ಮಂಗಳ ಗ್ರಹದ ಮೇಲೆ ಏಲಿಯನ್ ಪಡೆ? ಆಕಾಶದಲ್ಲಿ ಅನುಮಾನಾಸ್ಪದ ವಸ್ತು ತಂದಿದೆ ಸಂಕಷ್ಟ... Planet Mars
ಮಂಗಳ ಸದಾ ಕುತೂಹಲದ ಗೂಡಾಗಿದ್ದು, ಮಂಗಳ ಗ್ರಹ ಪದೇ ಪದೇ ಮನುಷ್ಯರ ಗಮನವನ್ನ ಸೆಳೆಯುವ ತಾಣವಾಗಿದೆ. ಭೂಮಿ ಮೇಲೆ ಇರುವ ಜೀವಿಗಳು ಮಂಗಳ ಗ್ರಹದಿಂದಲೇ ಬಂದಿದ್ದು ಅನ್ನೋ ವಾದ ಕೂಡ ಇದೆ. ಈ ಎಲ್ಲಾ ವಾದ & ವಿವಾದದ ನಡುವೆ ಇದೀಗ ದಿಢೀರ್ ಸ್ಫೋಟಕ ಸುದ್ದಿಯೊಂದು ಸಂಚಲನ ಸೃಷ್ಟಿ ಮಾಡಿದೆ. ಸೌರಮಂಡಲದ ಒಳಗೆ ಸುತ್ತಾಡುತ್ತಿರುವ ಅನುಮಾನ ಮೂಡಿಸುವ ಆಕಾಶಕಾಯ ಒಂದು ಏಲಿಯನ್ ನೌಕೆ ರೀತಿ ಭಾಸವಾಗಿದೆ. ಇದರ ಸುತ್ತ ಹಗಲು & ರಾತ್ರಿ ಲೆಕ್ಕಿಸದೆ ನಮ್ಮ ವಿಜ್ಞಾನಿಗಳು ಕಣ್ಣು ಇಟ್ಟಿರುವ ಸಮಯದಲ್ಲೇ ಮತ್ತೊಂದು ಮಾಹಿತಿ ತಲ್ಲಣ ಎಬ್ಬಿಸಿದೆ...
ಹೌದು, ಭೂಮಿ ಮೇಲೆ ಮಾತ್ರ ಜೀವಿಗಳು ಇವೆಯಾ? ಬ್ರಹ್ಮಾಂಡ ಇಷ್ಟು ದೊಡ್ಡದಾಗಿ ಇದ್ದು, ಇಡೀ ಬ್ರಹ್ಮಾಂಡದಲ್ಲಿ ನಮ್ಮ ರೀತಿ ಜೀವಿಗಳು ಇಲ್ಲವಾ? ಎಂಬ ಚರ್ಚೆ ಪದೇ ಪದೇ ನಡೆಯುತ್ತಾ ಬಂದಿದೆ. ಎಲ್ಲವನ್ನೂ ಮೀರಿ ಆಗಾಗ ವಿಜ್ಞಾನಿಗಳು ಕೂಡ ಬಾಹ್ಯಾಕಾಶದಲ್ಲಿ ದೂರದ ಜಾಗದಲ್ಲಿ ಒಂದೊಂದು ಹೊಸ ಗ್ರಹವನ್ನು ಗುರುತಿಸುವ ಕೆಲಸ ಮಾಡುತ್ತಾ ಇರುತ್ತಾರೆ. ಇಷ್ಟೆಲ್ಲದರ ಮಧ್ಯೆ ಇದೀಗ ನಮ್ಮ ಸೌರಮಂಡಲಕ್ಕೇ ಎಂಟ್ರಿ ಕೊಟ್ಟಿರುವ ಆಕಾಶಕಾಯ ಒಂದು ಭಾರಿ ಕುತೂಹಲಕ್ಕೆ ಕಾರಣಾಗಿತ್ತು. ಆದರೆ ಈಗ ಅದು ಮಂಗಳ ಗ್ರಹದ ಬಳಿ ಕಂಡು ಬಂದಿದೆ! ಹಾಗಾದರೆ ಮಂಗಳ ಗ್ರಹದಲ್ಲಿ ಏಲಿಯನ್ಸ್ ಎಂಟ್ರಿ ಕೊಟ್ಟಿವೆಯಾ?

ಮಂಗಳ ಗ್ರಹದಲ್ಲಿ ಏಲಿಯನ್ಸ್ ಎಂಟ್ರಿ?
ಭೂಮಿ ನಾಶವಾಗುವ ಭಯ ಕಾಡುತ್ತಿರುವ ಸಮಯದಲ್ಲೇ, ಭವಿಷ್ಯದ ದೃಷ್ಟಿಯಿಂದ ಮಂಗಳ ಗ್ರಹದ ಬಗ್ಗೆ ವಿಜ್ಞಾನಿಗಳು ಪ್ರತಿಕ್ಷಣವೂ ಅಧ್ಯಯನ ಮಾಡುತ್ತಿದ್ದಾರೆ. ಮಂಗಳ ಗ್ರಹದಲ್ಲಿ ನಾವು ಜೀವಿಸಬಹುದೇ? ಭೂಮಿಯಿಂದ ಹೋಗಿ ಮನುಷ್ಯರು ಮಂಗಳ ಗ್ರಹದಲ್ಲಿ ವಾಸ ಮಾಡಬಹುದಾ? ಎಂಬ ಪ್ರಶ್ನೆಗಳು ಮೂಡುತ್ತಲೇ ಇವೆ. ಇಷ್ಟೆಲ್ಲದರ ನಡುವೆ ಇದೀಗ ರಿವೀಲ್ ಆಗಿರುವ ಫೋಟೋ ಬಾಹ್ಯಾಕಾಶ ಲೋಕದಲ್ಲಿ ಏಲಿಯನ್ಸ್ ಅಂದ್ರೆ ಪರಗ್ರಹ ಜೀವಿಗಳ ಬಗ್ಗೆ ತಲ್ಲಣವನ್ನೇ ಸೃಷ್ಟಿಸಿದೆ.












Click it and Unblock the Notifications