ಶಾಲೆಗೆ 50 ಸಾವಿರ ಡಾಲರ್ ದೇಣಿಗೆ ನೀಡಿದ ಮಲಾಲಾ
ಲಂಡನ್, ಅ.30- ಹೆಣ್ಣುಮಕ್ಕಳ ಶಿಕ್ಷಣ ಹೋರಾಟಗಾರ್ತಿ, ನೋಬೆಲ್ ಪ್ರಶಸ್ತಿ ಪುರಸ್ಕೃತ ಪಾಕಿಸ್ತಾನದ ಮಲಾಲಾ ಯೂಸೆಫ್ ಜೈ ಗಾಜಾ ಪಟ್ಟಿಯ ಶಾಲಾ ಕಟ್ಟಡ ನಿರ್ಮಾಣಕ್ಕೆ 50 ಸಾವಿರ ಡಾಲರ್ ದೇಣಿಗೆ ನೀಡಲಿದ್ದಾರೆ.
ವಿಶ್ವಸಂಸ್ಥೆ ನಿರ್ಮಿಸುತ್ತಿರುವ ಶಾಲಾ ಕಟ್ಟಡ ನಿರ್ಮಾಣಕ್ಕೆ ಮಲಾಲಾ ತಮ್ಮ ವೈಯಕ್ತಿಕ ಖಾತೆಯಿಂದ 50ಸಾವಿರ ಡಾಲರ್ ಹಣ ನೀಡುತ್ತೇನೆ ಎಂದು ಹೇಳಿದ್ದಾರೆ.[ಮಲಾಲಾಗೆ ನೊಬೆಲ್ ಪುರಸ್ಕಾರ ಬಂದಿದ್ದು ಹೇಗೆ?]

ಪ್ಯಾಲಿಸ್ತೇನ್ ನ ಮಕ್ಕಳು ಶಿಕ್ಷಣ ವಂಚಿತರಾಗುತ್ತಿದ್ದಾರೆ. ಇದಕ್ಕೆ ಅನೇಕ ಕಾರಣಗಳಿರಬಹುದು. ಅದರಲ್ಲೂ ಹೆಣ್ಣು ಮಕ್ಕಳು ಶಿಕ್ಷಣ ವಂಚಿತರಾಗಬಾರದು. ಸದಾ ಹಿಂಸೆ ತಾಂಡವವಾಡುತ್ತಿರುವ ಪ್ರದೇಶದಲ್ಲಿ ಶಾಂತಿ ನೆಲೆಸಲು ಶಿಕ್ಷಣವೇ ಔಷಧ ಎಂದು ಮಲಾಲಾ ಹೇಳಿದ್ದಾರೆ.[ಮಲಾಲಾ, ಸತ್ಯಾರ್ಥಿಗೆ ನೊಬೆಲ್ ಶಾಂತಿ ಪುರಸ್ಕಾರ]
ಇಸ್ರೇಲ್ ಬಾಂಬ್ ದಾಳಿಯಿಂದ ಅನೇಕ ಶಾಲಾ ಕಟ್ಟಡಗಳು ನೆಲಸಮವಾಗಿವೆ. ದಾಳಿಯಲ್ಲಿ ಎರಡು ಸಾವಿರ ಜನ ಗಾಯಗೊಂಡಿದ್ದು 72 ಜನ ಮೃತಪಟ್ಟಿದ್ದಾರೆ. ಇಂಥ ಘಟನವಾಳಿಗಳು ಪ್ರಪಂಚದ ಶಾಂತಿಗೆ ಭಂಗ ತರುತ್ತಿವೆ ಎಂದು ಮಲಾಲಾ ಹೇಳಿದ್ದಾರೆ. ಪ್ರಪಂಚದ ಯಾವುದೇ ಭಾಗದಲ್ಲಿ ಈ ರೀತಿಯ ಶಾಲಾ ಕಟ್ಟಡ ನಿರ್ಮಾಣವಾಗುತ್ತಿದ್ದರೆ ಅದಕ್ಕೂ ದೇಣಿಗೆ ಸಲ್ಲಿಸುತ್ತೇನೆ ಎಂದು ಹೋರಾಟಗಾರ್ತಿ ತಿಳಿಸಿದ್ದಾರೆ.












Click it and Unblock the Notifications