• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದಕ್ಷಿಣ ಆಫ್ರಿಕಾ ನ್ಯಾಯಾಲಯದಿಂದ ಗಾಂಧೀಜಿ ಮರಿಮೊಮ್ಮಗಳಿಗೆ 7 ವರ್ಷ ಸಜೆ

|
Google Oneindia Kannada News

ಜೊಹಾನ್ಸ್‌ಬರ್ಗ್, ಜೂನ್ 08: ವಂಚನೆ ಹಾಗೂ ನಕಲಿ ದಾಖಲೆ ಸೃಷ್ಟಿ ಆರೋಪದಲ್ಲಿ ಮಹಾತ್ಮ ಗಾಂಧೀಜಿಯವರ 56 ವರ್ಷದ ಮರಿ ಮೊಮ್ಮಗಳಿಗೆ ದಕ್ಷಿಣಾ ಆಫ್ರಿಕಾದ ಡರ್ಬನ್ ನ್ಯಾಯಾಲಯ ಸೋಮವಾರ 7 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

   ದಕ್ಷಿಣ ಆಫ್ರಿಕಾದ ನ್ಯಾಯಾಲಯದಿಂದ 7 ವರ್ಷ ಶಿಕ್ಷೆ! | Oneindia Kannada

   ಹೋರಾಟಗಾರ್ತಿ ಎಲಾ ಗಾಂಧಿ ಮತ್ತು ದಿವಂಗತ ಮೇವಾ ರಾಮ್ ಬೋಬಿನ್ ಅವರ ಪುತ್ರಿ ಆಶಿಶ್ ಲತಾ ರಾಮ್ ಗೋಬಿನ್ ಅವರಿಗೆ 6 ಮಿಲಿಯನ್ ಆಫ್ರಿಕನ್ ರಾಂಡ್ (3.22 ಕೋಟಿ ರೂ) ವಂಚನೆ ಹಾಗೂ ನಕಲಿ ದಾಖಲೆ ಸೃಷ್ಟಿ ಪ್ರಕರಣದಲ್ಲಿ ಶಿಕ್ಷೆ ವಿಧಿಸಿ ಆದೇಶಿಸಿದೆ.

   ಲೋನ್ ಕೊಡಿಸುವ ನೆಪದಲ್ಲಿ ಉದ್ಯಮಿಗೆ 7 ಕೋಟಿ ರೂ. ನಾಮ ಹಾಕಿದ್ದ ಗ್ಯಾಂಗ್ ಸೆರೆ ಲೋನ್ ಕೊಡಿಸುವ ನೆಪದಲ್ಲಿ ಉದ್ಯಮಿಗೆ 7 ಕೋಟಿ ರೂ. ನಾಮ ಹಾಕಿದ್ದ ಗ್ಯಾಂಗ್ ಸೆರೆ

   ಲತಾ ರಾಮ್ ಗೋಬಿನ್ ಅವರು 2015ರ ಆಗಸ್ಟ್‌ನಲ್ಲಿ ನ್ಯೂ ಆಫ್ರಿಕಾ ಅಲಯನ್ಸ್ ಕಂಪನಿ ನಿರ್ದೇಶಕ ಎಸ್‌.ಆರ್‌. ಮಹಾರಾಜ್ ಅವರನ್ನು ಭೇಟಿ ಮಾಡಿದ್ದರು. ಈ ಕಂಪನಿಯು ಲೆನಿನ್ ಬಟ್ಟೆ ಮತ್ತು ಪಾದರಕ್ಷೆಗಳನ್ನು ಆಮದು ಮಾಡಿಕೊಂಡು ಮಾರಾಟ ಮಾಡುತ್ತದೆ. ದಕ್ಷಿಣ ಆಫ್ರಿಕಾದ ನೆಟ್‌ಕೇರ್ ಆಸ್ಪತ್ರೆ ಸಮೂಹಗಳಿಗೆ ವಿತರಿಸಲು ಭಾರತದಿಂದ ಮೂರು ಕಂಟೇನರ್ ಲೆನಿನ್ ಬಟ್ಟೆಗಳನ್ನು ಆಮದು ಮಾಡಿಕೊಳ್ಳುತ್ತಿರುವುದಾಗಿ ಲತಾ ರಾಮ್ ಗೋಬಿನ್ ಮಹಾರಾಜ್ ಅವರಿಗೆ ತಿಳಿಸಿದ್ದರು. ಆಮದು ಮಾಡಿಕೊಳ್ಳುತ್ತಿದ್ದ ವಸ್ತುಗಳ ಕಸ್ಟಂ ಸುಂಕಕ್ಕಾಗಿ 6.2 ದಶಲಕ್ಷ ರಾಂಡ್ ಪಡೆದಿದ್ದು, ಆದಾಯದಲ್ಲಿ ಪಾಲು ನೀಡುವುದಾಗಿ ಹೇಳಿ ವಂಚಿಸಿದ್ದರು ಎಂಬ ಆರೋಪ ಕೇಳಿಬಂದಿತ್ತು.

   ಇದೀಗ ಡರ್ಬನ್ ವಾಣಿಜ್ಯ ವ್ಯಾಜ್ಯಗಳ ವಿಶೇಷ ನ್ಯಾಯಾಲಯ ಶಿಕ್ಷೆ ವಿಧಿಸಿದ್ದು, ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವ ಅವಕಾಶವನ್ನು ನಿರಾಕರಿಸಿದೆ.

   "ಭಾರತದಿಂದ ಮೂರು ಕಂಟೇನರ್ ಲೆನಿನ್ ಬಟ್ಟೆಗಳನ್ನು ತರುತ್ತಿರುವುದಾಗಿ ಉದ್ಯಮಿ ನಂಬಿಸಲು ಲತಾ ಅವರು ನಕಲಿ ದಾಖಲೆ ಒದಗಿಸಿದ್ದರು ಎಂದು ವಿಚಾರಣೆ ಸಂದರ್ಭ ರಾಷ್ಟ್ರೀಯ ಪ್ರಾಸಿಕ್ಯೂಟಿಂಗ್ ಪ್ರಾಧಿಕಾರದ ಬ್ರಿಗೇಡಿಯರ್ ಹಂಗ್ವಾನಿ ಮುಲಾಡ್ಜಿ ಹೇಳಿದ್ದರು.

   English summary
   56-year-old great-granddaughter of Mahatma Gandhi, who was accused in a six-million rand fraud and forgery case, has been sentenced to 7 years in jail by a Durban court,
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X