ಶತ್ರು ದೇಶಕ್ಕೆ ಹೊಸ ಹೆಸರನ್ನು ನೀಡಿದ ಕಿಮ್ಮಣ್ಣ: ಕೆಮ್ಮಿ ಕೆಮ್ಮಿ ನಗುತ್ತಿರುವ ಪಾಶ್ಚಿಮಾತ್ಯರು!

ಕಿಮ್ ಜಾಂಗ್ ಉನ್ ಹೆಸರು ಕೇಳಿದ್ರೆ ಒಂದು ಕ್ಷಣ ಜಗತ್ತಿನ ಯಾವುದೇ ದೇಶವಾದರೂ ಭಯ & ಆತಂಕ ವ್ಯಕ್ತಪಡಿಸುವುದು ಗ್ಯಾರಂಟಿ. ಯಾಕಂದ್ರೆ ಕಿಮ್ ಜಾಂಗ್ ಉನ್ ಇಟ್ಟಿರುವ ಹವಾ ಅಂತಹದ್ದು. ಕಿಮ್ ಜಾಂಗ್ ಉನ್ ಒಂದು ಸಾರಿ ಗುಡುಗಿದರೆ ಸಾಕು ದೂರ ದೂರದಲ್ಲಿರುವ ದೇಶಗಳು ಕೂಡ ಒಂದು ಕ್ಷಣ ಭಯಪಡುತ್ತವೆ. ಹೀಗಿದ್ದಾಗ ಅಕ್ಕಪಕ್ಕದ ದೇಶಗಳ ಪರಿಸ್ಥಿತಿ ಏನು? ಅನ್ನೋ ಪ್ರಶ್ನೆ ನಿಮ್ಮನ್ನು ಕಾಡುತ್ತಿರಬಹುದು. ನಿಮ್ಮ ಪ್ರಶ್ನೆಗೆ ಉತ್ತರ ಹುಡುಕುವ ಜೊತೆಗೆ, ಮತ್ತೊಂದು ಭರ್ಜರಿ ಸುದ್ದಿಯು ಇದೆ ಮುಂದೆ ಓದಿ.

ಅಂದಹಾಗೆ, ಕಿಮ್ ಜಾಂಗ್ ಉನ್ ಉತ್ತರ ಕೊರಿಯಾದ ಸರ್ವಾಧಿಕಾರಿ ಅನ್ನೋದು ಜಗತ್ತಿಗೇ ಗೊತ್ತಿರುವ ಸಂಗತಿ. ಆದರೆ ತನ್ನ ಪಕ್ಕದ ದೇಶ ಅಂದ್ರೆ ದಕ್ಷಿಣ ಕೊರಿಯಾ ಕಂಡರೆ ಕಿಮ್‌ನ ತಾತನಿಂದ ಹಿಡಿದು ಈಗಿನ ತಲೆಮಾರಿನ ತನಕ ಯಾರಿಗೂ ಆಗುವುದಿಲ್ಲ. ಒಂದು ಕಾಲದಲ್ಲಿ ಉತ್ತರ ಕೊರಿಯಾ & ದಕ್ಷಿಣ ಕೊರಿಯಾ ಎರಡೂ ದೇಶಗಳು ಒಟ್ಟಿಗೆ ಬದುಕುತ್ತಿದ್ದವು.

Kim Jong Un Given A New Name To South Korea

ಇದೇ ಒಗ್ಗಟ್ಟು ಸುಮಾರು ಅರ್ಧ ಶತಮಾನದ ಹಿಂದೆ ಮುರಿದು ಹೋಗಿತ್ತು. ಆಗ ಎರಡೂ ದೇಶ ಪೀಸ್ ಪೀಸ್ ಆಗಿ, ಒಂದು ದೇಶವನ್ನ ಉತ್ತರ ಕೊರಿಯಾ ಎಂದು ಕರೆಯಲಾಯಿತು. ಹೀಗೆ ದಕ್ಷಿಣ ಭಾಗದಲ್ಲಿ ಹರಡಿದ್ದ ದೇಶವನ್ನು ದಕ್ಷಿಣ ಕೊರಿಯಾ ಎಂದು ಕರೆಯಲಾಯಿತು. ಈ ಇಬ್ಬರ ದ್ವೇಷ ಈಗ ಮತ್ತಷ್ಟು ಹೆಚ್ಚಾಗಿದ್ದು, ಉತ್ತರ ಕೊರಿಯಾ ಅಧ್ಯಕ್ಷ ಅಥವಾ ಸರ್ವಾಧಿಕಾರಿ ಮಾಡಿರುವುದು ಏನು ಗೊತ್ತಾ? ಮುಂದೆ ಓದಿ.

ಶತ್ರುಗಳಿಗೆ ಹೊಸ ಹೆಸರು ಕೊಟ್ಟ ಕಿಮ್!

ಹೌದು, ಕಿಮ್ ಜಾಂಗ್ ಉನ್ ಬಳಿ ಸಾಕಷ್ಟು ಪರಮಾಣು ಅಸ್ತ್ರಗಳು ಇವೆ. ಹೀಗಾಗಿ ಶತ್ರು ದೇಶಗಳಿಗೆ ಕಿಮ್ ಜಾಂಗ್ ಉನ್ ಕಂಡರೆ ಭಯ... ಭಯ... ಯಾವ ಕ್ಷಣದಲ್ಲಿ ತನ್ನಲ್ಲಿರುವ ಪರಮಾಣು ಬಾಂಬ್‌ಗಳನ್ನ ಶತ್ರುಗಳ ಮೇಲೆ ಹಾಕಿಬಿಡುತ್ತಾನೋ, ಆ ಮೂಲಕ ಎಲ್ಲವನ್ನು ನಾಶ ಮಾಡಿಬಿಡುತ್ತಾನೋ ಅಂತಾ ಜಪಾನ್, ದಕ್ಷಿಣ ಕೊರಿಯಾ, ಅಮೆರಿಕ ದೇಶಗಳು ಸದಾ ಅಂಜಿಕೆಯಲ್ಲೇ ದಿನ ದೂಡುತ್ತಿವೆ. ಇಂತಹ ಸಮಯದಲ್ಲೇ ತನ್ನ ಪರಮ ಶತ್ರು ದ. ಕೊರಿಯಾ ದೇಶಕ್ಕೆ ಇದೀಗ ಪ್ರತಿಕೂಲ ದೇಶ ಎಂಬ ಅಡ್ಡ ಹೆಸರು ಇಟ್ಟಿದ್ದಾನೆ ಕಿಮ್ ಜಾಂಗ್ ಉನ್!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+