ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಳಲು ತೋಡಿಕೊಂಡ ಕನ್ನಡಿಗನಿಗೆ ಸೌದಿಯಲ್ಲಿ ಜೈಲುವಾಸ

|
Google Oneindia Kannada News

ಸೌದಿ ಅರೇಬಿಯಾ, ಮಾರ್ಚ್, 22: ಹೊಟ್ಟೆ ಪಾಡಿಗೆ ಕೆಲಸ ಅರಸಿ ವಿದೇಶಗಳಿಗೆ ತೆರಳುರುವ ಭಾರತೀಯರು ಎದುರಿಸುತ್ತಿರುವ ಸಂಕಷ್ಟಗಳನ್ನು ತೆರೆದಿಟ್ಟ ವಿಡಿಯೋ ವೊಂದು ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದೆ. ವಿಡಿಯೋ ಮಾಡಿ ನೋವು ತೋಡಿಕೊಂಡಿದ್ದ ಕರ್ನಾಟಕದ ಕೆಲಸಗಾರ ಈಗ ಮತ್ತಷ್ಟು ಸಂಕಷ್ಟಕ್ಕೆ ಗುರಿಯಾಗಿದ್ದಾರೆ.

ಸೌದಿ ಅರೇಬಿಯಾದಲ್ಲಿ ಕೆಲಸ ಮಾಡುತ್ತಿದ್ದ ಕರ್ನಾಟಕದವರೇ ಆದ ಚಾಲಕ ಅಬ್ದುಲ್ ಸತ್ತಾರ್ ಮಕಂದರ್ ವಿಡಿಯೋದಲ್ಲಿ ನೊವು ತೋಡಿಕೊಂಡಿದ್ದರು. ಮಾಲೀಕರು ಕಿರುಕುಳ ನೀಡುತ್ತಿದ್ದು, ಸ್ವದೇಶಕ್ಕೆ ಮರಳಲು ಬಿಡುತ್ತಿಲ್ಲ ಎಂದು ಹೇಳಿದ್ದರು. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.[ಸೌದಿಯಲ್ಲಿ ತಮಿಳು ಮಹಿಳೆ ಕೈ ಕಟ್, ಭಾರತದಿಂದ ಪ್ರತಿಭಟನೆ]

india

ಆದರೆ ವಿಡಿಯೋ ಈಗ ಮಕಂದರ್ ಅವರಿಗೆ ಕೆಡುಕಾಗಿ ಪರಿಣಮಿಸಿದ್ದು, ವಿಡಿಯೋ ಅಪ್ ಲೋಡ್ ಆದ ನಂತರ ಕ್ರಮ ಕೈಗೊಂಡಿರುವ ಸೌದಿ ಸಂಸ್ಥೆಯು ಮಕಂದರ್ ಅವರನ್ನು ಕೆಲಸದಿಂದ ತೆಗೆದುಹಾಕಿದೆ. ಅಲ್ಲದೆ, ತಪ್ಪು ಮಾಹಿತಿ ನೀಡಿದ್ದಾನೆಂದು ಆರೋಪಿ ಮಕಂದರ್ ಅವರನ್ನು ಅಲ್ಲಿನ ಪೊಲೀಸರು ಎರಡೆರಡು ಸಾರಿ ಬಂಧಸಿ ವಿಚಾರಣೆಗೆ ಒಳಪಡಿಸಿದ್ದಾರೆ ಎನ್ನಲಾಗಿದೆ.

ಚಾಲಕರು ನೋವು ತೋಡಿಕೊಂಡ ವಿಡಿಯೋವನ್ನು ಮಾರ್ಚ್ 14 ರಂದು ಸಾಮಾಜಿಕ ಹೋರಾಟಗಾರ ಕುಂದನ್ ಶ್ರೀವಾಸ್ತವ ಎಂಬುವವರು ಫೇಸ್ ಬುಕ್ ಗೆ ಅಪ್ ಲೋಡ್ ಮಾಡಿದ್ದರು. ದುಡಿಮೆಗೆಂದು 2 ವರ್ಷಗಳ ಹಿಂದಷ್ಟೇ ಮಕಂದರ್ ಸೌದಿಗೆ ಹೋಗಿದ್ದು. ಸೌದಿ ಅರೇಬಿಯಾದ ಅಳ್ ಸುರೂರ್ ಯುನೈಟೆಡ್ ಗ್ರೂಪ್ ನಲ್ಲಿ ಚಾಲಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು.[ಸಂಬಳವಿಲ್ಲದೆ ಸೌದಿ ಒಡೆಯರ ಒದೆ ತಿಂದ ಧಾರವಾಡದ ಮಹಿಳೆ]

ಆರೋಪಗಳನ್ನೆಲ್ಲಾ ತಳ್ಳಿಹಾಕಿರುವ ಅಲ್ ಸುರಾರ್ ಯುನೈಟೆಡ್ ಗ್ರೂಪ್ ಸಂಸ್ಥೆಯ ಅಧಿಕಾರಿಗಳು, ಕೆಲಸ ಮಾಡಲು ಇಷ್ಟವಿಲ್ಲದೆ ಇದ್ದರೆ ಯಾರೂ ಬೇಕಾದರೂ ರಾಜೀನಾಮೆಯನ್ನು ನೀಡಬಹುದು. ಮಕಂದರ್ ಗೆ ಕಂಪನಿ ಸೂಕ್ತ ರೀತಿಯಲ್ಲಿ ವೇತನ ನೀಡುತ್ತ ಬಂದಿದೆ ಎಂದು ಹೇಳಿದೆ.

ಭಾರತೀಯ ವಿದೇಶಾಂಗ ಇಲಾಖೆಗೂ ಮಾಹಿತಿ ನೀಡಲಾಗಿದ್ದು ಮುಂದೆ ಚಾಲಕನ ಸುರಕ್ಷತೆಗೆ ಯಾವ ಕ್ರಮ ತೆಗೆದುಕೊಳ್ಳುತ್ತ೬ದೆ ಎಂಬುದನ್ನು ಕಾದು ನೋಡಬೇಕಿದೆ. ಸದ್ಯ ಚಾಲಕ ಸೌದಿ ಪೊಲೀಸರ ವಶದಲ್ಲಿದ್ದಾರೆ. ಹಿಂದೆ ಸೌದಿ ಅರೇಬಿಯಾದಲ್ಲಿ ತಮಿಳುನಾಡು ಮಹಿಳೆಯ ಕೈ ಕತ್ತರಿಸಿದ್ದು ಸುದ್ದಿಯಾಗಿತ್ತು.

ಅಬ್ದುಲ್ ಸತ್ತಾರ್ ಮಕಂದರ್ ಯಾವ ಜಿಲ್ಲೆಯವರು?
ಅಬ್ದುಲ್ ಸತ್ತಾರ್ ಮಕಂದರ್ ಉತ್ತರ ಕನ್ನಡ ಜಿಲ್ಲೆ ದಾಂಡೇಲಿಯವರು. ಮನೆಯಲ್ಲಿ ಆರು ಜನರ ಕುಟುಂಬವಿದ್ದು ಮಕಂದರ್ ದುಡಿಮೆಯಿಂದಲೇ ಜೀವನ ಸಾಗಬೇಕು. ಕಳೆದ ತಿಂಗಳಿಂದ ಮಗ ಯಾವುದೇ ಹಣ ಕಳಿಸಿಲ್ಲ. ಕುಟುಂಬ ನಿರ್ವಹಣೆ ತುಂಬಾ ಕಷ್ಟವಾಗಿದೆ ಎಂದು ಮಕಂದರ್ ತಾಯಿ ನೂರ್ ಜಹಾನ್ ಅಳಲು ತೋಡಿಕೊಂಡಿದ್ದಾರೆ.

English summary
A Saudi worker from Karnataka has been detained twice in a matter of 24 hours by police in Saudi Arabia for spreading "misinformation" through a YouTube video, in which he claims to be harassed by his employer. Thirty-five-year-old Abdul Sattar Makandar's family, who live inDandeli (rural) in Uttara Kannada district. This incident shows the pathetic condition of Indian workers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X