ವಲಸಿಗರು VS ಡೊನಾಲ್ಡ್ ಟ್ರಂಪ್: ಹೊಸ ಅಸ್ತ್ರಕ್ಕೆ ಮುಂದಾದ ಕಮಲಾ ಹ್ಯಾರಿಸ್?
ಡೊನಾಲ್ಡ್ ಟ್ರಂಪ್ 2024ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಅಗ್ನಿ ಪರೀಕ್ಷೆ ಗೆಲ್ಲಬೇಕು ಅಂತಾ ಪಣತೊಟ್ಟಿದ್ದಾರೆ. ಈ ಮೂಲಕ 2ನೇ ಬಾರಿಗೆ ಅಮೆರಿಕದ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಆಯ್ಕೆ ಆಗುವ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಆದರೆ, ಡೊನಾಲ್ಡ್ ಟ್ರಂಪ್ ಅವರೇ ನೀಡಿದ್ದ ಹೇಳಿಕೆಗಳನ್ನ ಅವರ ವಿರುದ್ಧವೇ ಅಸ್ತ್ರ ಮಾಡಿಕೊಳ್ಳಲು ಇದೀಗ ಭಾರತ ಮೂಲದ ನಂಟು ಹೊಂದಿರುವ ಕಮಲಾ ಹ್ಯಾರಿಸ್ ಮುಂದಾಗಿದ್ದಾರೆ. ಹಾಗಾದ್ರೆ ಏನಿದು, ವಲಸಿಗರು VS ಡೊನಾಲ್ಡ್ ಟ್ರಂಪ್ ಅಸ್ತ್ರ? ಬನ್ನಿ ತಿಳಿಯೋಣ.
ಡೊನಾಲ್ಡ್ ಟ್ರಂಪ್ ಈಗಾಗಲೇ 2016 ರಲ್ಲಿ ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ನಡೆಸಿದ್ದಾರೆ. ಆದರೆ ತಮ್ಮ ಆಡಳಿತ ಅವಧಿಯಲ್ಲಿ ಡೊನಾಲ್ಡ್ ಟ್ರಂಪ್ ಸಿಕ್ಕಾಪಟ್ಟೆ ಕಾಂಟ್ರವರ್ಸಿ ಮಾಡಿ ಅಮೆರಿಕದ ಪ್ರಜೆಗಳ ಕೆಂಗಣ್ಣಿಗೆ ಕೂಡ ಗುರಿಯಾಗಿದ್ದರು. ಅದರಲ್ಲೂ ಕ್ರೂರಿ 'ಕೊರೊನಾ' ಅಪ್ಪಳಿಸಿದ್ದ ಸಮಯದಲ್ಲಿ ಡೊನಾಲ್ಡ್ ಟ್ರಂಪ್ ನಡೆದುಕೊಂಡ ರೀತಿಗೆ ಇಡೀ ಜಗತ್ತಿನಾದ್ಯಂತ ಆಕ್ರೋಶ ಮೊಳಗಿತ್ತು. ಕೇವಲ ಒಂದು ಮಾಸ್ಕ್ ಹಾಕುವ ವಿಚಾರಕ್ಕೆ ಡೊನಾಲ್ಡ್ ಟ್ರಂಪ್ ಆ ಸಮಯದಲ್ಲಿ ದೊಡ್ಡ ರಂಪ ಮಾಡಿದ್ದರು. ಇಂತಿಪ್ಪ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಅಲ್ಲಿ ಅಧ್ಯಕ್ಷರಾಗಿ ಅಂದ್ರೆ ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾಗುವ ಆಸೆ ಇಟ್ಟುಕೊಂಡಿದ್ದಾರೆ. ಈ ಸಂದರ್ಭದಲ್ಲೇ ಭಾರತ ಮೂಲದ ನಂಟು ಹೊಂದಿರುವ ಕಮಲಾ ಹ್ಯಾರಿಸ್ ಭರ್ಜರಿ ಶಾಕ್ ನೀಡುತ್ತಿದ್ದಾರೆ!

ವಲಸಿಗರು VS ಡೊನಾಲ್ಡ್ ಟ್ರಂಪ್?
ಹೌದು, ಡೊನಾಲ್ಡ್ ಟ್ರಂಪ್ ಅವರು ವಲಸಿಗರ ಬಗ್ಗೆ ನೀಡಿದ್ದ ಹೇಳಿಕೆಗಳನ್ನೇ ಈಗ ಮುಂದೆ ಅಸ್ತ್ರವಾಗಿ ಇಟ್ಟುಕೊಂಡು ಹೋರಾಡಲು ಕಮಲಾ ಹ್ಯಾರಿಸ್ ಚುನಾವಣಾ ತಂತ್ರ ಹೆಣೆದಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಅಲ್ಲದೆ, ಆಫ್ರಿಕನ್ & ಅಮೆರಿಕನ್ಸ್ ಹಾಗೂ ಇಂಡಿಯನ್ & ಅಮೆರಿಕನ್ಸ್ ಕೂಡ ಟ್ರಂಪ್ ಅವರು ನೀಡಿರುವ ಇಂತಹ ಹೇಳಿಕೆಗಳ ಬಗ್ಗೆ ತೀವ್ರ ಆಕ್ರೋಶ ಹೊರ ಹಾಕಿದ್ದರು.
ಟ್ರಂಪ್ ವಿವಾದಾತ್ಮಕ ಹೇಳಿಕೆ ನೀಡಿದ ಸಮಯದಲ್ಲೇ, ಚುನಾವಣಾ ಅಸ್ತ್ರವಾಗಿ ಕೂಡ ಟ್ರಂಪ್ ನೀಡಿದ್ದ ಎಡವಟ್ಟು ಹೇಳಿಕೆಗಳು ಬಳಕೆ ಆಗುತ್ತಿವೆಯಾ? ಎಂಬ ಪ್ರಶ್ನೆ ಮೂಡಿದೆ. ಈಗಾಗಲೇ, ಡೊನಾಲ್ಡ್ ಟ್ರಂಪ್ ಅವರಿಗೆ ಅಮೆರಿಕ ಅಧ್ಯಕ್ಷಿಯ ಚುನಾವಣೆಯಲ್ಲಿ ಸಾಕಷ್ಟು ಹಿನ್ನಡೆ ಆಗಿದೆ. ಅಮೆರಿಕ ಅಧ್ಯಕ್ಷೀಯ ಚುನಾವಣಾ ಸಮೀಕ್ಷೆಗಳು ಡೊನಾಲ್ಡ್ ಟ್ರಂಪ್ ಹಿಂದೆ ಉಳಿದಿದ್ದಾರೆ ಎನ್ನುತ್ತಿವೆ. ಹೀಗಾಗಿ ಕುತೂಹಲ ಮತ್ತಷ್ಟು ಹೆಚ್ಚಾಗುತ್ತಿದೆ.
ಕಮಲಾ ಮೊದಲ ಮಹಿಳಾ ಅಧ್ಯಕ್ಷೆ?
ಒಟ್ನಲ್ಲಿ ಭಾರತ ಮೂಲದ ಕಮಲಾ ಹ್ಯಾರಿಸ್ ಗೆದ್ದು ಬೀಗುವುದು ಬಹುತೇಕ ಫಿಕ್ಸ್ ಅಂತಾ ಹೇಳಲಾಗುತ್ತಿದೆ. ಹೀಗಾಗಿ ಅಮೆರಿಕದಲ್ಲಿ ಈಗ ಭಾರತೀಯರು ಈ ವಿಚಾರದಲ್ಲಿ ಒಗ್ಗಟ್ಟನ್ನು ಪ್ರದರ್ಶನ ಮಾಡುತ್ತಿದ್ದಾರೆ. ಮತ್ತೊಂದು ಕಡೆ ಕಮಲಾ ಹ್ಯಾರಿಸ್ ಅವರು ಈ ಚುನಾವಣೆಗೆ ಗೆಲುವಿನ ಉಡುಗೊರೆ ಪಡೆದರೆ, ಹೊಸ ಇತಿಹಾಸ ನಿರ್ಮಾಣ ಮಾಡಲಿದ್ದಾರೆ. ಯಾಕಂದ್ರೆ ಅಮೆರಿಕದ ಇತಿಹಾಸದಲ್ಲೇ ಈವರೆಗೆ ಯಾವುದೇ ಒಬ್ಬ ಮಹಿಳೆ ಅಧ್ಯಕ್ಷರಾಗಿ ಆಯ್ಕೆಯಾಗಿಲ್ಲ.












Click it and Unblock the Notifications