ಟರ್ಕಿ ಹಿಂಸಾಚಾರದಲ್ಲಿ ಸಿಲುಕಿದ ಕನ್ನಡಿಗ ಕುಸ್ತಿಪಟು

Written By:
Subscribe to Oneindia Kannada

ಅಂಕಾರ, ಜುಲೈ 16 : ಟರ್ಕಿಯಲ್ಲಿ ಎದ್ದಿರುವ ಹಿಂಸಾಚಾರದಲ್ಲಿ ಸಿಲುಕಿದ್ದ ಕನ್ನಡಗ ಕುಸ್ತಿಪಟು ಸುರಕ್ಷಿತವಾಗಿದ್ದಾರೆ. ದಾವಣಗೆರೆಯ ಕುಸ್ತಿಪಟು ಅರ್ಜುನ್ ಟರ್ಕಿಯ ಹಿಂಸಾಚಾರದಲ್ಲಿ ಸಿಲುಕಿದ್ದರು.

ವಿಶ್ವ ಕುಸ್ತಿ ಪಂದ್ಯಾವಳಿಯಲ್ಲಿ ಭಾಗವಹಿಸಲು ತೆರಳಿದ್ದ ಅರ್ಜುನ್ ರಾತ್ರಿ ದಿಢೀರನೇ ಉಂಟಾದ ಹಿಂಸಾಚಾರದಲ್ಲಿ ಸಿಲುಕಿದ್ದರು. ತಮ್ಮ ಕೋಚ್ ಶಿವಾನಂದ್ ಗೆ ಹಿಂಸಾಚಾರದಲ್ಲಿ ಸಿಕ್ಕಿಹಾಕಿಕೊಂಡಿರುವ ಬಗ್ಗೆ ರಾತ್ರಿ 1.30 ವೇಳೆ ಫೋನ್ ಮಾಡಿ ಅರ್ಜುನ್ ತಿಳಿಸಿದ್ದರು.(ದಾಳಿ ಕೋರರನ್ನು ಹಿಮ್ಮೆಟ್ಟಿಸಿದ ಸೇನೆ)

arjun

ದಾವಣಗೆರೆಯ 18 ವರ್ಷದ ಅರ್ಜುನ್ 19 ವರ್ಷದೊಳಗಿನ ವಿಶ್ವ ಕುಸ್ತಿ ಪಂದ್ಯಾವಳಿಯಲ್ಲಿ ಭಾಗವಹಿಸಲು ಟರ್ಕಿಗೆ ಹೋಗಿದ್ದರು. ಕಳೆದ ವಾರ ಪ್ರಯಾಣ ಬೆಳೆಸಿದ್ದ ಇವರು, ವಿಶ್ವ ಕುಸ್ತಿ ಪಂದ್ಯಾವಳಿ 19 ವರ್ಷದೊಳಗಿನ ಪಂದ್ಯಾವಳಿಯಲ್ಲಿ ಬೆಳ್ಳಿ ಪದಕವನ್ನು ಸಹ ಗಳಿಸಿದ್ದಾರೆ. ನಿಗದಿಯಂತೆ ಶನಿವಾರ ರಾತ್ರಿ ಅರ್ಜುನ್ ಭಾರತಕ್ಕೆ ಹಿಂದಿರುಗಬೇಕಾಗಿತ್ತು.

ಬಾಗಲಕೋಟೆ ಜಿಲ್ಲೆಯ ಅರ್ಜುನ್ ಕಳೆದ 5 ವರ್ಷಗಳಿಂದ ಯುವಜನ ಮತ್ತು ಕ್ರೀಡಾ ಇಲಾಖೆಯ ಕುಸ್ತಿ ಹಾಸ್ಟೆಲ್ ನಲ್ಲಿ ಕುಸ್ತಿ ಅಧ್ಯಯನ ಮಾಡುತ್ತಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A Kannadiga Wrestler Arjun from Davanagere Struck in Turkey violence on July 15 mid night. The central government opened a help line for Indian citizens.
Please Wait while comments are loading...