ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕಿಸ್ತಾನ: ಸುಪ್ರೀಂಕೋರ್ಟ್‌ನ ಮೊದಲ ನ್ಯಾಯಮೂರ್ತಿಯಾಗಿ ಆಯೇಷಾ ನೇಮಕ

|
Google Oneindia Kannada News

ಇಸ್ಲಾಮಾಬಾದ್, ಜನವರಿ 25: ಪಾಕಿಸ್ತಾನದ ಇತಿಹಾಸದಲ್ಲಿ ಮೊದಲ ಬಾರಿಗೆ ಮಹಿಳೆಯೊಬ್ಬರು ಸುಪ್ರೀಂ ಕೋರ್ಟ್‌ಗೆ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದಾರೆ. ಇದಕ್ಕೂ ಮೊದಲು ನ್ಯಾಯಮೂರ್ತಿ ಆಯೇಷಾ ಮಲಿಕ್ ಅವರು ಲಾಹೋರ್ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿದ್ದರು.

ಸುಪ್ರೀಂ ಕೋರ್ಟ್‌ಗೆ ಅವರ ನೇಮಕಾತಿ ಹಲವಾರು ತಿಂಗಳುಗಳಿಂದ ವಿಳಂಬವಾಗಿತ್ತು. ಕೆಲವೊಮ್ಮೆ ಬಾರ್ ಕೌನ್ಸಿಲ್ ಮತ್ತು ಕೆಲವೊಮ್ಮೆ ನ್ಯಾಯಾಂಗದ ವಿವಿಧ ಇಲಾಖೆಗಳು ಈ ವಿಷಯದಲ್ಲಿ ಅಡೆತಡೆಗಳನ್ನು ಹಾಕುತ್ತಲೇ ಇದ್ದವು. ಅಂತಿಮವಾಗಿ ಸೋಮವಾರ ಪಾಕಿಸ್ತಾನದ ಮುಖ್ಯ ನ್ಯಾಯಮೂರ್ತಿ ನ್ಯಾಯಮೂರ್ತಿ ಗುಲ್ಜಾರ್ ಅಹ್ಮದ್ ಅವರು ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದರು. ಪ್ರಧಾನಿ ಇಮ್ರಾನ್ ಖಾನ್ ಅವರು ನ್ಯಾಯಮೂರ್ತಿ ಆಯೇಷಾ ಅವರನ್ನು ಅಭಿನಂದಿಸಿದ್ದಾರೆ.

ಪಾಕಿಸ್ತಾನ ಸುಪ್ರೀಂಕೋರ್ಟ್‌ಗೆ ಮೊದಲ ಮಹಿಳಾ ನ್ಯಾಯಮೂರ್ತಿಯಾಗಿ ಆಯಿಷಾ ಮಲಿಕ್ ಆಯ್ಕೆಪಾಕಿಸ್ತಾನ ಸುಪ್ರೀಂಕೋರ್ಟ್‌ಗೆ ಮೊದಲ ಮಹಿಳಾ ನ್ಯಾಯಮೂರ್ತಿಯಾಗಿ ಆಯಿಷಾ ಮಲಿಕ್ ಆಯ್ಕೆ

ನ್ಯಾಯಮೂರ್ತಿ ಮಲಿಕ್ ಅವರು ಹಾರ್ವರ್ಡ್ ವಿಶ್ವವಿದ್ಯಾಲಯದ ಪದವೀಧರರಾಗಿದ್ದು, ಸುಮಾರು 20 ವರ್ಷಗಳ ಕಾಲ ಲಾಹೋರ್ ಹೈಕೋರ್ಟ್‌ನಲ್ಲಿ ನ್ಯಾಯಾಧೀಶರಾಗಿದ್ದರು. ಕಳೆದ ವರ್ಷ ಅವರು ಮಹಿಳೆಯರ ವಿರುದ್ಧ ತಾರತಮ್ಯ ಮಾಡುವ ಕಾನೂನನ್ನು ರದ್ದುಗೊಳಿಸಿದರು.

Justice Ayesha Malik Takes Oath As First Woman Judge Of Pakistans Supreme Court

ಪಾಕಿಸ್ತಾನದಲ್ಲಿ ಮೂಲಭೂತವಾದಿಗಳು ಯಾವಾಗಲೂ ಪ್ರಾಬಲ್ಯ ಹೊಂದಿರುವುದರಿಂದ ಮತ್ತು ಅದರ ಪರಿಣಾಮ ನ್ಯಾಯಾಂಗದ ಮೇಲೂ ಕಂಡುಬರುವುದರಿಂದ ಮಲಿಕ್ ಅವರ ನೇಮಕವೂ ಮುಖ್ಯವಾಗಿದೆ. ಅತ್ಯಾಚಾರ ಮತ್ತು ಲೈಂಗಿಕ ಕಿರುಕುಳದ ಹೆಚ್ಚಿನ ಪ್ರಕರಣಗಳಲ್ಲಿ ಆರೋಪಿಗಳನ್ನು ಖುಲಾಸೆಗೊಳಿಸಲಾಗುತ್ತದೆ. ಕೌಟುಂಬಿಕ ದೌರ್ಜನ್ಯ ಪ್ರಕರಣಗಳಲ್ಲಿ ಮಹಿಳೆಯರಿಗೆ ನ್ಯಾಯ ಸಿಗುವುದು ಶೇ.4ರಷ್ಟು ಪ್ರಕರಣಗಳಲ್ಲಿ ಮಾತ್ರ.

ಹಲವು ಪುರುಷ ನ್ಯಾಯಾಧೀಶರ ಹಿರಿತನವನ್ನು ಕಡೆಗಣಿಸಿ ಅವರನ್ನು ಸುಪ್ರೀಂ ಕೋರ್ಟ್‌ಗೆ ಕರೆತರಲಾಗಿದೆ ಎಂದು ನ್ಯಾಯಮೂರ್ತಿ ಆಯೇಷಾ ಅವರ ವಿರೋಧಿಗಳು ಹೇಳುತ್ತಾರೆ. ಅಚ್ಚರಿ ಎಂದರೆ ಬಾರ್ ಕೌನ್ಸಿಲ್ ಕೂಡ ಅವರೊಂದಿಗಿಲ್ಲ. ಕಳೆದ ತಿಂಗಳು ನ್ಯಾಯಮೂರ್ತಿ ಆಯೇಷಾ ಅವರ ನೇಮಕವನ್ನು ವಿರೋಧಿಸಿ ಬಾರ್ ಕೌನ್ಸಿಲ್ ಎಲ್ಲಾ ನ್ಯಾಯಾಲಯಗಳನ್ನು ಬಂದ್ ಮಾಡಿತ್ತು.

ಅಲ್ಲಿ 16 ಪುರುಷ ನ್ಯಾಯಾಧೀಶರೊಂದಿಗೆ ಕುಳಿತ ಆಯೇಶಾ ಮಲ್ಲಿಕ್​, ನ್ಯಾಯಾಧೀಶರಾಗಿ ಪ್ರಮಾಣವಚನ ಸ್ವೀಕಾರ ಮಾಡಿದರು. ಇದೊಂದು ಮೈಲಿಗಲ್ಲು ಎಂದೇ ಪರಿಗಣಿಸಲಾಗಿದೆ. ವಕೀಲ ಮತ್ತು ಮಹಿಳಾ ಹಕ್ಕುಗಳ ಕಾರ್ಯಕರ್ತರಾದ ನಿಘಾತ್​ ದಾದ್​ ಪ್ರತಿಕ್ರಿಯೆ ನೀಡಿ, ಇದೊಂದು ಮಹತ್ವದ ಹೆಜ್ಜೆ. ಪಾಕಿಸ್ತಾನದ ನ್ಯಾಯಾಂಗ ವಿಭಾಗದಲ್ಲಿ ಒಂದು ಇತಿಹಾಸ ಸೃಷ್ಟಿಯಾದಂತೆ ಆಯಿತು ಎಂದು ಹೇಳಿದ್ದಾರೆ.

ಆಯೇಷಾ ಮಲಿಕ್ ಅವರು ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮಾಡಿದವರು. ಪಾಕಿಸ್ತಾನದ ಪೂರ್ವ ನಗರವಾದ ಲಾಹೋರ್​​ನ ಹೈಕೋರ್ಟ್​ನಲ್ಲಿ ಕಳೆದ 20 ವರ್ಷಗಳಿಂದ ಜಡ್ಜ್​ ಆಗಿದ್ದರು.

ಅವರನ್ನು ಸುಪ್ರೀಂಕೋರ್ಟ್​ ಜಡ್ಜ್​ ಆಗಿ ನೇಮಕ ಮಾಡುವುದಕ್ಕೆ ಪಾಕಿಸ್ತಾನ ಅಧ್ಯಕ್ಷ ಆರಿಫ್​ ಅಲ್ವಿ ಜನವರಿ 21ರಂದು ಅನುಮೋದನೆ ನೀಡಿದ್ದರು. ಅದರಂತೆ ಪಾಕಿಸ್ತಾನ ಸುಪ್ರೀಂಕೋರ್ಟ್​ನ ಮೊದಲ ಮಹಿಳಾ ಜಡ್ಜ್​ ಆಗುವ ಹೆಗ್ಗಳಿಕೆ ಆಯೇಶಾರ ಪಾಲಿಗೆ ಸಂದಿದೆ. 2031ರವರೆಗೂ ಅವರು ಸುಪ್ರೀಂಕೋರ್ಟ್​​ನಲ್ಲಿ ಕಾರ್ಯ ನಿರ್ವಹಿಸಬಹುದಾಗಿದೆ. ಅಷ್ಟೇ ಅಲ್ಲ, 2030ರಲ್ಲಿ ಅವರು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಹುದ್ದೆಗೂ ಸ್ಪರ್ಧಿಸಬಹುದಾದ ಅವಕಾಶ ಇದೆ.

ಇವರ ನೇಮಕಾತಿ ಏನೂ ಸುಲಲಿತವಾಗಿ ಆಗಿದ್ದಲ್ಲ. ಆಯೇಶಾರನ್ನು ಸುಪ್ರೀಂಕೋರ್ಟ್​ಗೆ ನೇಮಕ ಮಾಡಲು ಪಾಕಿಸ್ತಾನ ಬಾರ್ ಕೌನ್ಸಿಲ್​ ವಿರೋಧ ವ್ಯಕ್ತಪಡಿಸಿದೆ. ಅಷ್ಟೇ ಅಲ್ಲ, ಪ್ರತಿಭಟನೆಯನ್ನೂ ಮಾಡಿತ್ತು.

ಆಯೇಷಾ ಮಲ್ಲಿಕ್​ ಅವರು ಹುಟ್ಟಿದ್ದು 1966ರಲ್ಲಿ. ಪ್ಯಾರಿಸ್​, ನ್ಯೂಯಾರ್ಕ್​ ಮತ್ತು ಕರಾಚಿಯಲ್ಲಿ ಶಿಕ್ಷಣ ಪಡೆದಿದ್ದಾರೆ. ಪಾಕಿಸ್ತಾನದ ಕಾನೂನು ಕಾಲೇಜಿನಲ್ಲಿಯೇ ಅವರು ಲಾ ಓದಿದ್ದಾರೆ. ನಂತರ ಎಲ್​ಎಲ್​ಎಂ ಪದವಿಯನ್ನು ಹಾರ್ವರ್ಡ್​ ವಿಶ್ವವಿದ್ಯಾಲಯದಲ್ಲಿ ಪಡೆದಿದ್ದಾರೆ. ಪಂಜಾಬ್​ ಪ್ರಾಂತ್ಯದ ಕೋರ್ಟ್​​ನಲ್ಲಿದ್ದಾಗ ಇವರು ಪಿತೃಪ್ರಧಾನ ಕಾನೂನು ನೀತಿಗಳನ್ನು ಹಿಂಪಡೆದು ಸಂಚಲನ ಸೃಷ್ಟಿಸಿದ್ದರು. ಅಷ್ಟೇ ಅಲ್ಲ, ಮಹಿಳೆಯರು ಲೈಂಗಿಕ ಅನುಭವ ಹೊಂದಿದ್ದಾರೆಯೋ ಇಲ್ಲವೋ ಎಂದು ತಿಳಿಯಲು ಬಳಸುವ ವೈದ್ಯಕೀಯ ಪರೀಕ್ಷೆಯನ್ನು ಕಾನೂನುಬಾಹಿರಗೊಳಿಸಿದ್ದರು.

Recommended Video

KL Rahul ನಾಯಕತ್ವದ ಫೇಲ್ಯೂರ್ ಬಗ್ಗೆ Rahul Dravid ಹೇಳಿದ್ದೇನು? | Oneindia Kannada

English summary
Justice Ayesha Malik on Monday took oath as the first woman judge of Pakistan's Supreme Court, in what can be described as a watershed moment in the judicial history of the conservative Muslim-majority country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X