'ಆ ಅಪರಿಚಿತ ರಕ್ಷಣೆಗೆ ಮುಂದಾಗದಿದ್ದರೆ ಇನ್ನಷ್ಟು ಸಾವು-ನೋವಾಗ್ತಿತ್ತು'
ಕ್ರೈಸ್ಟ್ ಚರ್ಚ್ (ನ್ಯೂಜಿಲ್ಯಾಂಡ್), ಮಾರ್ಚ್ 15: ಶಂಕಿತ ಬಲಪಂಥೀಯ ಉಗ್ರವಾದಿಗಳು ನ್ಯೂಜಿಲ್ಯಾಂಡ್ ನ ಕ್ರೈಸ್ಟ್ ಚರ್ಚ್ ನಲ್ಲಿರುವ ಎರಡು ಮಸೀದಿಯೊಳಗೆ ನುಗ್ಗಿ, ನಲವತ್ತೊಂಬತ್ತು ಮಂದಿಯನ್ನು ಶುಕ್ರವಾರ ಬಲಿ ಪಡೆದಿದ್ದಾರೆ. ಈ ದಾಳಿ ವೇಲೆ ಬಚಾವಾದ ಭಾರತೀಯ ಮೂಲದ ವ್ಯಕ್ತಿಯೊಬ್ಬರು ಅಪರಿಚಿತ ವ್ಯಕ್ತಿಯೊಬ್ಬರ ಸಾಹಸವು ಹೇಗೆ ಇನ್ನೂ ದೊಡ್ಡ ಅನಾಹುತವನ್ನು ತಪ್ಪಿಸಿತು ಎಂದು ವಿವರಿಸಿದ್ದಾರೆ.
ನಾವು ಸಣ್ಣ ಮಸೀದಿಯಲ್ಲಿ ಇದ್ದೆವು- ನೂರು ಚದರ ಮೀಟರ್ ನಷ್ಟು ಇದ್ದಿರಬಹುದು. ಕೈಯಲ್ಲಿ ಗನ್ ಹಿಡಿದ ವ್ಯಕ್ತಿ ಒಳ ಪ್ರವೇಶಿಸಿ, ಗುಂಡು ಹಾರಿಸುವುದಕ್ಕೆ ಆರಂಭಿಸಿದರೆ ಅಂಥ ಸನ್ನಿವೇಶದಲ್ಲಿ ಎದೆ ಬಡಿತ ಹೆಚ್ಚಾಗುತ್ತದೆ. ನೀವು ಏನನ್ನೂ ಯೋಚಿಸಲು ಸಹ ಆಗಲ್ಲ ಎಂದು ಫೈಸಲ್ ಸಯಿದ್ ಮಾಧ್ಯಮವೊಂದಕ್ಕೆ ಹೇಳಿದ್ದಾರೆ.
ಫೈಸಲ್ ಸಯಿದ್ ಅವರು ಹತ್ತು ವರ್ಷಗಳಿಂದ ನ್ಯೂಜಿಲ್ಯಾಂಡ್ ನಲ್ಲೇ ವಾಸವಿದ್ದಾರೆ. ನಾನು ಹಾಗೂ ನನ್ನ ಸ್ನೇಹಿತ ನೋಡುತ್ತಾ ಇದ್ದೆವು. ಹಿಂದಿನಿಂದ ಬಂದ ಆ ಸಜ್ಜನ ವ್ಯಕ್ತಿ ಶೂಟರ್ ನ ಕೈ ಬಲವಾಗಿ ಹಿಡಿದು, ಗನ್ ಕೆಳಗೆ ಹಾಕುವಂತೆ ಮಾಡಿದರು. ಆಗ ಶೂಟರ್ ಗೆ ಬಾಗಿಲ ಕಡೆಗೆ ಓಡುವ ಅನಿವಾರ್ಯ ಸೃಷ್ಟಿ ಆಯಿತು. ಒಂದು ವೇಳೆ ಹಾಗೆ ಅಗಿರದಿದ್ದರೆ ಇನ್ನೂ ಹಲವರು ಸಾವನ್ನಪ್ಪುತ್ತಿದ್ದರು, ನಾನು ಇಲ್ಲಿರುತ್ತಿರಲಿಲ್ಲ. ಆ ವ್ಯಕ್ತಿಗೆ ಹ್ಯಾಟ್ಸ್ ಆಫ್. ಆ ಅಪರಿಚಿತ ವ್ಯಕ್ತಿಯನ್ನು ಪತ್ತೆ ಹಚ್ಚಲು ಯತ್ನಿಸುತ್ತೇನೆ ಎಂದಿದ್ದಾರೆ.

ಈ ಘಟನೆಯಿಂದ ನ್ಯೂಜಿಲ್ಯಾಂಡ್ ದೇಶದ ಬಗ್ಗೆ ನನಗೆ ಯಾವುದೇ ಕೆಟ್ಟ ಭಾವನೆ ಮೂಡಿಲ್ಲ. ನಾನು ಬೇರೆಯವರ ಅಭಿಪ್ರಾಯದ ಬಗ್ಗೆ ಮಾತನಾಡಲ್ಲ. ಆದರೆ ನಾನು ಈ ಸುಂದರವಾದ ದೇಶದಲ್ಲಿ ಹತ್ತು ವರ್ಷದಿಂದ ಇದ್ದೀನಿ. ನನ್ನ ಪ್ರೀತಿಪಾತ್ರರು, ಕುಟುಂಬ ಅಥವಾ ನನ್ನ ಸಮುದಾಯದವರು ಯಾವುದೇ ಸವಾಲು ಎದುರಿಸಿರುವುದು ನಾನು ನೋಡಿಲ್ಲ. ಒಂದು ಘಟನೆಯಿಂದ ನಾನು ಯಾವುದೇ ತೀರ್ಪು ಹೇಳಲಾರೆ ಎಂದಿದ್ದಾರೆ.
ಈ ದೇಶ ಬಿಟ್ಟು ಹೋಗುವ ಯಾವ ಆಲೋಚನೆ ನನಗಿಲ್ಲ. ನನ್ನ ಸುತ್ತಮುತ್ತ ಪ್ರೀತಿಸುವ ಜನರಿದ್ದಾರೆ. ಕ್ಷೇಮವಾಗಿದ್ದೀನಾ ಎಂದು ವಿಚಾರಿಸಿ, ನ್ಯೂಜಿಲ್ಯಾಂಡ್ ನ ಹಲವು ಪರಿಚಿತ ಸ್ಥಳೀಯರು ಸಂದೇಶ ಕಳುಹಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಸಯೀದ್ ನ ಒಬ್ಬ ಸ್ನೇಹಿತರು ಗಾಯದಿಂದ ಮೃತಪಟ್ಟಿದ್ದಾರೆ. ಇನ್ನೊಬ್ಬರು ಆಸ್ಪತ್ರೆಯಲ್ಲಿದ್ದಾರೆ.
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್












Click it and Unblock the Notifications