ಕುವೈತಿನಿಂದ ಎನ್ನಾರೈಗಳು ಭಾರತಕ್ಕೆ ಹಣ ಕಳಿಸಿದರೆ ತೆರಿಗೆ

Posted By:
Subscribe to Oneindia Kannada

ಕುವೈತ್, ನವೆಂಬರ್18: ಕುವೈತಿನಲ್ಲಿರುವ ಅನಿವಾಸಿ ಭಾರತೀಯರು ಸೇರಿದಂತೆ ಅನಿವಾಸಿಗಳು ತಮ್ಮ ದೇಶಗಳಿಗೆ ಕಳುಹಿಸುವ ಹಣಕ್ಕೆ ತೆರಿಗೆ ವಿಧಿಸಲು ಕುವೈತ್ ಸರ್ಕಾರ ಮುಂದಾಗಿದೆ. ಆರ್ಥಿಕ ಸುಧಾರಣೆ ಕ್ರಮಗಳನ್ನು ಜರುಗಿಸಲು ಇಲ್ಲಿನಸರ್ಕಾರ ಮುಂದಾಗಿದೆ.

ಅನಿವಾಸಿಗಳು ಹಾಗೂ ಅನಿವಾಸಿಗಳಿಗೆ ಸೇರಿರುವ ಖಾಸಗಿ ಕ್ಷೇತ್ರಗಳ ಕಂಪೆನಿಗಳ ಮೇಲೆ ತೆರಿಗೆ ವಿಧಿಸಲಾಗುತ್ತದೆ. ಜತೆಗೆ ಆರೋಗ್ಯ ಕ್ಷೇತ್ರ, ವಿದ್ಯಾಭ್ಯಾಸ ಕ್ಷೇತ್ರಗಳನ್ನು ಖಾಸಗೀಕರಣ ನಡೆಸುವ ಚಿಂತನೆಯನ್ನು ನಡೆಸಲಾಗುತ್ತಿದೆ.

Kuwait Government plans 5pc tax on expats' remittances

ಡಿಸೆಂಬರ್ ತಿಂಗಳ ಕೊನೆಗೆ ಹೊಸ ಕ್ಯಾಬಿನೆಟ್ ಅಧಿವೇಶನದಲ್ಲಿ ಆರ್ಥಿಕ ಬಿಕ್ಕಟ್ಟು ಪರಿಹಾರಕ್ಕೆ ಹೊಸ ನೀತಿ ಪ್ರಕಟಿಸಲಾಗುತ್ತದೆ. ಹೊಸ ಆರ್ಥಿಕ ಸುಧಾರಣೆ ಮಸೂದೆ ಜಾರಿಗೊಂಡ ಬಳಿಕ ಅನಿವಾಸಿಗಳು ಕಳಿಸುವ ಹಣದ ಮೇಲೆ ಶೇ 5ರಷ್ಟು ಹಾಗೂ ಕಂಪನಿಗಳ ರವಾನೆಗೆ ಶೇ 10ರಷ್ಟು ತೆರಿಗೆ ಕಡಿತಗೊಳ್ಳುವ ಸಾಧತಯಿದೆ ಎಂದು ಕುವೈತ್ ಟೈಮ್ಸ್ ವರದಿ ಮಾಡಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Kuwait Government is planning to impose tax on expat's remittances and companies. Government may impose 5 percent tax in expat's remittances and 10 percent on comapnies besides privatisation of healthcare and education sector
Please Wait while comments are loading...