ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರವಾದಿ ಅವಹೇಳನ; ಹಲವು ರಾಷ್ಟ್ರಗಳ ಖಂಡನೆ

|
Google Oneindia Kannada News

ನವದೆಹಲಿ, ಜೂ. 7: ಪ್ರವಾದಿ ಮೊಹಮ್ಮದ್‌ ಪೈಗಂಬರ್‌ ಕುರಿತು ಬಿಜೆಪಿ ರಾಷ್ಟ್ರೀಯ ವಕ್ತಾರರಾಗಿದ್ದ ನೂಪೂರ್‌ ಶರ್ಮಾ ಅವಹೇಳನಕಾರಿ ಹೇಳಿಕೆ ಹಿನ್ನೆಲೆ ಹಲವು ಅರಬ್‌ ರಾಷ್ಟ್ರಗಳು ಟೀಕೆಗಳನ್ನು ವ್ಯಕ್ತಪಡಿಸಿವೆ. ಯುಎಇ, ಜೋರ್ಡಾನ್‌ ಮತ್ತು ಇಂಡೋನೇಷ್ಯಾ ಸೇರಿದಂತೆ ಹಲವು ರಾಷ್ಟ್ರಗಳು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದು, ಈಗಾಗಲೇ ಕುವೈತ್‌, ಒಮನ್‌ ಪಾಕಿಸ್ತಾನ, ಕತಾರ್‌ ದೇಶಗಳು ಘಟನೆ ಖಂಡಿಸಿವೆ.

ಸೋಮವಾರವೇ ಯುಎಇಯ ವಿದೇಶಾಂಗ ವ್ಯವಹಾರ ಮತ್ತು ಅಂತರರಾಷ್ಟ್ರೀಯ ಸಹಕಾರ ಸಚಿವಾಲಯ (MoFAIC) ನೈತಿಕ ಮತ್ತು ಮಾನವೀಯ ಮೌಲ್ಯಗಳು ಮತ್ತು ತತ್ವಗಳಿಗೆ ವಿರುದ್ಧವಾದ ಎಲ್ಲಾ ನಡವಳಿಕೆಗಳನ್ನು ಜೊತೆಗೆ ದ್ವೇಷದ ಮಾತು ಮತ್ತು ಹಿಂಸೆಯನ್ನು ತಿರಸ್ಕರಿಸುವುದಾಗಿ ತಿಳಿಸಿತು. ಯುಎಇ ಧಾರ್ಮಿಕ ಚಿಹ್ನೆಗಳನ್ನು ಗೌರವಿಸುವ ಮತ್ತು ಅವುಗಳನ್ನು ಉಲ್ಲಂಘಿಸದಿರುವ ಅಗತ್ಯವನ್ನು ಒತ್ತಿ ಹೇಳಿತು.

ನೂಪುರ್ ಶರ್ಮಾ ವಿವಾದ; ಕುವೈತ್ ಮಾರುಕಟ್ಟೆಯಲ್ಲಿ ಭಾರತದ ಉತ್ಪನ್ನ ಮಾಯ ನೂಪುರ್ ಶರ್ಮಾ ವಿವಾದ; ಕುವೈತ್ ಮಾರುಕಟ್ಟೆಯಲ್ಲಿ ಭಾರತದ ಉತ್ಪನ್ನ ಮಾಯ

ಧರ್ಮ ಸಹಿಷ್ಣುತೆ ಮತ್ತು ಮಾನವ ಸಹಬಾಳ್ವೆಯ ಮೌಲ್ಯಗಳನ್ನು ಹರಡಲು ಹಂಚಿಕೊಂಡ ಅಂತಾರಾಷ್ಟ್ರೀಯ ಜವಾಬ್ದಾರಿಯನ್ನು ಬಲಪಡಿಸುವ ಪ್ರಾಮುಖ್ಯತೆಯನ್ನು ಅದು ಹೇಳಿದೆ. ವಿವಿಧ ಧರ್ಮಗಳ ಅನುಯಾಯಿಗಳ ಭಾವನೆಯನ್ನು ಹೀಗಳೆಯುವ ಯಾವುದೇ ಬೆಳವಣಿಗೆಯನ್ನು ಒಪ್ಪುವುದಿಲ್ಲ ಎಂದು ಹೇಳಿದೆ.

ಪ್ರವಾದಿ ವಿರುದ್ಧ ಹೇಳಿಕೆ - ನೂಪುರ್ ಶರ್ಮಾಗೆ ಜೀವ ಬೆದರಿಕೆ: ದೂರು ದಾಖಲುಪ್ರವಾದಿ ವಿರುದ್ಧ ಹೇಳಿಕೆ - ನೂಪುರ್ ಶರ್ಮಾಗೆ ಜೀವ ಬೆದರಿಕೆ: ದೂರು ದಾಖಲು

ಇದೀಗ ವಜಾಗೊಂಡಿರುವ ಬಿಜೆಪಿ ವಕ್ತಾರೆ ಹೇಳಿಕೆಯನ್ನು ಜೋರ್ಡಾನ್ ದೇಶವೂ ಖಂಡಿಸಿದೆ. ಸಚಿವಾಲಯದ ವಕ್ತಾರ ರಾಯಭಾರಿ ಹೈತಮ್ ಅಬು ಅಲ್ಫೌಲ್ ಜೋರ್ಡಾನ್ ಇಂತಹ ಹೇಳಿಕೆಗಳನ್ನು ಖಂಡಿಸುತ್ತದೆ. ಇಸ್ಲಾಮಿಕ್ ಮತ್ತು ಇತರ ಧಾರ್ಮಿಕ ವ್ಯಕ್ತಿಗಳ ವಿರುದ್ಧದ ಉಲ್ಲಂಘನೆಯನ್ನುಅವರು ಈ ಸಂದರ್ಭದಲ್ಲಿ ಖಂಡಿಸಿದರು.

ಬಿಜೆಪಿ ನಾಯಕರ ಹೇಳಿಕೆಗೆ ಆಕ್ರೋಶ

ಬಿಜೆಪಿ ನಾಯಕರ ಹೇಳಿಕೆಗೆ ಆಕ್ರೋಶ

ಪ್ರವಾದಿ ಮೊಹಮ್ಮದ್ ಪೈಗಂಬರ್‌ ವಿರುದ್ಧ ಇಬ್ಬರು ಭಾರತೀಯ ರಾಜಕಾರಣಿಗಳ ಅವಹೇಳನಕಾರಿ ಹೇಳಿಕೆಯ ಬಗ್ಗೆ ಇಂಡೋನೇಷ್ಯಾ ತನ್ನ ತೀವ್ರ ಖಂಡನೆಯನ್ನು ವ್ಯಕ್ತಪಡಿಸಿದೆ. ಗಲ್ಫ್ ರಾಷ್ಟ್ರಗಳಾದ ಸೌದಿ ಅರೇಬಿಯಾ, ಕುವೈತ್, ಕತಾರ್, ಒಮಾನ್ ಹಾಗೂ ಪರ್ಷಿಯನ್ ಗಲ್ಫ್‌ನಲ್ಲಿರುವ ಇರಾನ್ ಬಿಜೆಪಿ ನಾಯಕರ ಹೇಳಿಕೆಯನ್ನು ಖಂಡಿಸಿದ ನಂತರ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಈಗಾಗಲೇ ಸಮಸ್ಯೆ ನಿವಾರಣೆಗೆ ಮುಂದಾಗಿದೆ. ಕತಾರ್ ಮತ್ತು ಕುವೈತ್ ಭಾರತದಿಂದ ಸಾರ್ವಜನಿಕ ಕ್ಷಮೆಯಾಚನೆಯನ್ನು ನಿರೀಕ್ಷಿಸುವುದಾಗಿ ಹೇಳಿದ್ದಾರೆ.

ನವೀನ್ ಕುಮಾರ್‌ ಜಿಂದಾಲ್ ಅವರ ವಜಾ

ನವೀನ್ ಕುಮಾರ್‌ ಜಿಂದಾಲ್ ಅವರ ವಜಾ

ಈ ಹೇಳಿಕೆಗಳು ವಿವಾದಕ್ಕೆ ಕಾರಣವಾದಾಗ ಆಡಳಿತಾರೂಢ ಬಿಜೆಪಿ ತನ್ನ ವಕ್ತಾರೆ ನೂಪುರ್ ಶರ್ಮಾರನ್ನು ಅಮಾನತುಗೊಳಿಸಿತು ಮತ್ತು ಪಕ್ಷದ ದೆಹಲಿ ಘಟಕದ ಮಾಧ್ಯಮ ಮುಖ್ಯಸ್ಥರಾಗಿದ್ದ ನವೀನ್ ಕುಮಾರ್‌ ಜಿಂದಾಲ್ ಅವರನ್ನು ವಜಾಗೊಳಿಸಿತು. ಪಕ್ಷದ ಕೇಂದ್ರ ಶಿಸ್ತು ಸಮಿತಿಯು ಅಮಾನತು ಪತ್ರದಲ್ಲಿ, ವಿವಿಧ ವಿಷಯಗಳಲ್ಲಿ ಪಕ್ಷದ ನಿಲುವಿಗೆ ವ್ಯತಿರಿಕ್ತ ಅಭಿಪ್ರಾಯಗಳನ್ನು ವ್ಯಕ್ತಪಡಿಸಿರುವಿರಿ. ಹೆಚ್ಚಿನ ವಿಚಾರಣೆ ಬಾಕಿ ಇದ್ದು, ತಕ್ಷಣದಿಂದ ಜಾರಿಗೆ ಬರುವಂತೆ ನಿಮ್ಮನ್ನು ಪಕ್ಷದಿಂದ ಮತ್ತು ನಿಮ್ಮ ಜವಾಬ್ದಾರಿಯಿಂದ ಅಮಾನತುಗೊಳಿಸಲಾಗಿದೆ ಎಂದು ಪತ್ರದಲ್ಲಿ ಬರೆದಿದ್ದಾರೆ.

ಮೋದಿಯವರ ಸರ್ಕಾರವು ದೂರವಿರಬೇಕು

ಮೋದಿಯವರ ಸರ್ಕಾರವು ದೂರವಿರಬೇಕು

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಸಹಿ ಮಾಡಿರುವ ಪತ್ರಿಕಾ ಪ್ರಕಟಣೆಯಲ್ಲಿ. ಯಾವುದೇ ಪಂಥ ಅಥವಾ ಧರ್ಮವನ್ನು ಅವಮಾನಿಸುವ ಯಾವುದೇ ಸಿದ್ಧಾಂತದ ವಿರುದ್ಧ ಬಿಜೆಪಿ ಕೆಲಸ ಮಾಡುವುದಿಲ್ಲ ಎಂದು ಹೇಳಿತ್ತು. ಮಂಗಳವಾರ ನವದೆಹಲಿಯ ಕತಾರ್ ರಾಯಭಾರ ಕಚೇರಿಯ ಹಿರಿಯ ಅಧಿಕಾರಿಯೊಬ್ಬರು ಪ್ರಧಾನಿ ಮೋದಿಯವರ ಸರ್ಕಾರವು ಇತಂಹ ಹೇಳಿಕೆಗಳಿಂದ ಸಾರ್ವಜನಿಕವಾಗಿ ದೂರವಿರಬೇಕು ಎಂದು ಹೇಳಿದರು. ನಮ್ಮ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸುವುದು ಆರ್ಥಿಕ ಸಂಬಂಧಗಳ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ ಎಂದು ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿ ರಾಯಿಟರ್ಸ್ ವರದಿ ಮಾಡಿದೆ.

ಹಿಂದೂ ನಂಬಿಕೆಯನ್ನು ಅಪಹಾಸ್ಯ

ಜ್ಞಾನವಾಪಿ ಮಸೀದಿಯ ವಿವಾದದ ಕುರಿತು ಟಿವಿ ಚರ್ಚೆಯ ನಡೆಯುತ್ತಿದ್ದ ಸಂದರ್ಭದಲ್ಲಿ ಮುಸ್ಲಿಮರು ಶಿವಲಿಂಗವನ್ನು ಗೇಲಿ ಮಾಡುವ ಮೂಲಕ ಮತ್ತು ಅದನ್ನು ಕಾರಂಜಿ ಎಂದು ಕರೆಯುವ ಮೂಲಕ ಹಿಂದೂ ನಂಬಿಕೆಯನ್ನು ಅಪಹಾಸ್ಯ ಮಾಡುತ್ತಿದ್ದಾರೆ ಎಂಬುದಕ್ಕೆ ಪ್ರತಿಕ್ರಿಯೆಯಾಗಿ ನೂಪುರ್ ಶರ್ಮಾ ತಮ್ಮ ಟೀಕೆಗಳನ್ನು ಮಾಡಿದರು.

ಬಳಿಕ ಕಾನ್ಪೂರದಲ್ಲಿ ಘರ್ಷಣೆಗಳು ಉಂಟಾಗಿ ಆಕೆಯ ಬಂಧನಕ್ಕೆ ಕರೆ ನೀಡುವ ಪ್ರತಿಭಟನೆಗಳು ಮತ್ತು ಆಕೆಯ ವಿರುದ್ಧ ಬೆದರಿಕೆಗಳು ಕೇಳಿಬಂದವು. ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿರುವುದಕ್ಕಾಗಿ ಆಕೆಯ ವಿರುದ್ಧ ಹಲವಾರು ರಾಜ್ಯಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಶರ್ಮಾ ತಮ್ಮ ಹೇಳಿಕೆಯನ್ನು ಹಿಂಪಡೆದಿದ್ದಾರೆ. ಜಿಂದಾಲ್ ಕೂಡ ತಮ್ಮ ಟ್ವೀಟ್ ಅನ್ನು ಡಿಲೀಟ್ ಮಾಡಿದ್ದಾರೆ. ಆದಾಗ್ಯೂ, ಜಾಗತಿಕ ಆಕ್ರೋಶದ ನಡುವೆ ಬಿಜೆಪಿ ಶರ್ಮಾರನ್ನು ಅಮಾನತುಗೊಳಿಸಿತು ಮತ್ತು ಜಿಂದಾಲ್ ಅನ್ನು ವಜಾಗೊಳಿಸಿತು.

English summary
BJP national spokesperson Nupur Sharma has been criticized by many Arab countries for his derogatory remarks on Prophet Mohammed Pygambar. Several countries, including the UAE, Jordan, and Indonesia have expressed their outrage, and Kuwait, Oman, Pakistan and Qatar have already condemned the incident.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X