ಪವಿತ್ರ ಭೂಮಿಗೆ ಅವಮಾನ ಮಾಡಿದರಾ ಡೊನಾಲ್ಡ್ ಟ್ರಂಪ್? ಕಮಲಾ ಆರೋಪ ಏನು?
ಕಮಲಾ ಹ್ಯಾರಿಸ್ ಮತ್ತು ಡೊನಾಲ್ಡ್ ಟ್ರಂಪ್ ನಡುವೆ ಮಾತಿನ ಮಹಾಯುದ್ಧ ನಿಲ್ಲುತ್ತಿಲ್ಲ. ಅದರಲ್ಲೂ ಯಾವಾಗ ಡೊನಾಲ್ಡ್ ಟ್ರಂಪ್ ಅವರು ಕಮಲಾ ಹ್ಯಾರಿಸ್ ಅವರ ಜನಾಂಗೀಯ ಹಿನ್ನೆಲೆ ಪ್ರಸ್ತಾಪ ಮಾಡಿ ಮಾತನಾಡಿದರೋ, ಆ ಕ್ಷಣದಿಂದಲೇ ಇಬ್ಬರ ನಡುವೆ ಬೆಂಕಿಯೇ ಹೊತ್ತಿಕೊಂಡಂತೆ ಕಾಣುತ್ತಿದೆ. ಅದರಲ್ಲೂ ಇದೀಗ ಕಮಲಾ ಹ್ಯಾರಿಸ್ ಮಾಡಿರುವ ಗಂಭೀರ ಆರೋಪ ಟ್ರಂಪ್ ಅವರ ಎದೆ ನಡುಗುವಂತೆ ಮಾಡಿದೆ. ಹಾಗಾದ್ರೆ ಭಾರತ ಮೂಲದ ನಂಟು ಹೊದಿರುವ ಕಮಲಾ ಹ್ಯಾರಿಸ್ ಮಾಡಿದ ಆರೋಪ ಏನು? ಬನ್ನಿ ತಿಳಿಯೋಣ.
ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ, ಕಮಲಾ ಹ್ಯಾರಿಸ್ ಬರುವ ಮೊದಲು ಒಂದು ಲೆಕ್ಕ & ಕಮಲಾ ಚುನಾವಣೆ ಅಖಾಡಕ್ಕೆ ಎಂಟ್ರಿ ಕೊಟ್ಟ ನಂತರ ಮತ್ತೊಂದು ಲೆಕ್ಕ ಎಂಬಂತಾಗಿದೆ. ಕಮಲಾ ಹ್ಯಾರಿಸ್ ಅಮೆರಿಕದ ಹಾಲಿ ಉಪಾಧ್ಯಕ್ಷರಾಗಿದ್ದು, 59 ವರ್ಷದ ಕಮಲಾ ಹ್ಯಾರಿಸ್‌ಗೆ ಈ ಬಾರಿ ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾಗುವ ಅವಕಾಶ ಸಿಕ್ಕಂತಾಗಿದೆ. ಜೋ ಬೈಡನ್ ಖುದ್ದು ಚುನಾವಣೆ ಕಣದಿಂದ ಹಿಂದೆ ಸರಿದು ಕಮಲಾ ಹ್ಯಾರಿಸ್ ಅವರಿಗೆ ಅವಕಾಶ ಮಾಡಿ ಕೊಟ್ಟಿದ್ದರು. ಹೀಗಾಗಿ ಇದೀಗ ಡೊನಾಲ್ಡ್ ಟ್ರಂಪ್ ವಿರುದ್ಧ ಹೊಸ ಹೊಸ ಅಸ್ತ್ರ ಪ್ರಯೋಗ ಮಾಡುತ್ತಿರುವ ಕಮಲಾ ಹ್ಯಾರಿಸ್, ಮತ್ತೊಂದು ಆರೋಪದ ಬಾಂಬ್ ಸಿಡಿಸಿದ್ದಾರೆ!

ಟ್ರಂಪ್ ಮಾಡಿದ ತಪ್ಪು ಏನು?
ಹೌದು ಇದೀಗ ಕಮಲಾ ಹ್ಯಾರಿಸ್ ಡೊನಾಲ್ಡ್ ಟ್ರಂಪ್ ವಿರುದ್ಧ ಮತ್ತೊಂದು ಗಂಭೀರ ಆರೋಪ ಮಾಡಿದ್ದಾರೆ. ಏನಂದ್ರೆ ಟ್ರಂಪ್ ನಿಯಮ ಉಲ್ಲಂಘಿಸಿ ಅರ್ಲಿಂಗ್‌ಟನ್ ರಾಷ್ಟ್ರೀಯ ಸಮಾಧಿಯ ಫೋಟೋ ತೆಗೆದು & ವಿಡಿಯೋ ಮಾಡಿದ್ದಾರಂತೆ. ಹಾಗೇ ಈ ಮೂಲಕ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಯೋಧರ ಪುಣ್ಯ ಭೂಮಿಯಲ್ಲಿ ಕೂಡ ರಾಜಕೀಯ ಮಾಡುವ ಕೆಲಸ ಆಗುತ್ತಿದೆ ಅಂತ ಆರೋಪಿಸಿದ್ದಾರೆ. ಹೀಗೆ ಅಮೆರಿಕದ ಮಾಜಿ ಅಧ್ಯಕ್ಷ ಹಾಗೂ ಅಮೆರಿಕ ಚುನಾವಣೆಯಲ್ಲಿ ಹಾಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಕೂಡ ಆಗಿರುವ, ಡೊನಾಲ್ಡ್ ಟ್ರಂಪ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ ಕಮಲಾ ಹ್ಯಾರಿಸ್.
As Vice President, I have had the privilege of visiting Arlington National Cemetery several times. It is a solemn place; a place where we come together to honor American heroes who have made the ultimate sacrifice in service of this nation.
— Kamala Harris (@KamalaHarris) August 31, 2024
It is not a place for politics.
And…
ಕಮಲಾ ಹ್ಯಾರಿಸ್ ಪೋಸ್ಟ್ ವೈರಲ್!
ಅಮೆರಿಕ ರಾಷ್ಟ್ರೀಯ ಮಾಧ್ಯಮ ಪ್ರಕಟಿಸಿದ್ದ, ವರದಿ ಆಧಾರದಲ್ಲಿ ಈ ರೀತಿ ಕಮಲಾ ಹ್ಯಾರಿಸ್ ಆರೋಪ ಮಾಡಿದ್ದಾರೆ. ತಮ್ಮದೇ ಟ್ವಿಟ್ಟರ್ ಅಂದ್ರೆ ಈಗಿನ 'ಎಕ್ಸ್' ಅಕೌಂಟ್‌ನಲ್ಲಿ ಈ ಕುರಿತು ಬರೆದುಕೊಂಡಿದ್ದಾರೆ ಕಮಲಾ ಹ್ಯಾರಿಸ್. ತಮ್ಮ ಸುದೀರ್ಘವಾದ ಬರವಣಿಗೆಯಲ್ಲಿ ಡೊನಾಲ್ಡ್ ಟ್ರಂಪ್ ಮಾಡುತ್ತಿರುವುದು ಸರಿಯಾಗಿಲ್ಲ ಎಂದು ಪ್ರತಿಪಾದನೆ ಮಾಡಿದ್ದಾರೆ ಕಮಲಾ ಹ್ಯಾರಿಸ್. ಇದು ಈಗ ವೈರಲ್ ಆಗುತ್ತಿದ್ದು, ಡೊನಾಲ್ಡ್ ಟ್ರಂಪ್ ವಿರುದ್ಧ ಚುನಾವಣೆಯ ಸಮಯದಲ್ಲೇ ದೊಡ್ಡ ಸಮಸ್ಯೆ ಎದುರಾಗಿದೆ!












Click it and Unblock the Notifications