ಡೊನಾಲ್ಡ್ ಟ್ರಂಪ್ ಸೋಲಿಸಲು ಅಮೆರಿಕ ಮತದಾರರು ನಿರ್ಧರಿಸಿದ್ದಾರೆ: ಕಮಲಾ ಹ್ಯಾರಿಸ್

ಕಮಲಾ ಹ್ಯಾರಿಸ್ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ತಮ್ಮ ಎದುರಾಳಿ ಡೊನಾಲ್ಡ್ ಟ್ರಂಪ್ ವಿರುದ್ಧ ಹೊಸ ಹೊಸ ಅಸ್ತ್ರ ಪ್ರಯೋಗ ಮಾಡುತ್ತಿದ್ದಾರೆ. ಅದರಲ್ಲೂ ಅಮೆರಿಕದ ಮಾಜಿ ಅಧ್ಯಕ್ಷರೂ ಆಗಿರುವ, ಹಾಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಈ ಚುನಾವಣೆಯಲ್ಲಿ ಸಾಕಷ್ಟು ಹಿನ್ನಡೆ ಅನುಭವಿಸುತ್ತಿದ್ದಾರೆ. ಇದನ್ನೇ ಅಸ್ತ್ರ ಮಾಡಿಕೊಂಡು, ಡೊನಾಲ್ಡ್ ಟ್ರಂಪ್ ನೀಡಿರುವ ವಿವಾದಾತ್ಮಕ ಹೇಳಿಕೆಗಳನ್ನೇ ಮುಂದಿಟ್ಟುಕೊಂಡು ಇದೀಗ ಕಮಲಾ ಹ್ಯಾರಿಸ್ ಏನ್ ಹೇಳಿದ್ದಾರೆ ಗೊತ್ತಾ?

ಡೊನಾಲ್ಡ್ ಟ್ರಂಪ್ ಬಾಯಿಗೆ ಬಂದ ರೀತಿ ಮಾತನಾಡಿ, ಕಿರಿಕ್ ಮಾಡಿಕೊಂಡು ಅಮೆರಿಕ ಅಧ್ಯಕ್ಷೀಯ ಚುನಾವಣೆ ಅಖಾಡದಲ್ಲಿ ಹಿಂದೆ ಉಳಿಯುತ್ತಿದ್ದಾರೆ ಎಂಬ ಆರೋಪವು ಇದೆ. ಹೀಗಿದ್ದಾಗ ಕಮಲಾ ಹ್ಯಾರಿಸ್ ಅವರು ಅಲರ್ಟ್ ಆಗಿದ್ದು, ಡೊನಾಲ್ಡ್ ಟ್ರಂಪ್ ಮಾಡುವ ತಪ್ಪುಗಳನ್ನೇ ತಮ್ಮ ಗೆಲುವಿಗೆ ಮೆಟ್ಟಿಲು ಮಾಡಿಕೊಳ್ಳುತ್ತಿದ್ದಾರೆ. ಅದೇ ರೀತಿ ಈಗ ಕೂಡ, ಟ್ರಂಪ್ ವಿರುದ್ಧ ಒಂದು ಅಸ್ತ್ರ ಪ್ರಯೋಗಿಸಿದ್ದಾರೆ ಕಮಲಾ ಹ್ಯಾರಿಸ್. ಡೊನಾಲ್ಡ್‌ ಟ್ರಂಪ್‌ ಅಮೆರಿಕವನ್ನ ವಿಭಜಿಸುವ ತಂತ್ರ ಮುಂದೆ ಇಟ್ಟುಕೊಂಡು ಮತ ಕೇಳುತ್ತಿದ್ದಾರೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ ಟ್ರಂಪ್ ಎದುರಾಳಿ & ಭಾರತ ಮೂಲದ ಕಮಲಾ ಹ್ಯಾರಿಸ್!

Kamala Harris Said That American Voters Decided To Defeat The Donald Trump In Presidential Election

ಸೋಲಿನ ಸುಳಿಯಲ್ಲಿ ಡೊನಾಲ್ಡ್ ಟ್ರಂಪ್?

ಡೊನಾಲ್ಡ್ ಟ್ರಂಪ್ ಪದೇ ಪದೇ ಕಮಲಾ ಹ್ಯಾರಿಸ್ ಅವರ ಸೌಂದರ್ಯ ಮತ್ತು ಜನಾಂಗೀಯ ಹಿನ್ನೆಲೆ ಬಗ್ಗೆ ಚರ್ಚೆ ಮಾಡುತ್ತಾರೆ ಎಂಬ ಆರೋಪ ಇದೆ. ಬಹಿರಂಗವಾಗಿ ಕೂಡ ಈ ಬಗ್ಗೆ ಚರ್ಚೆಗಳು ನಡೆದಿವೆ. ಹೀಗಿದ್ದಾಗಲೇ ಡೊನಾಲ್ಡ್‌ ಟ್ರಂಪ್‌ ಅಮೆರಿಕವನ್ನ ವಿಭಜಿಸುವ ಪ್ಲಾನ್ ಮೂಲಕ ಚುನಾವಣೆ ಗೆಲ್ಲುವುದಕ್ಕೆ ಮುಂದಾಗಿದ್ದಾರೆ ಎಂದು ಆರೋಪ ಮಾಡಿದ್ದಾರೆ ಕಮಲಾ ಹ್ಯಾರಿಸ್. ಅಲ್ಲದೆ ಈ ಕಾರಣಕ್ಕೆ ಇದೀಗ ಅಮೆರಿಕದ ಜನರು ಟ್ರಂಪ್ ಸೋಲಿಸಲು ನಿರ್ಧಾರ ಮಾಡಿದ್ದಾರೆ ಎಂದು ಘೋಷಿಸಿದ್ದಾರೆ ಕಮಲಾ ಹ್ಯಾರಿಸ್. ಈ ವಿಚಾರ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಹಾಗೇ ಮೊದಲೇ ಸೋಲಿನ ಸುಳಿಗೆ ಸಿಲುಕಿರುವ ಟ್ರಂಪ್‌ಗೆ ಮತ್ತೆ ಮತ್ತೆ ಆಘಾತ ಸಿಗುತ್ತಿದೆ.

ಟ್ರಂಪ್ ವಿರುದ್ಧ ಕಮಲಾ ಅಸ್ತ್ರ

ಕಮಲಾ ಹ್ಯಾರಿಸ್ ಅಮೆರಿಕದ ಹಾಲಿ ಉಪಾಧ್ಯಕ್ಷರಾಗಿದ್ದು, 59 ವರ್ಷದ ಕಮಲಾ ಹ್ಯಾರಿಸ್‌ಗೆ ಈ ಬಾರಿ ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾಗುವ ಅವಕಾಶ ಸಿಕ್ಕಂತಾಗಿದೆ. ಜೋ ಬೈಡನ್ ಖುದ್ದು ಚುನಾವಣೆ ಕಣದಿಂದ ಹಿಂದೆ ಸರಿದು ಕಮಲಾ ಹ್ಯಾರಿಸ್ ಅವರಿಗೆ ಅವಕಾಶ ಮಾಡಿ ಕೊಟ್ಟಿದ್ದರು. ಹೀಗಿದ್ದಾಗ ಚುನಾವಣೆ ಪ್ರಚಾರದ ಭಾಗವಾಗಿ ಅಮೆರಿಕದ ಸಿಎನ್‌ಎನ್ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ, ಕಮಲಾ ಹ್ಯಾರಿಸ್ ಡೊನಾಲ್ಡ್ ಟ್ರಂಪ್ ವಿರುದ್ಧ ಭಾರಿ ಗಂಭೀರ ಆರೋಪಗಳನ್ನೇ ಮಾಡಿದ್ದಾರೆ.

ಡೊನಾಲ್ಡ್ ಟ್ರಂಪ್‌ ಗಿಮಿಕ್‌ಗಳನ್ನ ವಿರೋಧಿಸಿ, ಹೊಸ ಆರಂಭಕ್ಕೆ ಅಮೆರಿಕ ದೇಶದ ಮತದಾರ ಪ್ರಭುಗಳು ಸಿದ್ಧರಾಗಿದ್ದಾರೆ. ಹೀಗಿದ್ದರೂ, ಜನಾಂಗೀಯ ಅಸ್ಮಿತೆ ಬಗ್ಗೆ ಮಾತನಾಡ್ತಿರುವ ಟ್ರಂಪ್ ಇದನ್ನ ಚುನಾವಣೆ ತಂತ್ರದ ಭಾಗ ಮಾಡಿಕೊಂಡಿದ್ದಾರೆ ಎಂದು ಇದೀಗ ಕಮಲಾ ಹ್ಯಾರಿಸ್ ಆರೋಪ ಮಾಡಿದ್ದಾರೆ. ಒಟ್ನಲ್ಲಿ ಈ ಮೂಲಕ ಕಮಲಾ ಹ್ಯಾರಿಸ್ ಅವರು ದಿನದಿಂದ ದಿನಕ್ಕೆ ಅಮೆರಿಕ ಅಧ್ಯಕ್ಷೀಯ ಚುನಾವಣೆ ಗೆಲುವಿಗೆ ಹತ್ತಿರ ಆಗುತ್ತಿದ್ದಾರೆ ಎಂದು ಸಮೀಕ್ಷೆಗಳು ಕೂಡ ಹೇಳುತ್ತಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+