ಅಮೆರಿಕ ಅಧ್ಯಕ್ಷೀಯ ಚುನಾವಣೆಗೂ ಮೊದಲೇ ಕಮಲಾ ಹ್ಯಾರಿಸ್ ಎದುರು ಟ್ರಂಪ್ ಸೋಲು?
ಅಮೆರಿಕ ಚುನಾವಣೆಗೆ ಇನ್ನೇನು ಕೆಲವೇ ಕೆಲವು ದಿನಗಳು ಬಾಕಿ ಉಳಿದಿವೆ. ಹೀಗಾಗಿ ಅತ್ತ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಅಧ್ಯಕ್ಷರಾಗಿ ಆಯ್ಕೆಯಾಗಲು ಹೋರಾಟ ನಡೆಸುತ್ತಿದ್ದರೆ, ಡೊನಾಲ್ಡ್ ಟ್ರಂಪ್ ಮಾಡಿಕೊಳ್ಳುತ್ತಿರುವ ತಪ್ಪುಗಳನ್ನೇ ಅಸ್ತ್ರ ಮಾಡಿಕೊಂಡು ಈಗ ದೊಡ್ಡ ಅಸ್ತ್ರ ರೆಡಿ ಮಾಡಿಕೊಂಡಿದ್ದಾರೆ ಕಮಲಾ ಹ್ಯಾರಿಸ್. ಅದರಲ್ಲೂ ಅಮೆರಿಕ ಚುನಾವಣೆಯಲ್ಲಿ ಸಂಪ್ರದಾಯ ಎಂಬಂತೆ ಸಾಗಿ ಬಂದಿರುವ ಚುನಾವಣೆಯ ಮುಖಾಮುಖಿ ಚರ್ಚೆಯಿಂದಲೇ ಟ್ರಂಪ್ ಹಿಂದೆ ಸರಿದಿದ್ದಾರೆ. ಈ ಮೂಲಕ ಟ್ರಂಪ್ ಅವರು ಕಮಲಾ ಎದುರು ಸೋತರಾ?
ಹೌದು, ಕಮಲಾ ಹ್ಯಾರಿಸ್ ಅವರು ಎಸೆದಿರುವ ಹೊಸ ಅಸ್ತ್ರದ ಪ್ರಕಾರ ಇಂತಹದ್ದೊಂದು ಪ್ರಶ್ನೆ ಇದೀಗ ಶುರುವಾಗಿದೆ. ಕೆಲವು ದಿನಗಳ ಹಿಂದಷ್ಟೇ 1ನೇ ಚುನಾವಣಾ ಚರ್ಚೆ ನಡೆಸಿ, ಮುಕ್ತವಾಗಿ ಮಾತನಾಡಿದ್ದ ಕಮಲಾ ಹ್ಯಾರಿಸ್ & ಡೊನಾಲ್ಡ್ ಟ್ರಂಪ್ ಜಗತ್ತಿನ ಗಮನವನ್ನ ಸೆಳೆದಿದ್ದರು. ಹೀಗೆ ಮೊದಲನೇ ಚುನಾವಣಾ ಚರ್ಚೆಯಲ್ಲಿ ಕಮಲಾ ಹ್ಯಾರಿಸ್ ಗೆದ್ದಿದ್ದಾರೆ, ಆದರೆ ಡೊನಾಲ್ಡ್ ಟ್ರಂಪ್ ಅಂದುಕೊಂಡ ಹಂತದಲ್ಲಿ ಚರ್ಚೆ ನಡೆಸುವಲ್ಲಿ ವಿಫಲವಾದರು ಎಂಬ ಮಾತು ಕೇಳಿಬಂದಿತ್ತು. ಹೀಗಿದ್ದಾಗ 2024ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯ, 2ನೇ ಮುಖಾಮುಖಿ ಚರ್ಚೆಯಿಂದ ಡೊನಾಲ್ಡ್ ಟ್ರಂಪ್ ಎಸ್ಕೇಪ್ ಆಗಿದ್ದಾರಂತೆ!

ಸೋಲು ಒಪ್ಪಿಕೊಂಡ ಡೊನಾಲ್ಡ್ ಟ್ರಂಪ್?
ಕಮಲಾ ಹ್ಯಾರಿಸ್ ಈಗಾಗಲೇ ಒಂದು ಕಡೆ ಅಮೆರಿಕ ಅಧ್ಯಕ್ಷೀಯ ಚುನಾವಣೆ ಅಖಾಡದಲ್ಲಿ ಮುಂದೆ ನುಗ್ಗುತ್ತಿದ್ದಾರೆ. ಇನ್ನೊಂದು ಕಡೆ ಡೊನಾಲ್ಡ್ ಟ್ರಂಪ್ ಭಾರಿ ಹಿನ್ನಡೆ ಕಾಣುತ್ತಿದ್ದು ಇದೇ ರೀತಿ ಪರಿಸ್ಥಿತಿ ಮುಂದುವರಿದರೆ ಟ್ರಂಪ್ ಸೋಲುತ್ತಾರಾ? ಎಂಬ ಭಯ ಕೂಡ ಅವರ ಬೆಂಬಲಿಗರಲ್ಲಿ ಆವರಿಸಿದೆ. ಈ ಸಮಯದಲ್ಲಿ 2ನೇ ಮುಖಾಮುಖಿ ಚರ್ಚೆಯಿಂದ ಡೊನಾಲ್ಡ್ ಟ್ರಂಪ್ ದೂರ ಉಳಿದಿದ್ದು, ಅಮೆರಿಕದ ಚುನಾವಣಾ ಸಂಪ್ರದಾಯವನ್ನೇ ಟ್ರಂಪ್ ಅವರು ಮುರಿದಿದ್ದಾರೆ ಎನ್ನುವ ಆಕ್ರೋಶ ಮೊಳಗಿದೆ. ಇದನ್ನೇ ಈಗ ಕಮಲಾ ಹ್ಯಾರಿಸ್ ಅಸ್ತ್ರವಾಗಿ ಮಾಡಿಕೊಂಡು ಟ್ರಂಪ್ ಅವರಿಗೆ ಬಿಸಿ ಮುಟ್ಟಿಸಿದ್ದಾರೆ.
Our new ad airing during the Georgia-Alabama game tonight pic.twitter.com/4tIdL4h1Ht
— Kamala HQ (@KamalaHQ) September 28, 2024
ಕಮಲಾ ಹ್ಯಾರಿಸ್‌ಗೆ ಗೆಲುವು ಗ್ಯಾರಂಟಿ?
ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಕಮಲಾ ಹ್ಯಾರಿಸ್ ಪರವಾಗಿ ಒಂದು ಜಾಹೀರಾತು ಅಂದ್ರೆ ಆಡ್ ನೀಡಲಾಗಿದೆ. ಇದರಲ್ಲಿ ಡೊನಾಲ್ಡ್ ಟ್ರಂಪ್ ಅವರನ್ನು ನೇರವಾಗಿ ಸೋತವರು ಎಂಬ ರೀತಿ ಬಿಂಬಿಸಲಾಗಿದೆ. ಅಂದ್ರೆ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಎದುರಾಳಿ ಜೊತೆಗೆ ಚರ್ಚೆ ನಡೆಸದೆ ಟ್ರಂಪ್ ಓಡಿ ಹೋಗಿದ್ದಾರೆ, ಈ ಮೂಲಕವೇ ಡೊನಾಲ್ಡ್ ಟ್ರಂಪ್ ಸೋತಿರುವುದು ಗೊತ್ತಾಗುತ್ತಿದೆ. ಡೊನಾಲ್ಡ್ ಟ್ರಂಪ್ ಒಬ್ಬ ಲೂಸರ್ ಅಂದ್ರೆ ಸೋತ ವ್ಯಕ್ತಿ ಎಂಬಂತೆ ಕಮಲಾ ಹ್ಯಾರಿಸ್ ಪರವಾಗಿ ಜಾಹೀರಾತು ಮಾಡಿ ಹಬ್ಬಿಸಲಾಗುತ್ತಿದೆ. ವಿಶಿಷ್ಟವಾದ ಜಾಹೀರಾತು ಇದೀಗ ವೈರಲ್ ಆಗುತ್ತಿದ್ದು, ಸೋಷಿಯಲ್ ಮೀಡಿಯಾದಲ್ಲಿ ಗಮನ ಸೆಳೆದಿದೆ. ಅಲ್ಲದೆ ಮತ್ತೊಂದ್ಕಡೆ, ಕಮಲಾ ಹ್ಯಾರಿಸ್‌ಗೆ ಗೆಲುವು ಗ್ಯಾರಂಟಿ? ಎಂಬ ಪ್ರಶ್ನೆ ಹುಟ್ಟು ಹಾಕಿದೆ.












Click it and Unblock the Notifications