ಪರಮಾಣು ಬಾಂಬ್ ಪರೀಕ್ಷೆ ನಡೆಸಿದ ಇರಾನ್? ಓಡಿ ಓಡಿ ಅಂತಾ ಟೆಲ್ ಅವಿವ್ ನಗರಕ್ಕೆ ಮೆಸೇಜ್! Israel And Iran
ಅಯ್ಯಯ್ಯೋ.. ಮುಗಿದೇ ಹೋಯಿತು ಮನುಷ್ಯರ ಜೀವನ... ಹಿಂಗಂತಾ ಸೋಷಿಯಲ್ ಮೀಡಿಯಾದಲ್ಲಿ ಭರ್ಜರಿ ಚರ್ಚೆ ನಡೆಯುತ್ತಿದೆ. ಯಾಕಂದ್ರೆ ಇರಾನ್ & ಇಸ್ರೇಲ್ ನಡುವೆ ಪರಮಾಣು ಬಾಂಬ್ ಯುದ್ಧದ ಪರಿಸ್ಥಿತಿ ನಿರ್ಮಾಣ ಆಗಿದ್ದು, ಇದೇ ಸಮಯದಲ್ಲಿ ಇರಾನ್ ನೆಲದಲ್ಲಿ ಭಾರಿ ದೊಡ್ಡ ಭೂಕಂಪನ ಕೂಡ ಸೃಷ್ಟಿಯಾಗಿದೆ. ಇದರ ಅರ್ಥ ಇರಾನ್ ದಿಢೀರ್ ಪರಮಾಣು ಬಾಂಬ್ ಅಂದ್ರೆ ನ್ಯೂಕ್ಲಿಯರ್ ಬಾಂಬ್ ಟೆಸ್ಟ್ ಮಾಡಿದೆಯಂತೆ!
ಹೌದು, ದಿನದಿಂದ ದಿನಕ್ಕೆ ಇರಾನ್ & ಇಸ್ರೇಲ್ ನಡುವೆ ಶತ್ರುತ್ವ ದೊಡ್ಡದಾಗುತ್ತಾ ಹೋಗುತ್ತಿದೆ. ಹೀಗೆ, ಇರಾನ್ & ಇಸ್ರೇಲ್ ಯುದ್ಧ ಜೋರಾಗುತ್ತಿರುವ ಸಮಯದಲ್ಲೇ ಬೆಳ್ಳಂಬೆಳಗ್ಗೆ ಇರಾನ್ ನೆಲದಲ್ಲಿ ಘೋರ ಭೂಕಂಪನ ಸಂಭವಿಸಿದೆ. ಇದರ ಜೊತೆಗೆ ಇರಾನ್ ಮಿಲಿಟರಿ ಅಪ್‌ಡೇಟ್ ಕೊಡುವ ಪೇಜ್ ಒಂದು ಅತ್ತ ಇಸ್ರೇಲ್ ದೇಶದ ಟೆಲ್ ಅವಿವ್ ನಗರದ ಜನರಿಗೆ ತಕ್ಷಣ ಓಡಿ ಹೋಗಿ ಅಂತಾ ಮೆಸೇಜ್ ಕೊಟ್ಟಿದೆ. ಇದೇ ಸಂದೇಶ ಈಗ ಇಡೀ ಜಗತ್ತಿನಾದ್ಯಂತ ತಲ್ಲಣದ ಅಲೆಯನ್ನೇ ಎಬ್ಬಿಸಿದೆ...

ಇರಾನ್ ನೆಲದಲ್ಲಿ ನ್ಯೂಕ್ಲಿಯರ್ ಟೆಸ್ಟ್?
ಅಂದಹಾಗೆ ಇರಾನ್ ಇದೀಗ ಇಸ್ರೇಲ್ ವಿರುದ್ಧ ಘೋರವಾಗಿ ದಾಳಿ ಮಾಡುತ್ತಿದ್ದು, ಈಗಾಗಲೇ ಹಲವಾರು ನಗರದಲ್ಲಿ ನರಕ ನಿರ್ಮಾಣ ಆಗಿದೆ. ಇಂತಹ ಸಮಯದಲ್ಲೇ ಮತ್ತೊಂದು ಆಘಾತ ಕೂಡ ಎದುರಾಗಿದೆ, ಅದು ಏನೆಂದರೆ ಇರಾನ್ ಸೇನೆಯಿಂದ ದಿಢೀರ್ ಪರಮಾಣು ಪರೀಕ್ಷೆ ನಡೆದಿರುವ ಕುರಿತು ಸಾಕ್ಷ್ಯ ಸಿಕ್ಕಿದೆ. ಆ ಮೂಲಕ ಜಗತ್ತಿನ ಮೂಲೆ ಮೂಲೆಯಲ್ಲೂ ಇದೀಗ ವಿಕಿರಣ ಹರಡುವ ಆತಂಕ ಮನುಷ್ಯರಿಗೆ ಶುರು ಆಗಿದೆ.












Click it and Unblock the Notifications