ಲಡಾಖ್ ಗಡಿ ಸಂಘರ್ಷ: ಮಾಧ್ಯಮಗಳ 6 ಪ್ರಶ್ನೆಗಳಿಗೆ ಚೀನಾದ ಒಂದೇ ಉತ್ತರ
ಬೀಜಿಂಗ್, ಜೂನ್ 19: ಗಲ್ವಾನ್ ಕಣಿವೆ ಘರ್ಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚೀನಾ ಎಲ್ಲವನ್ನೂ ಮುಚ್ಚಿಡುವಂತಿದೆ.
ಚೀನಾ ವಿದೇಶಾಂಗ ಸಚಿವಾಲಯದ ಅಧಿಕಾರಿ ಮಾಧ್ಯಮಗಳೊಂದಿಗೆ ಮಾತನಾಡಿ, ಉಭಯ ದೇಶಗಳು ಗಡಿಯಲ್ಲಿನ ಸಂಘರ್ಷದ ಕುರಿತು ಕಮಾಂಡರ್ ಹಂತದ ಮಾತುಕತೆಗೆ ಬದ್ಧವಾಗಿವೆ, ಹಾಗೂ ಸಂಘರ್ಷವನ್ನು ತಿಳಿಗೊಳಿಸುವ ನಿಟ್ಟಿನಲ್ಲಿ ಕೆಲಸ ನಡೆದಿದೆ. ಶಾಂತಿ ಮರು ಸ್ಥಾಪಿಸಲು ಪ್ರಯತ್ನ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಇನ್ನೂ 4 ಗಡಿ ಪ್ರದೇಶಗಳನ್ನು ನುಂಗುತ್ತೇವೆ ಎಂದ ಚೀನಾ
ಆದರೆ ಗಲ್ವಾನ್ ನದಿಗೆ ಅಣೆಕಟ್ಟು ನಿರ್ಮಿಸಲಾಗುತ್ತಿದೆಯೇ, ಭಾರತೀಯ ಸೈನಿಕರು ಚೀನಾದ ಗಡಿಯಲ್ಲಿನ ಮೂಲಸೌಕರ್ಯಗಳನ್ನು ನಾಶಪಡಿಸಲು ಮುಂದಾದಾಗ ಘರ್ಷಣೆ ನಡೆಯಿತೇ, ದೊಡ್ಡ ಸಂಖ್ಯೆಯಲ್ಲಿ ಚೀನಾ ಸೈನಿಕರು ಹತರಾಗಿದ್ದಾರೆಯೇ?, ಇಂತಹ ಯಾವುದೇ ಪ್ರಶ್ನೆಗಳಿಗೆ ಚೀನಾ ಉತ್ತರಿಸಿಲ್ಲ.
ಬದಲಾಗಿ ಎಲ್ಲದಕ್ಕೂ ಕಮಾಂಡರ್ ಹಂತದ ಮಾತುಕತೆ ಕುರಿತೇ ಉತ್ತರ ನೀಡಿದ್ದಾರೆ. ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಮಾತುಕತೆ ಬಳಿಕ ಈ ಬೆಳವಣಿಗೆಯಾಗಿದೆ.
ಜೈಶಂಕರ್ ಕೂಡ ಇದೇ ವಿಚಾರವನ್ನು ಹೇಳಿದ್ದರು. ಹೀಗಾಗಿ ಕಮಾಂಡರ್ ಹಂತದ ಮಾತುಕತೆಯಲ್ಲಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುತ್ತಿದೆಯೇ ಅಥವಾ ಪರಿಸ್ಥಿತಿ ಇನ್ನಷ್ಟು ಉಲ್ಬಣಗೊಳ್ಳಲಿದೆಯೇ ಎಂದು ಕಾದು ನೋಡಬೇಕಿದೆ.
ಪೂರ್ವ ಲಡಾಖ್‌ನ ಗಲ್ವಾನ್ ಕಣಿವೆಯಲ್ಲಿ ಜೂನ್ 15,16 ರಂದು ಭಾರತ-ಚೀನಾದ ನಡುವೆ ನಡೆದ ಘರ್ಷಣೆಯಲ್ಲಿ 20 ಭಾರತೀಯ ಸೈನಿಕರು ಹುತಾತ್ಮರಾಗಿದ್ದರು. 43 ಚೀನಾದ ಸೈನಿಕರನ್ನು ಹತ್ಯೆ ಮಾಡಲಾಗಿತ್ತು.