು ಮೇ 16 ರಿಂದ ಜಾರಿಗೆ ಬರಲಿದೆ. ಕೈ ತೊಳೆಯುವುದು ಮತ್ತು ಸಾಮಾಜಿಕ ಅಂತರವನ್ನು ಇನ್ನೂ ಅಭ್ಯಾಸ ಮಾಡಬೇಕು ಎಂದು ಯುರೋಪಿಯನ್ ಸೆಂಟರ್ ಫಾರ್ ಡಿಸೀಸ್ ಪ್ರಿವೆನ್‌ಮೆಂಟ್ ಮತ್ತು ಕಂಟ್ರೋಲ್ ನಿರ್ದೇಶಕ ಆಂಡ್ರಿಯಾ ಅಮ್ಮೋನ್ ಹೇಳಿದ್ದಾರೆ. ಭವಿಷ್ಯದಲ್ಲಿ ಅಗತ್ಯವಿದ್ದಲ್ಲಿ ಪ್ರಯಾಣಿಕರ ಲೊಕೇಟರ್ ಮಾಹಿತಿಯನ್ನು ಸಂಗ್ರಹಿಸಲು ಏರ್‌ಲೈನ್‌ಗಳು ವ್ಯವಸ್ಥೆಗಳನ್ನು ಸ್ಟ್ಯಾಂಡ್‌ಬೈನಲ್ಲಿ ಇರಿಸಿಕೊಳ್ಳಲು ಏಜೆನ್ಸಿಗಳು ಶಿಫಾರಸು ಮಾಡುತ್ತವೆ. ಉದಾಹರಣೆಗೆ ಹೊಸ ಅಪಾಯಕಾರಿ ರೂಪಾಂತರವು ಹೊರಹೊಮ್ಮಿದರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+