ಮಾಸ್ಕೋ ಬಳಿ ವಿಮಾನ ಪತನ, 71 ಜನರ ಸಾವಿನ ಶಂಕೆ

Written By:
Subscribe to Oneindia Kannada

ಮಾಸ್ಕೋ, ಫೆಬ್ರವರಿ 11 : ಎಪ್ಪತ್ತೊಂದು ಜನರಿದ್ದ ಸರಟೋವ್ ಏರ್ ಲೈನ್ಸ್ ವಿಮಾನ ಮಾಸ್ಕೋ ಬಳಿ ಭಾನುವಾರ ಪತನವಾಗಿದೆ ಎಂದು ರಷ್ಯಾದ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.

ಸರಟೋವ್ ವಿಮಾನಯಾನ ಸಂಸ್ಥೆಗೆ ಸೇರಿದೆ ಎಎನ್-148 ವಿಮಾನ ಡೊಮೊಡೆಡೋವ್ ವಿಮಾನ ನಿಲ್ದಾಣದಿಂದ ಹೊರಟಿತ್ತು.

ವಿಮಾನ ಮಾಸ್ಕೋ ಪ್ರಾಂತ್ಯದಲ್ಲಿರುವ ಅರ್ಗುನೊವೊ ಎಂಬ ಹಳ್ಳಿಯ ಬಳಿ ಪತನವಾಗಿದೆ ಎಂದು ಇಂಟರ್ಫ್ಯಾಕ್ಸ್ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.

Many feared dead as Russian passenger jet crashes near Moscow

ಆಕಾಶದಿಂದ ಉರಿಯುತ್ತಿದ್ದ ವಿಮಾನ ಕೆಳಗೆ ಬಿದ್ದಿತು ಎಂದು ಅರ್ಗುನೊವೊ ಗ್ರಾಮದ ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ವಿಮಾನದಲ್ಲಿ 65 ಪ್ರಯಾಣಿಕರು ಮತ್ತು 6 ಜನ ಸಿಬ್ಬಂದಿ ವರ್ಗದವರಿದ್ದರು. ಯಾರೂ ಬದುಕುಳಿದಿರುವ ಸಂಭಾವ್ಯತೆ ಕಡಿಮೆ ಎಂದು ಹೇಳಲಾಗಿದೆ.

ಬಿದ್ದ ಸ್ಥಳದಲ್ಲಿ ವಿಮಾನದ ಭಾಗಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಸ್ಥಳಕ್ಕೆ ಎಮರ್ಜೆನ್ಸಿ ಸೇವೆಯ ವಾಹನಗಳು ತಲುಪಲು ಸಾಧ್ಯವಾಗದಿದ್ದರಿಂದ, ರಕ್ಷಣಾ ಸಿಬ್ಬಂದಿಗಳು ನಡೆದುಕೊಂಡೇ ಅಪಘಾತ ನಡೆದ ಸ್ಥಳ ತಲುಪಬೇಕಾಯಿತು.

ಮಾಸ್ಕೋದ ಎರಡನೇ ಅತೀದೊಡ್ಡ ವಿಮಾನ ನಿಲ್ದಾಣವಾದ ಡೊಮೊಡೆಡೊವೋದಿಂದ ಹಾರಿದ ಎರಡೇ ನಿಮಿಷಕ್ಕೆ ರಾಡಾರ್ ಸಂಪರ್ಕದಿಂದ ತಪ್ಪಿಸಿಕೊಂಡಿದೆ. ಅಪಘಾತಕ್ಕೆ ನಿಖರವಾದ ಕಾರಣವೇನೆಂದು ತನಿಖೆಯಿಂದ ತಿಳಿದುಬರಬೇಕಿದೆ. ಹವಾಮಾನ ವೈಪರೀತ್ಯ ಅಥವಾ ಪೈಲಟ್ ಗಳಿಂದ ತಪ್ಪಿನಿಂದಲೂ ಅಪಘಾತ ಸಂಭವಿಸಿರಬಹುದು ಎಂದು ಅಂದಾಜಿಸಲಾಗಿದೆ. (ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A plane operated by Saratov Airlines crashed in the Moscow region on Sunday, likely killing all 71 people on board, Russian news agency reported. Plane was An-148, a regional jet belonging to Saratov Airlines, taken off from Domodedovo Airport.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ