ಲಂಡನ್ ಕೌನ್ಸಿಲ್ ಚುನಾವಣೆಯಲ್ಲಿ ಕನ್ನಡಿಗನಿಗೆ ಜಯ
ಲಂಡನ್, ಮೇ 5: ಇಂಗ್ಲೆಂಡ್ ನ ವೆಸ್ಟ್ ಸ್ವಿಂಡನ್ ಕೌನ್ಸಿಲ್ ಚುನಾವಣೆಯಲ್ಲಿ ಕನ್ನಡಿಗ ಸುರೇಶ್ ಗಟ್ಟಾಪುರ ಜಯ ಗಳಿಸಿದ್ದಾರೆ. ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಅವರು, ಗೆಲವು ದಾಖಲಿಸಿದ್ದಾರೆ.
ಈ ಹಿಂದೆ ನೀರಜ್ ಪಾಟೀಲ್ ಎಂಬುವರು ಜನಪ್ರತಿನಿಧಿಯಾಗಿ ಆಯ್ಕೆಯಾದ ನಂತರ, ಮತ್ತೊಬ್ಬ ಕನ್ನಡಿಗ ಈ ಸಾಧನೆ ಮಾಡಿದಂತಾಗಿದೆ.

ಚಿಕ್ಕಬಳ್ಳಾಪುರದ ಕೊಂಡೇನಹಳ್ಳಿಯವರಾದ ಸುರೇಶ್, ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದು, ಸುಮಾರು 12 ವರ್ಷಗಳಿಂದ ಲಂಡನ್ ನಲ್ಲೇ ನೆಲೆಸಿದ್ದರು.
ವೆಸ್ಟ್ ಸ್ವಿಂಡನ್ ಕೌನ್ಸಿಲ್ ಚುನಾವಣೆಯಲ್ಲಿ ವೆಸ್ಟ್ ಲೀ ವಾರ್ಡ್ ನಲ್ಲಿ ಕರ್ನರ್ವೇಟಿವ್ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು.
(ಚಿತ್ರ ಕೃಪೆ: ಸುರೇಶ್ ಅವರ ಫೇಸ್ ಬುಕ್ ಅಕೌಂಟ್)












Click it and Unblock the Notifications