Ukraine War: ಯುದ್ಧ ಭಯದಲ್ಲಿ ನರಳುತ್ತಿರುವ ಉಕ್ರೇನ್ ಜನ, ಮುಂದಿನ ಪರಿಸ್ಥಿತಿ ಏನು?

ರಷ್ಯಾ ಒಂದು ಕಡೆ ನಿರಂತರವಾಗಿ ದಾಳಿ ಮಾಡುತ್ತಲೇ ಇದೆ... ಇನ್ನೊಂದು ಕಡೆ ಅಮೆರಿಕ ನೀಡುತ್ತಿದ್ದ ಅನುದಾನ ಕೂಡ ನಿಂತು ಹೋಗಿದೆ... ಹೀಗೆ ಉಕ್ರೇನ್ ಇದೀಗ ಸಂಕಷ್ಟಗಳಲ್ಲೇ ಮುಳುಗಿ ಹೋಗಿದ್ದು, ಏನು ಮಾಡೋದಪ್ಪಾ ಅಂತಾ ನರಳುತ್ತಿದ್ದಾರೆ ಉಕ್ರೇನ್ ಪ್ರಜೆಗಳು. ಮಕ್ಕಳು & ಮಹಿಳೆಯರು ಹಸಿವಿನಲ್ಲೇ ನರಳುತ್ತಿದ್ದಾರೆ. ಇಂತಹ ಸ್ಥಿತಿಯಲ್ಲಿ ಉಕ್ರೇನ್ ದೇಶದ ರಾಜಧಾನಿಗೆ ಹೊಸ ಭಯ ಶುರುವಾಗಿದೆ. ರಷ್ಯಾ ಇತ್ತೀಚೆಗೆ ನಡೆಸಿದ ಭೀಕರ ದಾಳಿಯಿಂದ ಈ ಆತಂಕ ಹೆಚ್ಚಾಗಿ ಕಾಡುತ್ತಿದೆ.

ಅಂದಹಾಗೆ ರಷ್ಯಾ ಸೇನೆ ಇದೀಗ ಉಕ್ರೇನ್‌ಗೆ ಕೊಡುತ್ತಿರುವ ಒಂದೊಂದು ಏಟು ಕೂಡ ಅಲ್ಲಿನ ಜನರ ಸಮೇತ ರಾಜಕಾರಣಿಗಳು ಕೂಡ ನಲುಗಿ ಹೋಗುವಂತೆ ಮಾಡುತ್ತಿದೆ. ರಷ್ಯಾ & ಉಕ್ರೇನ್ ನಡುವೆ ಘೋರ ಯುದ್ಧ ನಡೆಯುತ್ತಿದ್ದು, ಪರಿಣಾಮ ಪರಿಸ್ಥಿತಿ ಕೂಡ ಕೈಮೀರಿ ಹೋಗುತ್ತಿದೆ. ಮತ್ತೊಂದ್ಕಡೆ ರಷ್ಯಾ & ಉಕ್ರೇನ್ ಯುದ್ಧದಲ್ಲಿ ಪಾಶ್ಚಿಮಾತ್ಯ ದೇಶಗಳು ಕೂಡ ಕೈಜೊಡಿಸಿ ಸ್ಥಿತಿ ಇನ್ನಷ್ಟು ಸೂಕ್ಷ್ಮವಾಗುವಂತೆ ಆಗಿದೆ. ಇದೇ ಸಮಯದಲ್ಲಿ ಉಕ್ರೇನ್ ರಾಜಧಾನಿ ಸೇಫ್ ಅಂತಾ ತಿಳಿದಿದ್ದ ನಿರಾಶ್ರಿತರಿಗೆ ಹೊಸ ಆತಂಕ ಎದುರಾಗಿದೆ.

Kyiv Residents Experience Increased Tension Amid Ongoing Ukraine-Russia War

ಉಕ್ರೇನ್ ರಾಜಧಾನಿ ಉಡೀಸ್ ಆಗುತ್ತಾ?

ರಷ್ಯಾ ಇದುವರೆಗೂ ಉಕ್ರೇನ್‌ಗೆ ಬದಲಾಗುವಂತೆ ಹೇಳಿ ಹೇಳಿ ಇದೀಗ ರೊಚ್ಚಿಗೆದ್ದು ಕೂತಿದೆ. ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಉಕ್ರೇನ್ ವಿರುದ್ಧ ಭೀಕರ ದಾಳಿ ಮುನ್ನೆಚ್ಚರಿಕೆ ನೀಡಿದ್ದು, ಭವಿಷ್ಯದಲ್ಲಿ ಉಕ್ರೇನ್‌ ಇನ್ನಷ್ಟು ಸಮಸ್ಯೆಯಲ್ಲಿ ಸಿಲುಕಿ ಒದ್ದಾಡುವಂತೆ ಮಾಡಲು ರಷ್ಯಾದ ಸೇನೆ ಎಲ್ಲಾ ರೀತಿ ಪ್ಲಾನ್ ಮಾಡಿದೆ. ಮತ್ತೊಂದು ಕಡೆ ಉಕ್ರೇನ್ ರಾಜಧಾನಿ ಕೀವ್ ವಶಕ್ಕೆ ಕೂಡ ಪಕ್ಕಾ ಸ್ಕೆಚ್ ಹಾಕಿರುವ ಆರೋಪ ಕೇಳಿ ಬಂದಿದ್ದು, ಉಕ್ರೇನ್ ವಿರುದ್ಧ ಅಪಾಯಕಾರಿ ಅಸ್ತ್ರಗಳನ್ನೇ ಬಳಸಲು ಮುಂದಾಗಿದೆ ರಷ್ಯಾ ಮಿಲಿಟರಿ. ಇದರಲ್ಲಿ ಪರಮಾಣು ಅಸ್ತ್ರ ಬಳಕೆ ಆದರೆ ಪರಿಸ್ಥಿತಿ ಏನು? ಎಂಬ ಆತಂಕ ಶುರುವಾಗಿದೆ.

ಯುದ್ಧ ವಾತಾವರಣ ಮತ್ತಷ್ಟು ಘೋರ?

ರಷ್ಯಾ ಸೇನೆ ಜಗತ್ತಿನ ಟಾಪ್ ಮಿಲಿಟರಿಗಳ ಪೈಕಿ ಒಂದಾಗಿದ್ದು, ಸಿಕ್ಕಾಪಟ್ಟೆ ಸ್ಟ್ರಾಂಗ್ ಆಗಿ ನೆಲೆ ನಿಂತಿದೆ. ಹೀಗಾಗಿ ತನ್ನ ಶತ್ರುಗಳಿಗೆ ವಾರ್ನಿಂಗ್ ಕೊಟ್ಟು, ದಾಳಿ ಮಾಡುವಷ್ಟು ಶಕ್ತಿ ಕೂಡ ಹೊಂದಿದೆ. ಈಗಾಗಲೇ ಉಕ್ರೇನ್ ವಿರುದ್ಧ ಯುದ್ಧ ಶುರು ಮಾಡಿ 3 ವರ್ಷಗಳ ಕಾಲ ಹೋರಾಡಿದೆ. ಇಂತಹ ಸಮಯದಲ್ಲೇ ತನ್ನ ಬಳಿ ಇರುವ ಕ್ಷಿಪಣಿಗಳನ್ನು ಕೂಡ ಬಳಸಿ ದಾಳಿ ಮಾಡಲು ಮುಂದೆ ಬಂದಿದೆ ರಷ್ಯಾ. ಇದೇ ವಿಚಾರ ಭಯವನ್ನ ಕೂಡ ಹುಟ್ಟು ಹಾಕುತ್ತಿದೆ. ಅದರಲ್ಲೂ ಉಕ್ರೇನ್ ರಾಜಧಾನಿ ಕೀವ್ ಇನ್ನು ಕೆಲವೇ ದಿನಗಳಲ್ಲಿ ರಷ್ಯಾ ವಶವಾಗುತ್ತಾ? ಎಂಬ ಅನುಮಾನ ಕೂಡ ಮೂಡುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+