ರನ್‌ವೇನಲ್ಲಿದ್ದ ವಿಮಾನಕ್ಕೆ ಬಡಿಯಿತೇ ಸಿಡಿಲು?
ವೆಲ್ಲಿಂಗ್ಟನ್, ನವೆಂಬರ್ 22: ರನ್‌ವೇನಲ್ಲಿ ನಿಲ್ಲಿಸಿದ್ದ ವಿಮಾನದ ಬಳಿಯೇ ಸಿಡಿಲು ಬಡಿದಿರುವ ಘಟನೆ ನ್ಯೂಜಿಲೆಂಡ್‌ನ ಕ್ರಿಸ್ಟ್‌ಚರ್ಚ್ ವಿಮಾನ ನಿಲ್ದಾಣದ ಬಳಿ ನಡೆದಿದೆ.
ಆದರೆ ನೀವು ಚಿತ್ರವನ್ನು ನೋಡಿದರೆ ವಿಮಾನಕ್ಕೇ ಸಿಡಿಲು ಬಂದೆರಗಿದಂತೆ ಗೋಚರಿಸುತ್ತದೆ. ಈ ಕುರಿತು ಅಲ್ಲೇ ಇದ್ದ ಸ್ಥಳೀಯರೊಬ್ಬರು ತಕ್ಷಣವೇ ಚಿತ್ರವನ್ನು ಮೊಬೈಲ್‌ನಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
ಆದರೆ ವಿಮಾನಕ್ಕೆ ಯಾವುದೇ ತೊಂದರೆಯಾಗಿಲ್ಲ, ವಿಮಾನಕ್ಕೆ ನೇರವಾಗಿ ಸಿಡಿಲು ಬಡಿದಿಲ್ಲ, ವಿಮಾನದ ಬಳಿ ಬಡಿದಿದೆಯಷ್ಟೇ ಎನ್ನುವ ಮಾಹಿತಿ ಲಭ್ಯವಾಗಿದೆ.

ನ್ಯೂಜಿಲೆಂಡ್‌ನ ಹವಾಮಾನ ಇಲಾಖ ಹಲವು ಪ್ರದೇಶದಲ್ಲಿ ಭಾರಿ ಸಿಡಿಲು ಗುಡುಗು ಉಂಟಾಗುವ ಮುನ್ಸೂಚನೆ ಯನ್ನು ಮದಲೇ ನೀಡಿತ್ತು. ದೇಶದ ಹಲವು ಭಾಗಗಳಲ್ಲಿ ಭೀಕರ ಬಿರುಗಾಳಿಗೆ ಆಲಿಕಲ್ಲು ಮಳೆಯಾಗಿದೆ. ಕೆಲವು ಕಡೆ ಮೊಟ್ಟೆ ಗಾತ್ರದ ಆಲಿಕಲ್ಲು ಬಿದ್ದಿದೆ. ಎಂದು ಮಾಧ್ಯಮಗಳು ವರದಿ ಮಾಡಿದೆ.
ಫೋಟೊದಲ್ಲಿ ಕಾಣುವಂತೆ ಏರ್‌ಬಸ್ A380 ಹೆಸರಿನ ವಿಮಾನವು ರನ್‌ವೇ ಬಳಿ ಪಾರ್ಕ್ ಮಾಡಿದ್ದಾಗ ಸಮೀಪದಲ್ಲೇ ಸಿಡಿಲು ಬಡಿದಿದೆ. ಈ ಬಗ್ಗೆ ನ್ಯೂಜಿಲೆಂಡ್ ಜಿಸಿಎಚ್ ವಿಮಾನಯಾನ ಸಂಸ್ಥೆ ಬಲವಾದ ಬಿರುಗಾಳಿ ಹಾದುಹೋಗಲು ಎಮಿರೇಟ್ಸ್ ವಿಮಾನ ಕಾದು ನಿಂತಿದೆ ಎಂದು ಟ್ವಿಟ್ಟರ್ ನಲ್ಲಿ ಬರೆದುಕೊಂಡಿದೆ.












Click it and Unblock the Notifications