ಬ್ರಿಕ್ಸ್ ಶೃಂಗಸಭೆಯಲ್ಲಿ ಮೋದಿಗೆ ಚೀನಾ ಕೊಟ್ಟ ವಾಗ್ದಾನವೇನು?
ಭಾರತ ಹಾಗೂ ಚೀನಾ ನಡುವಿನ ಸಮಸ್ಯೆಗಳನ್ನು ಚರ್ಚೆಯ ಮೂಲಕ ಬಗೆ ಹರಿಸಲು ಭಾರತಕ್ಕೆ ಚೀನಾ ವಾಗ್ದಾನ. ಬ್ರಿಕ್ಸ್ ಸಮಾವೇಶದಲ್ಲಿ ಮೋದಿಗೆ ವಾಗ್ದಾನ ನೀಡಿದ ಚೀನಾ.
ಬೀಜಿಂಗ್, ಸೆಪ್ಟೆಂಬರ್ 5: ಗಡಿ ವಿವಾದ ಸೇರಿದಂತೆ ಭಾರತ ಹಾಗೂ ಚೀನಾ ದೇಶಗಳ ನಡುವೆ ಯಾವುದೇ ಭಿನ್ನಾಭಿಪ್ರಾಯಗಳು ಇರಲಿ, ಅವೆಲ್ಲವನ್ನೂ ದ್ವಿಪಕ್ಷೀಯ ನಂಟಿನ ಅಡಿಯಲ್ಲಿ ಚರ್ಚಿಸಿ ಬಗೆಹರಿಸಿಕೊಳ್ಳುವ ಕುರಿತಾಗಿ ಚೀನಾ ದೇಶ, ಭಾರತ ಸರ್ಕಾರಕ್ಕೆ ವಾಗ್ದಾನ ನೀಡಿದೆ.
ಇತ್ತೀಚೆಗೆ, ಎರಡೂ ದೇಶಗಳ ಗಡಿಯಲ್ಲಿರುವ ಡೊಕ್ಲಾಮ್ ಪ್ರಾಂತ್ಯದಲ್ಲಿ ಉಭಯ ದೇಶಗಳೂ ತಮ್ಮ ಸೇನೆಯನ್ನು ಜಮಾವಣೆಗೊಳಿಸಿ ಯುದ್ಧದ ಭೀತಿ ಹರಡುವಂತೆ ಮಾಡಿದ್ದವು.

ಬ್ರಿಕ್ಸ್ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದ ಚೀನಾದ ಅಧ್ಯಕ್ಷ ಜಿನ್ ಪಿಂಗ್ ಅವರು, ಮಂಗಳವಾರ ನಡೆದ ಎರಡೂ ದೇಶಗಳ ಉನ್ನತ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತುಕತೆ ನಡೆಸಿದರು.
ಆ ವೇಳೆ, ಎರಡೂ ರಾಷ್ಟ್ರಗಳ ನಡುವಿನ ಸಮಸ್ಯೆಗಳನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳುವುದು ಹಾಗೂ 1954ರಲ್ಲಿ ಭಾರತ ಹಾಗೂ ಚೀನಾ ನಡುವೆ ಏರ್ಪಟ್ಟಿದ್ದ ಪಂಚಶೀಲ ಸಿದ್ಧಾಂತದ ಅನ್ವಯ ಎರಡೂ ದೇಶಗಳು ಕಾರ್ಯೋನ್ಮುಖ ರಾಗುವ ಬಗ್ಗೆ ಜಿನ್ ಪಿಂಕ್ ಅವರು ಮೋದಿಯವರ ಬಳಿ ಮಾತುಕತೆ ನಡೆಸಿದರು.












Click it and Unblock the Notifications