ಕುವೈತ್ ದೇಶದಲ್ಲಿರುವ ಭಾರತೀಯರು ಬೆಚ್ಚಿಬೀಳುವ ಸುದ್ದಿ ಇದು!
ಭಾರತೀಯರು ಜಗತ್ತಿನ ಮೂಲೆ ಮೂಲೆಯಲ್ಲೂ ಹೋಗಿ ವಾಸ ಮಾಡುತ್ತಿದ್ದಾರೆ. ಹಾಗೇ ಭಾರತ ಮೂಲದವರಿಗೆ ಜಗತ್ತಿನ ಪ್ರತಿಯೊಂದು ದೇಶ ಕೂಡ ಮೊದಲ ಆದ್ಯತೆ ನೀಡುತ್ತದೆ. ಹೀಗಿದ್ದಾಗ, ಕುವೈತ್ ಸೇರಿದಂತೆ ಅರಬ್ ದೇಶದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಭಾರತೀಯರು ಇದ್ದು. ಇದೀಗ ಕುವೈತ್ ದೇಶದಲ್ಲಿ ವಾಸ ಇರುವ ಭಾರತೀಯರಿಗೆ ಆಘಾತಕಾರಿ ಸುದ್ದಿ ಸಿಕ್ಕಿದೆ. ಹಾಗಾದ್ರೆ ಏನದು ಶಾಕಿಂಗ್ ನ್ಯೂಸ್? ಮುಂದೆ ಓದಿ.
ಅಷ್ಟಕ್ಕೂ ಕುವೈತ್ ದೇಶದಲ್ಲಿ ಕಟ್ಟಡ ಒಂದಕ್ಕೆ ಬೆಂಕಿ ಬಿದ್ದು ಸುಮಾರು 43 ಜನರು ಜೀವವನ್ನೇ ಬಿಟ್ಟಿದ್ದು, ಈ ಪೈಕಿ ಭಾರತೀಯರು ಕೂಡ ಸೇರಿದ್ದಾರೆ ಎಂಬ ಸುದ್ದಿ ಸಂಚಲನ ಸೃಷ್ಟಿಸಿದೆ. ಈ ಘಟನೆ ನಡೆದಿರುವ ಕಟ್ಟಡ ಕೂಡ ಭಾರತ ಮೂಲದ ವ್ಯಕ್ತಿಗೆ ಸೇರಿದ್ದು ಎನ್ನಲಾಗಿದೆ. ಕೇರಳದ ವ್ಯಕ್ತಿ ಅಂದ್ರೆ ಮಲಯಾಳಿ ಉದ್ಯಮಿ ಒಬ್ಬರಿಗೆ ಸೇರಿದ ಕಟ್ಟಡದಲ್ಲಿ ಈಗ ಬೆಂಕಿ ಬಿದ್ದಿದ್ದು, ಭಾರಿ ದೊಡ್ಡ ಅವಘಡವು ನಡೆದು ಹೋಗಿದೆ. ಬಹುಮಹಡಿ ಕಟ್ಟಡದಲ್ಲಿ ಕುವೈತ್ ಕಾಲಮಾನದಂತೆ, ಇಂದು ಬೆಳಗ್ಗೆ 6 ಗಂಟೆಗೆ ಬೆಂಕಿ ಹೊತ್ತಿಕೊಂಡಿದೆ. ಜನರು ನಿದ್ದೆಯಲ್ಲಿದ್ದ ಕಾರಣಕ್ಕೆ ಹಲವಾರು ಜನರ ಸಾವು ಸಂಭವಿಸಿದೆ. ಈ ಕಟ್ಟಡದಲ್ಲಿ ಸುಮಾರು 195 ಮಂದಿ ವಾಸ ಮಾಡುತ್ತಿದ್ದರು.

ಸಾವಿನ ಸಂಖ್ಯೆ ಮತ್ತೆ ಏರಿಕೆ?
ಸುಟ್ಟ ಗಾಯದಿಂದ ಚೇತರಿಕೆ ಕಾಣುವುದು ತುಂಬಾ ಕಷ್ಟದ ವಿಚಾರ. ಹೀಗಾಗಿಯೇ ವೈದ್ಯರು ಈ ರೀತಿ ಸುಟ್ಟ ಗಾಯದಿಂದ ಬಳಲುವ ರೋಗಿಗಳ ಚಿಕಿತ್ಸೆಗೆ ವಿಶೇಷ ಗಮನ ನೀಡುತ್ತಾರೆ. ಇದೆಲ್ಲಾ ಒಂದು ಕಡೆ ಆಗಿದ್ದರೆ, ಮತ್ತೊಂದು ಕಡೆ ಕಟ್ಟಡಕ್ಕೆ ಬೆಂಕಿ ಬಿದ್ದಾಗ ಹತ್ತಾರು ಜನರಿಗೆ ಗಂಭೀರ ಗಾಯವಾಗಿದೆ. ಇವರ ಪೈಕಿ ಹಲವರು ಬದುಕಿ ಉಳಿಯುವ ಸಾಧ್ಯತೆ ತುಂಬಾ ಕಡಿಮೆ ಎನ್ನುವ ಮಾತನ್ನ ವೈದ್ಯರು ಹೇಳುತ್ತಿದ್ದಾರೆ. ಇವರಿಗೆಲ್ಲಾ ಚಿಕಿತ್ಸೆ ನೀಡುತ್ತಿದ್ದರೂ, ಸಾವಿನ ಸಂಖ್ಯೆಯಲ್ಲಿ ಏರಿಕೆ ಆಗುವ ಆತಂಕ ಮೂಡಿದೆ. ಹೀಗೆ ಮೃತಪಟ್ಟವರ ಪೈಕಿ, ಸಾಕಷ್ಟು ಜನರು ಮಲಯಾಳಿ ಭಾಷಿಕರು ಇದ್ದಾರೆ ಎಂಬ ವಿಚಾರ ತಿಳಿದುಬಂದಿದೆ. ಭಾರತೀಯರ ಸಾವು ಈಗ ಆತಂಕವನ್ನೂ ಹುಟ್ಟುಹಾಕಿದೆ.
ಘಟನೆಗೆ ಕಾರಣ ಯಾರು?
ಇದೀಗ ಘಟನೆ ಕುರಿತು ಕುವೈತ್ ಆರೋಗ್ಯ ಸಚಿವಾಲಯ ರಿಲೀಸ್ ಮಾಡಿದ ಹೇಳಿಕೆಯಂತೆ, ಕೆಲವು ಗಾಯಾಳುಗಳ ಸ್ಥಿತಿ ಗಂಭೀರ ಆಗಿದೆ. ಎಲ್ಲಾ ಗಾಯಾಳುಗಳನ್ನ ಅಗತ್ಯ ವೈದ್ಯಕೀಯ ಚಿಕಿತ್ಸೆಗೆ ಅಂತ ಹತ್ತಿರದ ಆಸ್ಪತ್ರೆಗಳಿಗೆ ಕರೆದುಕೊಂಡು ಹೋಗಲಾಗಿದೆ. ಈ ಕಟ್ಟಡದಲ್ಲಿ ಇರುವವರು ಹೆಚ್ಚಿನವರು ಮಲಯಾಳಿಗಳು, ಹಾಗೇ ತಮಿಳುನಾಡು ಮೂಲದ ಇಬ್ಬರು ಕೂಡ ಮೃತಪಟ್ಟಿದ್ದಾರೆ. ಭಾರತ ಮೂಲದವರು ಹೆಚ್ಚಾಗಿರುವ ಕಟ್ಟಡದಲ್ಲೇ ಈ ರೀತಿಯ ಘಟನೆ ಸಂಭವಿಸಿರುವುದು ನೋವಿಗೂ ಕಾರಣವಾಗಿದೆ. ಅಡುಗೆ ಮನೆಯಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡು, ಇಡೀ ಕಟ್ಟಡಕ್ಕೆ ಆವರಿಸಿದೆ ಎನ್ನಲಾಗಿದೆ. ಆ ನಂತರ ಹಲವರು ಜೀವ ಉಳಿಸಿಕೊಳ್ಳಲು ಬಿಲ್ಡಿಂಗ್ ಮೇಲಿನಿಂದ ಹಾರಿ ಜೀವ ಬಿಟ್ಟಿದ್ದಾರೆ.












Click it and Unblock the Notifications