ನೀರು ತಂದು ಕೊಟ್ಟು 130 ರೂ ಟಿಪ್ಸ್ ಪಡೆಯುತ್ತಿದ್ದ ಲಾಲಾ ಆದಾಯವೀಗ ಕೋಟಿ ಕೋಟಿ, ಗಳಿಸಿದ್ದು ಹೀಗೆ?

ದುಬೈ ದುಡಿಯಲು ಬಯಸುವ ಜರನ್ನು ಕೈ ಬೀಸಿ ಕರೆಯೋ ದೇಶ. ವೇತನಕ್ಕೆ ತೆರಿಗೆ ಹಾಕಿದಿರುವುದು ಈ ದೇಶದತ್ತ ಜನರು ಆಕರ್ಷಿತರಾಗಲು ಮುಖ್ಯ ಕಾರಣ. ಕಾಸಿಲ್ಲದೇ ಅಬುಧಾಬಿಯಿಂದ ಬಂದ ಯುವತಿಯೊಬ್ಬಳು ಇಲ್ಲಿ ಕೈ ತುಂಬಾ ದುಡಿಯವಂತಾದ ಆಲಿಯಾ ಲಾಲಾ ಯಶೋಗಾಥೆ ಇಲ್ಲಿದೆ. ನಿತ್ಯದ ಅಗತ್ಯವನ್ನು ನೋಡಿಕೊಳ್ಳುವುದಲ್ಲದೇ, ಕೆಲಸ ಹುಡುಕಿಕೊಳ್ಳುವುದೂ ಇವರಿಗೆ ಅಂದು ಕೊಂಡಷ್ಟು ಸುಲುಭವಾಗಿರಲಿಲ್ಲ. ಹೊತ್ತಿನ ಊಟಕ್ಕೂ ಪರದಾಡಬೇಕಿತ್ತು. ಸ್ವಾಭಿಮಾನಿ ಈ ಹೆಣ್ಣಿಗೆ ಕುಟುಂಬದ ಮೇಲೆ ಅವಲಂಬಿತವಾಗೋದು ಸುತರಾಂ ಇಷ್ಟವಿರಲಿಲ್ಲ. ತನ್ನ ಬದುಕಿನ ದಾರಿಯನ್ನು ಕಂಡು ಕೊಂಡು ತನ್ನ ಕಾಲ ಮೇಲೆ ತಾನೇ ನಿಲ್ಲಬೇಕೆಂಬ ಹಠದಿಂದಲೇ ಇಂದು ಕೋಟಿಯೊಡತಿ ಆಗಿದ್ದಾರೆ.

Journey Of Content Creator women Starts Her Work In Dubai From 130 Rupees Now Earning More Than Crore

Journey Of Content Creator ಆಲಿಯಾ ಲಾಲಾ ಮಾಡಿದ್ದೇನು?

ಸಣ್ಣ ಪುಟ್ಟ ಕೆಲಸ ಮಾಡುತ್ತಾ ಜೊತೆಗೆ ಕಂಟೆಂಟ್‌ ಕ್ರಿಯೇಟರ್‌ ಆಗಿ ತನ್ನ ಜರ್ನಿ ಆರಂಭಿಸಿದರು. ಮಾಡೆಲಿಂಗ್ ಮತ್ತು ಫೋಟೋಗ್ರಫಿಯಿಂದ ಕಟೆಂಟ್‌ ಮಾಡುವುದಕ್ಕೆ ಶುರು ಮಾಡಿದ ಇವರು ನಿಧಾನವಾಗಿ ಲೈಫ್‌ಸ್ಟೈಲ್‌ ಕಡೆಗೆ ವಾಲುತ್ತಾರೆ. ಇವತ್ತು ಇಂಟರ್‌ನ್ಯಾಷನಲ್‌ ಬ್ರ್ಯಾಂಡ್‌ಗಳು, ಐಷಾರಾಮಿ ಹೋಟೆಲ್ಸ್ ಮತ್ತು ಪ್ರವಾಸೋದ್ಯಮ ಮಂಡಳಿಗಳೊಂದಿಗೆ ಕೈ ಜೋಡಿಸಿ, ಬ್ರ್ಯಾಂಡ್ ಅಂಬಾಸಡರ್‌ನಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ.

ಈಗ ಲಕ್ಷಾಂತರ ರೂಪಾಯಿಗಳನ್ನು ಸಂಪಾದಿಸುವ ಲಾಲಾ ಆರಂಭಿಕ ಜೀವನ ಮುಳ್ಳಿನ ಹಾಸಿಗೆಯಾಗಿತ್ತು. ಅಬುದಾಬಿಯಿಂದ ದುಬೈಗೆ ಬಂದ ನಂತರ, ಹಣಕ್ಕಾಗಿ ತಮ್ಮ ರೂಮ್‌ಮೇಟ್‌ಗೆ ನೀರು ತಂದು ಕೊಡುವ ಕೆಲಸವನ್ನೂ ಮಾಡಿ, ದಿನಕ್ಕೆ ಸುಮಾರು 5-6 ದಿರ್ಹಮ್‌ ಟಿಪ್ಸ್ ಪಡೆಯುತ್ತಿದ್ದರಂತೆ. ಈ ಹಣದಿಂದ, ಅವರು ಒಂದು ಶವರ್ಮಾ ಕೊಂಡು, ದಿನ ಕಳೆಯುತ್ತಿದ್ದರಂತೆ. ಆದರೆ, ಸುಮಾರು ತಿಂಗಳೊಂದರ ನಂತರ ಸಿಕ್ಕ ಕೆಲಸವೊಂದು ಬದುಕಿತ ಪಥವನ್ನೇ ಬದಲಾಯಿಸಿತು, ಎನ್ನುತ್ತಾರೆ ಲಾಲಾ.

ಮಾಡೆಲಿಂಗ್‌ ಮತ್ತು ಫೋಟೋಗ್ರಫಿ ಕರಿಯರ್‌ :

ಮಾಡೆಲಿಂಗ ಮಾಡೋರುಪೋಟೋಗ್ರಫಿ ಮಾಡೋದು ಕಡಿಮೆ. ಎರಡೂ ವೈರಧ್ಯ ದಿಕ್ಕುಗಳು. ಆದರೆ, ಲಾಲಾ ಎರಡನ್ನೂ ಆರಂಭಿಸಿದ್ದು ವಿಶೇಷ. ಅಷ್ಟೇ ಎರಡರಲ್ಲೂ ಪರಿಣತ್ ಪಡೆದಿದ್ದು ಮತ್ತೂ ವಿಶೇಷ. ಕ್ಯಾಮೆರಾ ಹಿಂದೆ ಹಾಗೂ ಮುಂದೆ ಎರಡೂ ಕಡೆ ಕೆಲಸ ಮಾಡಿ, ತಮ್ಮ ಪ್ರತಿಭೆಯನ್ನು ಜಗತ್ತಿಗೆ ಅನಾವಣರಗೊಳಿಸಿದ್ದಾರೆ. ಅಷ್ಟೇ ಅಲ್ಲ ಈ ಪ್ರತಿಭೆಯಿಂದಲೇ ಅವರು ಕಳೆದು ಬಹುತೇಕ ಒಂದೂವರೆ ದಶಕದಲ್ಲಿ ಕಟೆಂಟ್‌ ಕ್ರಿಯೇಟರ್‌ ಜಗತ್ತಿನಲ್ಲಿ ಅವರು ಒಂದೊಳ್ಳೆ ಹೆಸರು ಮಾಡಿದ್ದಾರೆ.

ಟ್ರಾವೆಲ್‌ ಕಂಟೆಂಟ್‌ ಮಾಡುವುದಕ್ಕೆ ಆರಂಭ :

ಲಾಲಾ ಅವರು ಸುಮಾರು ಎಂಟು ವರ್ಷಗಳವರೆಗೆ ಎಲ್ಲಿಯೂ ಹೋಗಲೇ ಇಲ್ಲವಂತೆ. ನಂತರ ನಿಧಾನವಾಗಿ ಜಗತ್ತನ್ನು ನೋಡುವ, ವಿಭಿನ್ನ ಸಂಸ್ಕೃತಿಗಳನ್ನು ಅರ್ಥಮಾಡಿಕೊಳ್ಳುವ ಆಸೆ ಅವರ ಮನಸ್ಸಿನಲ್ಲೂ ಮೂಡುತ್ತದೆ. ಹೊಸ ಜನ, ಸಂಸ್ಕೃತಿ, ಆಹಾರ, ಹೊಸ ಅನುಭವಗಳೊಂದಿಗೆ ಟ್ರಾವೆಲ್‌ ಕಂಟೆಂಟ್‌ ಮಾಡಲು ಶುರು ಮಾಡುತ್ತಾರೆ. ಈ ಮೂಲಕ ಪ್ರವಾಸೋದ್ಯಮ ಮಂಡಳಿಗಳು, ಅಂತಾರಾಷ್ಟ್ರೀಯ ಬ್ರ್ಯಾಂಡ್‌ಗಳು ಮತ್ತು ಐಷಾರಾಮಿ ಹೋಟೆಲ್‌ಗಳೊಂದಿಗೆ ಕೈ ಜೋಡಿಸುತ್ತಾರೆ.

ಬೇರೆ ಬೇರೆ ಮೂಲಗಳಿಂದ ಆದಾಯ :

ಎಲ್ಲರೂ ಕಂಟೆಂಚ್ ಕ್ರಿಯೇಟರ್ಸ್ ಮಾಡು ತಪ್ಪೆಂದರೆ ಅದರಲ್ಲಿಯೇ ಮುಳುಗಿ ಬಿಡುತ್ತಾರೆ. ಬೇರೆ ಏನು ಮಾಡಬಹುದೆಂಬುದನ್ನೂ ಯೋಚಿಸುವುದಿಲ್ಲ. ಆದರೆ, ಲಾಲಾ ಬಹುಬೇಗ ಹೇಗೆ ತಮ್ಮ ಆದಾಯ ಹೆಚ್ಚಿಸಿಕೊಳ್ಳುವುದು ಎಂಬ ಬಗ್ಗೆ ಯೋಚಿಸಲು ಶುರು ಮಾಡುತ್ತಾರೆ. ಮೀಡಿಯಾ ಹೌಸ್ ಆರಂಭಿಸುತ್ತಾರೆ. ವಿಭಿನ್ನ ಬ್ರ್ಯಾಂಡ್‌ಗಳು, ಟ್ರಾವೆಲ್‌ ಏಜೆನ್ಸಿ ಜೊತೆ ಸಂಪರ್ಕ ಸಾಧಿಸುತ್ತಾರೆ. ಮಿಡಿಯಾ ಹೌಸ್ ಆರಂಭಿಸಿ ಬೇರೆ ಬೇರೆ ಕಂಪನಿಗಳೊಂದಿಗೆ ಕನೆಕ್ಟ್ ಆಗುತ್ತಾರೆ. ಯುಎಇಯ ರಿಯಲ್ ಎಸ್ಟೇಟ್ ಮತ್ತು ಹಣಕಾಸು ಮಾರುಕಟ್ಟೆಗಳಲ್ಲೂ ಹೂಡಿಕೆ ಮಾಡುತ್ತಾರೆ.

ಸದ್ಯಕ್ಕೆ ಲಾಲಾ ಅವರ ಸರಾಸರಿ ವಾರ್ಷಿಕ ಆದಾಯ ಸುಮಾರು 300,000 ದಿರ್ಹಮ್‌ನಿಂದ 400,000ದವರೆಗೆ ಇದೆ (ಸುಮಾರು 78 ಲಕ್ಷ ರೂ.ನಿಂದ 1 ಕೋಟಿಯವರೆಗೆ). ಬ್ರ್ಯಾಂಡ್‌ಗಳು, ಪ್ರವಾಸೋದ್ಯಮ (tourism) ಮಂಡಳಿಗಳಿಂದ ಪಡೆಯುವ ಕೆಲಸವನ್ನು ಆಧರಿಸಿ ಇದು ಬದಲಾಗುತ್ತದೆ. ಜೊತೆಗೆ ತಮ್ಮ ಮೀಡಿಯಾ ಕಂಪನಿ, ರಿಯಲ್ ಎಸ್ಟೇಟ್ ಮತ್ತು ಹೂಡಿಕೆಗಳಿಂದಲೂ ಆದಾಯವನ್ನು ಗಳಿಸುತ್ತಿದ್ದಾರೆ.

ಹಣ ಮಾಡುವುದೇ ಉದ್ದೇಶವಲ್ಲ, ಸಂಪನ್ಮೂಲ ಸೃಷ್ಟಿಗೆ ಒತ್ತು

ಒಂದು ಕಾಲದಲ್ಲಿ ಶವರ್ಮಾಕ್ಕಾಗಿ ನೀರು ತಂದು ಕೊಡುತ್ತಿದ್ದ ಹುಡುಗಿ ಈಗ ಬಹು ಆದಾಯದ (income) ಮೂಲಗಳನ್ನು ಸೃಷ್ಟಿಸಿಕೊಂಡಿದ್ದಾರೆ. ತನ್ನ ವ್ಯವಹಾರವನ್ನು ವಿಸ್ತರಿಸಿ, ಆಸ್ತಿ ಸಂಪಾದಿಸಿದ್ದಾರೆ. ದುಡಿದದ್ದನ್ನು ಬುದ್ಧಿವಂತಿಕೆಯಿಂದ ಹೂಡಿಕೆ ಮಾಡುವುದು, ತನ್ನ ಕೆಲಸಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಸಿಗುವ ಹಾಗೆ ಬೆಳೆಸುವ ಗುರಿಯೂ ಲಾಲಾಗಿದೆ. ಒಟ್ಟಿನಲ್ಲಿ ಹೆಣ್ಣು ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಬಹುದೆಂಬುದಕ್ಕೆ ಲಾಲಾ ಸಾಕ್ಷಿಯಾಗಿದ್ದಾರೆ. ದುಡ್ಡು ಮಾಡೋದು ಮುಖ್ಯವಲ್ಲ. ಅದನ್ನು ಹೇಗೆ ಬೆಳೆಸಬೇಕು, ಎಲ್ಲಿ ಹೂಡಿಕೆ ಮಾಡಬೇಕೆಂಬ ಪರಿಜ್ಞಾನ ಅಗತ್ಯವೆಂಬುವುದು ಲಾಲಾ ಜೀವನದಿಂದ ಎಲ್ಲರೂ ಕಲೀಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+