• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನೇಪಾಳ ಕಮ್ಯೂನಿಸ್ಟ್ ಪಕ್ಷದಿಂದ ಕೆಪಿ ಶರ್ಮಾ ಓಲಿ ಉಚ್ಚಾಟನೆ

|

ಕಠ್ಮಂಡು, ಜನವರಿ 24: ನೇಪಾಳಿ ಕಮ್ಯೂನಿಸ್ಟ್ ಪಕ್ಷ(ಎನ್‌ಸಿಪಿ) ಬಿಟ್ಟು, ಬಂಡಾಯಗಾರ ಮಾವೋವಾದಿಗಳನ್ನು ಓಲೈಸುತ್ತಾ ಬಂದ ಪ್ರಧಾನಿ ಕೆ.ಪಿ ಶರ್ಮಾ ಓಲಿ ಅವರನ್ನು ಪಕ್ಷದಿಂದ ಹೊರಹಾಕಲಾಗಿದೆ ಎಂದು ಕಮ್ಯೂನಿಸ್ಟ್ ಪಕ್ಷ ಅಧಿಕೃತವಾಗಿ ಪ್ರಕಟಿಸಿದೆ.

'ಓಲಿ ಅವರು ಕೊರೊನಾವೈರಸ್, ಪಕ್ಷ ಎರಡನ್ನು ನಿಭಾಯಿಸುವಲ್ಲಿ ಸೋತಿದ್ದಾರೆ. ಪಕ್ಷದ ಮುಂದಿನ ನಿರ್ಧಾರ ಶೀಘ್ರವೇ ಪ್ರಕಟಿಸಲಾಗುತ್ತದೆ'' ಎಂದು ಎನ್‌ಸಿಪಿಯ ಕೇಂದ್ರ ಸಮಿತಿಯ ಸದಸ್ಯ ಬಿಷ್ನು ರಿಜಾಲ್ ಹೇಳಿದ್ದರು.

ಸ್ವಪಕ್ಷದ ಬೆಂಬಲ ಕಳೆದುಕೊಂಡಿದ್ದ ಓಲಿ ವಿರುದ್ಧ ಬಂಡಾಯ ಹೆಚ್ಚಾಗಿತ್ತು. ಅಗತ್ಯ ಬೆಂಬಲ ಇಲ್ಲದ ಕಾರಣ ಸಂಸತ್ ವಿಸರ್ಜನೆಗೆ ಮನವಿ ಮಾಡಿ ರಾಷ್ಟ್ರಾಧ್ಯಕ್ಷರಿಗೆ ಪತ್ರ ಬರೆಯಲಾಗಿತ್ತು.

ನಂತರ ಸರ್ಕಾರ ಪತನ ಸೂಚನೆ ಸಿಗುತ್ತಿದ್ದಂತೆ ಓಲಿ ಅವರನ್ನು ಹಂಗಾಮಿ ಪ್ರಧಾನಿಯಾಗಿ ನೇಮಿಸಿ, 2021ರಲ್ಲಿ ನೇಪಾಳ ಸಾರ್ವತ್ರಿಕ ಚುನಾವಣೆ ನಿಗದಿಯಾಗಿದ್ದು, ಎರಡು ಹಂತದಲ್ಲಿ ಏಪ್ರಿಲ್ 30 ಹಾಗೂ ಮೇ 10 ರಂದು ನಡೆಯಲಿದೆ ಎಂದು ರಾಷ್ಟ್ರಾಧ್ಯಕ್ಷರ ಕಚೇರಿ ಪ್ರಕಟಿಸಿತ್ತು.

ಓಲಿ ಅವರ ಕಮ್ಯೂನಿಸ್ಟ್ ಪಕ್ಷದ ಸದಸ್ಯತ್ವವನ್ನು ಹಿಂದಕ್ಕೆ ಪಡೆಯಲಾಗಿದೆ ಎಂದು ನಾರಾಯಣ್ ಕಾಜಿ ಶ್ರೇಷ್ಠ ತಿಳಿಸಿದರು.

ನೇಪಾಳ ಸಂಸತ್ ವಿಸರ್ಜನೆ; 2021ರಲ್ಲಿ ಎರಡು ಹಂತದಲ್ಲಿ ಚುನಾವಣೆನೇಪಾಳ ಸಂಸತ್ ವಿಸರ್ಜನೆ; 2021ರಲ್ಲಿ ಎರಡು ಹಂತದಲ್ಲಿ ಚುನಾವಣೆ

ನೇಪಾಳ ಸಂಸತ್ತಿನಲ್ಲಿ 275 ಸ್ಥಾನಗಳಿದ್ದು ಈ ಪೈಕಿ 165 ಸದಸ್ಯರನ್ನು ನೇರವಾಗಿ ಜನರೇ ಆಯ್ಕೆ ಮಾಡುತ್ತಾರೆ. ಉಳಿದ 110 ಜನರನ್ನು ಪರೋಕ್ಷವಾಗಿ ಆಯ್ಕೆ ಮಾಡಲಾಗುತ್ತದೆ.

2017ರಲ್ಲಿ ನೇಪಾಳ ಸಂಸತ್ತಿಗೆ ನಡೆದ ಚುನಾವಣೆಯಲ್ಲಿ ಎಡಪಕ್ಷಗಳ ಮೈತ್ರಿಕೂಟ 165ರಲ್ಲಿ 91 ಸ್ಥಾನಗಳನ್ನು ಗೆದ್ದುಕೊಂಡು ಭರ್ಜರಿ ಜಯ ದಾಖಲಿಸಿತ್ತು. ಈ ಜಯದೊಂದಿಗೆ ನೇಪಾಳದಲ್ಲಿ ರಾಜಕೀಯ ಸ್ಥಿರತೆಯ ಆಸೆ ಮತ್ತೆ ಚಿಗುರೊಡೆದಿತ್ತು. ಆದರೆ, ಆಡಳಿತರೂಢ ಎನ್‌ಸಿಪಿಯಲ್ಲೇ ಓಲಿ ವಿರೋಧಿಗಳು ಹೆಚ್ಚಳವಾಗಿ, ಓಲಿ ಬೆಂಬಲ ಕಳೆದುಕೊಂಡರು.

English summary
Nepal's Caretaker PM KP Sharma Oli removed from ruling Nepal Communist Party by a Central Committee Meeting of the splinter group of the party.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X