ಕೊಲಂಬಿಯಾ ಅಧ್ಯಕ್ಷ ಜುವಾನ್ ಮ್ಯಾನ್ಯುಯಲ್ ಸ್ಯಾಂಟೋಸ್ ಗೆ ನೊಬೆಲ್ ಶಾಂತಿ

Written By: Ramesh
Subscribe to Oneindia Kannada

ಒಸ್ಲೊ, ಅಕ್ಟೋಬರ್. 07 : ಕೊಲಂಬಿಯಾದ ಅಧ್ಯಕ್ಷ ಜುವಾನ್ ಮ್ಯಾನ್ಯುಯಲ್ ಸ್ಯಾಂಟೋಸ್ ಅವರು 2016ನೇ ಸಾಲಿನ ನೊಬೆಲ್ ಶಾಂತಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕೊಲಂಬಿಯಾದಲ್ಲಿ ಶಾಂತಿ ನೆಲೆಸಲು ಶ್ರಮಿಸಿದಕ್ಕಾಗಿ ಈ ನೊಬೆಲ್ ಶಾಂತಿ ಪಾರಿತೋಷಕಕ್ಕೆ ಆಯ್ಕೆ ಮಾಡಲಾಗಿದೆ.

ಸೇನೆ ಹಾಗೂ ಎಫ್ ಎಆರ್ ಸಿ ಬಂಡುಕೋರರ ನಡುವೆ ಕೊಲಂಬಿಯಾದಲ್ಲಿ ನಡೆಯುತ್ತಿದ್ದ ಸಂಘರ್ಷಕ್ಕೆ ಕೊನೆಗೊಳಿಸಿ ಶಾಂತಿಗಾಗಿ ಪ್ರಯತ್ನ ಪಟ್ಟಿದ್ದರು. ಹಾಗೂ ಸುಮಾರು ಎರಡೂವರೆ ಲಕ್ಷ ಜನರನ್ನು ಬಲಿ ತೆಗೆದುಕೊಂಡ ಐದು ದಶಕಗಳ ಸಮರವನ್ನು ಅಂತ್ಯಗೊಳಿಸಲು ಕೊಲಂಬಿಯಾ ಶಾಂತಿ ಒಪ್ಪಂದಕ್ಕೆ ಈ ಸ್ಯಾಂಟೋಸ್ ಶ್ರಮಿಸಿದ್ದರು. ಅದರ ಫಲವಾಗಿ ಈ ಪ್ರಶಸ್ತಿ ದಕ್ಕಿದೆ. [ ಮೂವರು ರಸಾಯನಶಾಸ್ತ್ರ ಸಂಶೋಧಕರಿಗೆ ನೊಬೆಲ್!]

Juan Manuel Santos

ಈ ಎಲ್ಲಾ ಅಂಶಗಳನ್ನು ಗಣನೆಗೆ ತೆಗೆದುಕೊಂಡ ನೊಬೆಲ್ ಶಾಂತಿ ಪ್ರಶಸ್ತಿ ಸಮಿತಿಯು, ಕೊಲಂಬಿಯಾದ ಅಧ್ಯಕ್ಷ ಜುವಾನ್ ಮ್ಯಾನ್ಯುಯಲ್ ಸ್ಯಾಂಟೋಸ್ ಅವರನ್ನು 2016ನೇ ಸಾಲಿನ ನೊಬೆಲ್ ಶಾಂತಿ ಪ್ರಶಸ್ತಿಗೆ ಆಯ್ಕೆ ಮಾಡಿದೆ. [ಜೀವಕೋಶಗಳ ಸ್ವಯಂಭಕ್ಷಣೆ ಸಂಶೋಧಕನಿಗೆ ನೊಬೆಲ್!]

2016ನೇ ಸಾಲಿನ ವಿವಿಧ ವಿಭಾಗಗಳಲ್ಲಿ ನೊಬೆಲ್ ಪಾರಿತೋಷಕಕ್ಕೆ ಆಯ್ಕೆಯಾದವರಿಗೆ ಡಿಸೆಂಬರ್ 10 ರಂದು ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Colombian President Juan Manuel Santos was on Friday awarded the Nobel Peace Prize for concluding a historic Peace Agreement with the Revolutionary Armed Forces of Colombia - People's Army (FARC-EP) to bring to an end a 50-year-long civil war in the South American nation.
Please Wait while comments are loading...