Get Updates
Get notified of breaking news, exclusive insights, and must-see stories!

68ನೇ ಮಹಡಿಯಲ್ಲಿದ್ದ ಜವರಾಯ: ವಿಡಿಯೋ ಮಾಡುತ್ತಿದ್ದ ಸಾಹಸಿ ಸಾವು!

ಹಾಂಗ್‌ಕಾಂಗ್‌: ಸಾಹಸ ಕ್ರೀಡೆಯಲ್ಲಿ ತೊಡಗುವುದು ಕೆಲವರಿಗೆ ಹವ್ಯಾಸ, ಆದರೆ ಇನ್ನೂ ಕೆಲವರಿಗೆ ಅದೇ ವೃತ್ತಿ. ಹೀಗೆ ತನ್ನ ಜೀವನದಲ್ಲಿ ಎಂತೆಂತಹದ್ದೋ ಸಾಹಸ ಮಾಡಿದ್ದ ಈ ವ್ಯಕ್ತಿಗೆ ಸಾವು ನೇರವಾಗಿ ಬಂದೆರಗಿದೆ. ಅದು ಒಂದಲ್ಲ, ಎರಡಲ್ಲ 68ನೇ ಮಹಡಿಯಲ್ಲಿದ್ದ ಜವರಾಯ ಮುಲಾಜು ನೋಡದೆಯೇ ಉಸಿರು ನಿಲ್ಲಿಸಿದ್ದಾನೆ. ಹಾಗಾದರೆ ಇಂತಹ ದುರಂತ ಸಾವು ಕಂಡಿದ್ದು ಯಾರು? 68ನೇ ಮಹಡಿಯಲ್ಲಿ ಆಗಿದ್ದೇನು? ಮುಂದೆ ಓದಿ.

ಅಷ್ಟಕ್ಕೂ ಈ ಭೀಕರ ಘಟನೆ ನಡೆದಿದ್ದು ಹಾಂಗ್‌ಕಾಂಗ್‌ನಲ್ಲಿ. ಗಗನಚುಂಬಿ ಕಟ್ಟಡವನ್ನು ಏರಿ, ತುತ್ತತುದಿಗೆ ತಲುಪಿ ನೋಡುಗರ ಮೈ ಜುಮ್ಮೆನಿಸುವಂತೆ ಸ್ಟಂಟ್‌, ರೀಲ್ಸ್‌ ಮಾಡುತ್ತಿದ್ದ ರೆಮಿ ಲುಸಿಡಿ ಎಂಬ 30 ವರ್ಷದ ವ್ಯಕ್ತಿ ಮೃತಪಟ್ಟಿದ್ದಾನೆ. ಹಾಂಗ್‌ಕಾಂಗ್‌ನ ವಸತಿ ಕಟ್ಟಡ ಏರಿದ್ದ ರೆಮಿ ಲುಸಿಡಿ, 68ನೇ ಮಹಡಿಯಿಂದ ಬಿದ್ದು ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ. ತನ್ನ ಧೈರ್ಯ & ಸಾಹಸದಿಂದ ಲುಸಿಡಿ ಫ್ರೆಂಚ್‌ ಡೇರ್ ಡೆವಿಲ್‌ ಎಂದೇ ಫೇಮಸ್ ಆಗಿದ್ದ ವ್ಯಕ್ತಿ. ಹೀಗೆ ತನ್ನ ಜೀವನದಲ್ಲಿ ಅನೇಕ ಸಾಧನೆಗಳನ್ನ ಮಾಡಿದ್ದ ಈತನ ಪ್ರಾಣಪಕ್ಷಿ ಈಗ ಹಾರಿಹೋಗಿದೆ. ಅದಕ್ಕೆ ಆತನ ಸಾಹಸಮಯ ವ್ಯಕ್ತಿತ್ವವೇ ಕಾರಣವಾಗಿದೆ.

Man found dead after falling from 68th floor in Hong Kong

( )

ಸ್ನೇಹಿತನನ್ನ ನೋಡಲು ಬಂದಿದ್ದು ನಿಜವಾ?

ಹಾಂಗ್‌ಕಾಂಗ್‌ನ ಟ್ರೆಗುಂಟರ್ ಟವರ್ ಬಂದಿದ್ದ ಮೃತ ರೆಮಿ ಲುಸಿಡಿ, 40ನೇ ಮಹಡಿಯಲ್ಲಿ ತನ್ನ ಸ್ನೇಹಿತನನ್ನು ಭೇಟಿಯಾಗಲು ಬಂದಿದ್ದೇನೆ ಎಂದು ತಿಳಿಸಿದ್ದನಂತೆ. ಕಟ್ಟಡದ ಭದ್ರತಾ ಸಿಬ್ಬಂದಿ ರೆಮಿ ಲುಸಿಡಿ ಮಾತು ಕೇಳಿ ಅನುಮಾನದಿಂದ ತಡೆಯಲು ಯತ್ನಿಸಿದ್ದಾರೆ ಅಂತಾ ಹೇಳಲಾಗಿದೆ. ಆದರೆ ಅಷ್ಟರಲ್ಲಿ ಲುಸಿಡಿ ಕಟ್ಟಡದ ಒಳಗೆ ಪ್ರವೇಶಿಸಿದ್ದರು. 49ನೇ ಮಹಡಿಗೆ ಲುಸಿಡಿ ಬಂದು ಅಲ್ಲಿಂದ ಮೆಟ್ಟಿಲು ಹತ್ತಿ ಟೆರೆಸ್‌ಗೆ ಹೋಗಿದ್ದಾರೆ. ರೆಮಿ ಲುಸಿಡಿ ಟೆರೆಸ್‌ಗೆ ಹೋದ ದೃಶ್ಯವು ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ.

( )

ಈವರೆಗೂ ರೆಮಿ ಲುಸಿಡಿ ಸಾವಿನ ಕುರಿತು ಪೊಲೀಸರು ಅಥವಾ ತನಿಖಾ ಅಧಿಕಾರಿಗಳಿಂದ ಅಧಿಕೃತವಾದ ಮಾಹಿತಿ ಹೊರಬಿದ್ದಿಲ್ಲ. ಆದರೆ ಘಟನೆ ನಡೆದ ಸ್ಥಳದಲ್ಲಿ ಈಗ ಪೊಲೀಸರಿಗೆ ಲುಸಿಡಿ ಕ್ಯಾಮೆರಾ ದೊರಕಿದ್ದು, ಅದರಲ್ಲಿ ರೆಮಿ ಲುಸಿಡಿ ಸಾಹಸದ ವಿಡಿಯೋ ದಾಖಲಾಗಿದೆ. ಈ ಘಟನೆ ಜಗತ್ತಿನಾದ್ಯಂತ ಸಂಚಲನ ಸೃಷ್ಟಿಸಿದ್ದು, ಹಾಂಗ್‌ಕಾಂಗ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಘಟನೆಗೆ ನಿಜ ಕಾರಣ ಏನು? ಎಂಬುದನ್ನ ಹುಡುಕುತ್ತಿದ್ದಾರೆ. ಇದೆಲ್ಲಾ ಏನೇ ಇರಲಿ, ಸಾಹಸವನ್ನೇ ಜೀವನ ಮಾಡಿಕೊಂಡಿದ್ದ ವ್ಯಕ್ತಿ ಈ ರೀತಿ ದುರಂತ ಸಾವು ಕಂಡಿದ್ದು ಮಾತ್ರ ವಿಪರ್ಯಾಸವೇ ಸರಿ. ಇದೀಗ ರೆಮಿ ಲುಸಿಡಿ ಸಾವಿಗೆ ಆತನ ಅಭಿಮಾನಿ ಬಳಗ ಕಂಬನಿ ಮಿಡಿಯುತ್ತಿದೆ.

( )

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+